Advertisement
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ಆಶ್ರಯದ ಜ್ಞಾನಾರ್ಜನ್ ಸಂಸ್ಥೆಯಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ ಉಚಿತ ಬೋಧನ ತರಗತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ತಂತ್ರಜ್ಞಾನ ಯುಗದಲ್ಲಿ ಅದರಲ್ಲೂ ಬಡತನದಲ್ಲೇ ಹುಟ್ಟಿಬೆಳೆದು ಶಿಕ್ಷಣವನ್ನು ಪಡೆಯುವ ಬಡ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ನಂತರ ಮೆಡಿಕಲ್ ಹಾಗೂ ಎಂಜಿನಿಯರ್ ಕೋರ್ಸ್‌ಗಳಿಗೆ ಹೋಗಲು ಸಾಮಾನ್ಯ ಪ್ರವೇಶ ಪರೀಕ್ಷೆ ಎದುರಿಸಬೇಕಿದೆ. ಅದಕ್ಕೆ ಲಕ್ಷಾಂತರ ರೂ. ತೆತ್ತು ಕೋಚಿಂಗ್‌ಗೆ ಹೋಗಬೇಕಾಗಿದೆ.
Related Articles
ಅಭ್ಯಾಸದಲ್ಲಿ ಶ್ರದ್ಧೆ ಇರಲಿ: ಕಾಲೇಜಿನ ಪ್ರಾಂಶುಪಾಲ ಸದಾನಂದ ಮಾತನಾಡಿ, ಜ್ಞಾನಾರ್ಜನ್ ಶೈಕ್ಷಣಿಕ ಯೋಜನೆ ಜ್ಞಾನ, ಪಿಸಿಎಂಬಿ ಬಡ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಉಚಿತ ತರಬೇತಿ ನೀಡುತ್ತಿದ್ದು ವಿದ್ಯಾರ್ಥಿಗಳು ಶ್ರದ್ಧೆªಯಿಂದ ಅಭ್ಯಾಸ ಮಾಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
Advertisement
ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಿ: ಯುವ ಸಾಹಿತಿ ಶ್ರೀನಿವಾಸ ರಾಂಪುರ ಮಾತನಾಡಿ, ಕಾಲೇಜು ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಅದರಲ್ಲೂ ಬಡವರ್ಗದ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲ ಮಾಡಲು ಶೈಕ್ಷಣಿಕೆ ಸೇವೆಯನ್ನು ನೀಡುತ್ತಿರುವ ಜ್ಞಾನಾರ್ಜನ್ ಶೈಕ್ಷಣಿಕ ಸೇವೆ ಅಗಾಧವಾಗಿದೆ. ಇದರ ಸದುಪಯೋಗ ಪ್ರತಿಯೊಬ್ಬ ವಿದ್ಯಾರ್ಥಿಗಳ ಕರ್ತವ್ಯ ಎಂದರು. ಈ ಸಂದರ್ಭದಲ್ಲಿ ಜ್ಞಾನಾರ್ಜನ್ ಸಂಯೋಜಕಿ ಎಚ್.ಜೆ.ಕಾವ್ಯ, ಉಪನ್ಯಾಸಕರಾದ ಅವಿನಾಶ್, ಲೋಹಿತ್. ಆರ್, ಪ್ರತಾಪ್ ಕುಮಾರ್, ಎಂ.ಶಿಕ್ಷಕ ಹರೀಶ್ ಹಾಜರಿದ್ದರು.