Advertisement

‘ಮ್ಯಾಂಗಲೋರ್ ಮುಸ್ಲಿಂ’ಖಾತೆಯ ಪೋಸ್ಟ್ ವಿರುದ್ಧ ಪೊಲೀಸರಿಗೆ ದೂರು: ಕಟ್ಟೆಚ್ಚರ

06:35 PM Feb 21, 2022 | Team Udayavani |

ಮಂಗಳೂರು: ಶಿವಮೊಗ್ಗದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಕೊಲೆ ಮತ್ತು ಆನಂತರ ಅಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪೊಲೀಸರು ಗರಿಷ್ಠ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

Advertisement

ಸೋಮವಾರ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪೊಲೀಸರ ಸಭೆ ನಡೆಸಿ ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ಸಿದ್ಧತೆ ನಡೆಸಲಾಗಿದೆ.

ಇದನ್ನೂ ಓದಿ :ಶಿವಮೊಗ್ಗ ಉದ್ವಿಗ್ನ: ಹರ್ಷ ಶವಯಾತ್ರೆ ವೇಳೆ ಹಿಂಸಾಚಾರ; ವಾಹನಗಳಿಗೆ ಬೆಂಕಿ

ಮ್ಯಾಂಗಲೋರ್ ಮುಸ್ಲಿಂ ಎಂಬ ಸಾಮಾಜಿಕ ತಾಣದ ಖಾತೆಯ ಮೂಲಕ ಹರ್ಷ ಹತ್ಯೆಯ ಕುರಿತು ಪ್ರಚೋದನಾ ಬರಹ ಟ್ರೆಂಡಿಂಗ್ ಆಗುತ್ತಿದ್ದು,  ಇಸ್ಲಾಮ್ ವಿರೋಧಿ ಪೋಸ್ಟ್ ಹಾಕಿದ್ದಕ್ಕಾಗಿ ಹರ್ಷ ವಿರುದ್ಧ ಕ್ರಮಕ್ಕೆ ಪೋಸ್ಟ್ ನಲ್ಲಿ ಆಗ್ರಹಿಸಲಾಗಿತ್ತು. ಹತ್ಯೆಯ ಬಳಿಕ ಸಮರ್ಥನೆ ಮಾಡಿ ಅದೇ ಖಾತೆಯಿಂದ ಪ್ರಚೋದನಾ ಕಾರಿ ಬರಹಗಳು ಪ್ರಕಟವಾದ ಹಿನ್ನಲೆಯಲ್ಲಿ, ಮಂಗಳೂರು ನಗರ ಸಿಇ ಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next