Advertisement

ಪಿಡಿಒ, ಎಸ್‌ಎಲ್‌ಆರ್‌ಎಂ ಘಟಕದ ಮೇಲ್ವಿಚಾರಕಿ ವಿರುದ್ಧ ದೂರು

01:02 AM Jun 05, 2022 | Team Udayavani |

ಕಾರ್ಕಳ: ಮುಡಾರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ಎಸ್‌ಎಲ್‌ಆರ್‌ಎಂ ಘಟಕದ ಮೇಲ್ವಿಚಾರಕಿ ವಿರುದ್ಧ ಮುಡಾರು ಗ್ರಾ.ಪಂ. ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಕಸವಿಲೇವಾರಿ ಕೆಲಸ ಮಾಡುತ್ತಿರುವ ಪರನೀರು ದರ್ಖಾಸು ಹೌಸ್‌ ನಿವಾಸಿ ಗಿರಿಜಾ ಎಂಬ ಮಹಿಳೆ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ನಲ್ಲೂರು ಗ್ರಾಮದ ಪ್ರತಿಮಾ, ಸರಿತಾ ಹಾಗೂ ಸುಧೀರ್‌ ಅವರೊಂದಿಗೆ ಸೇರಿ ಮುಡಾರು ಗ್ರಾ.ಪಂ.ಗೆ ಸಂಬಂಧಿಸಿದ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ತಾನು ಕಸ ವಿಲೇವಾರಿ ಕೆಲಸ ಮಾಡಿಕೊಂಡಿದ್ದು, ಕಸ ವಿಲೇವಾರಿ ಕೆಲಸದ ಬಗ್ಗೆ ಮುಡಾರು ಗ್ರಾ.ಪಂ.ನ ಪಿಡಿಒ ರಮೇಶ ಹಾಗೂ ಎಸ್‌ಎಲ್ ಆರ್‌ಎಂ ಘಟಕದ ಮೇಲ್ವಿಚಾರಕಿ ಮಾಧವಿ ವಿನಾ ಕಾರಣ ಅತೃಪ್ತಿ ವ್ಯಕ್ತಪಡಿಸಿ ತನಗೆ ಹಾಗೂ ಸಹೋದ್ಯೋಗಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದನೆ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ.

ಕಳೆದ ಎರಡು ಮೂರು ಸಭೆಗಳಲ್ಲಿ ಸಾರ್ವಜನಿಕರು ಹಾಗೂ ಪಂಚಾಯತ್‌ ಸದಸ್ಯರ ಸಮಕ್ಷಮದಲ್ಲಿ ಉದ್ಯೋಗದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಅವಹೇಳನ ಮಾಡಿದ್ದು ಮೇ 31ರಂದು ಎಸ್‌ಎಲ್‌ಆರ್‌ಎಂ ಘಟಕದ ಮೀಟಿಂಗ್‌ ಕರೆದು ಅಧಿಕಾರಿಗಳಿಬ್ಬರು ಸೇರಿ ನನಗೆ ಹಾಗೂ ಉಳಿದ ಮೂವರಿಗೆ ನೀವು ಸರಿಯಾಗಿ ಕಸ ಮತ್ತು ಗಲೀಜು ವಸ್ತುಗಳನ್ನು ವಿಲೇವಾರಿ ಮಾಡುತ್ತಿಲ್ಲ ಎಂದು ನಿಂದನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ ಮೇರೆಗೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next