Advertisement
ಆರ್‌ಟಿಐ ಕಾರ್ಯಕರ್ತ ಹನುಮೇಗೌಡ ಅವರು ದೂರು ನೀಡಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರದ ನಂದಿನಿ ಗ್ರಾಮದ ಸರ್ವೇ ನಂ. 31ರಲ್ಲಿ 25 ಎಕ್ರೆ ಕೆರೆ ಇದ್ದು, ಇದು ದಾಖಲೆಗಳಲ್ಲಿ ದೊಡ್ಡಕೆರೆ ಎಂದು ನಮೂದಾಗಿದೆ. ಆದರೆ, ಇದೇ ಗ್ರಾಮದ ಕೆರೆ ಪಕ್ಕದ ಸರ್ವೇ ನಂ. 38ರಲ್ಲಿ ಯಡಿಯೂರಪ್ಪ ಪುತ್ರ ರಾಘವೇಂದ್ರ ಮತ್ತು ವಿಜೇಂದ್ರ ಒಡೆತನದಲ್ಲಿ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯು ಕುಮುದ್ವತಿ ಎಂಬ ಮತ್ತೂಂದು ಕಾಲೇಜು ನಡೆಸುತ್ತಿದೆ. ಆಟದ ಮೈದಾನಕ್ಕಾಗಿ ಈ ಕಾಲೇಜಿನ ಆಡಳಿತ ಮಂಡಳಿಯವರು ಕೆರೆಯ ಐದಕ್ಕೂ ಅಧಿಕ ಎಕ್ರೆ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಕೆರೆಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ ಎಂದು ದೂರಿನಲ್ಲಿ ಹನುಮೇಗೌಡ ಆರೋಪಿಸಿದ್ದಾರೆ. ಈ ಸಂಬಂಧ ಕೆರೆ ಒತ್ತುವರಿ ಮಾಡಿದ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಬಿ.ವೈ. ರಾಘವೇಂದ್ರ, ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ತೇಜಸ್ವಿನಿ, ಖಜಾಂಚಿ ಬಿ.ವೈ. ವಿಜೇಂದ್ರ ಮತ್ತು ಸ್ಥಳೀಯ ರೈತರು ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. Advertisement
ಬಿಎಸ್‌ವೈ ಪುತ್ರ ರಾಘವೇಂದ್ರ ವಿರುದ್ಧ ದೂರು
11:11 AM Oct 18, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.