Advertisement

ಕನ್ನಡ ಚಿತ್ರಗಳಿಗೆ ಸಖತ್‌ ಸ್ಪರ್ಧೆ; ಪರೀಕ್ಷೆ, ಚುನಾವಣೆ ಬಿಸಿ

04:50 PM Jan 15, 2018 | Team Udayavani |

ಮುಂದಿನ ಮೂರು ತಿಂಗಳುಗಳಲ್ಲಿ ಚಿತ್ರ ಬಿಡುಗಡೆ ಮಾಡಬಾರದು, ಮಾಡಿದರೆ ಜನ ಬರುವುದಿಲ್ಲ ಮತ್ತು ಇದರಿಂದ ಸಾಕಷ್ಟು ನಷ್ಟವಾಗುತ್ತದೆ ಎನ್ನುವುದೆಲ್ಲಾ ಸುಳ್ಳು. ಆದರೆ, ಈ ಮೂರೂ ತಿಂಗಳು ಕನ್ನಡ ಚಿತ್ರರಂಗಕ್ಕೆ ದೊಡ್ಡ ಸವಾಲೆನ್ನುವುದು ಹೌದು. ಪರೀಕ್ಷೆಗಳಿರಲಿ, ಚುನಾವಣೆಯಾಗಲಿ ಅಥವಾ ಕ್ರಿಕೆಟ್‌ ಬರಲಿ … ಅದರಿಂದ ಜನ ಚಿತ್ರ ನೋಡುವುದೇ ಇಲ್ಲ ಅಥವಾ ಚಿತ್ರಮಂದಿರಗಳಿಂದ ದೂರಾಗಿಬಿಡುತ್ತಾರೆ ಎನ್ನುವುದು ತಪ್ಪಾಗುತ್ತದೆ. ಆದರೆ, ಇದೆಲ್ಲದರಿಂದ ಚಿತ್ರಗಳ ಪ್ರರ್ದಶನಕ್ಕೆ ಸ್ವಲ್ಪ ಮಟ್ಟಿಗೆ ಏಟು ಬೀಳುವುದು ಖಂಡಿತ.

Advertisement

ಕನ್ನಡದಲ್ಲಿ ಸಾಲುಸಾಲು ಚಿತ್ರಗಳು ಬಿಡುಗಡೆಗೆ ನಿಂತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ 15 ದಿನಗಳಲ್ಲಿ ಬಿಡುಗಡೆಯಾಗಿರುವುದು ಕೇವಲ ಆರು ಚಿತ್ರಗಳಾದರೂ, ಮುಂದಿನ ದಿನಗಳಲ್ಲಿ ಸಾಕಷ್ಟು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಕ್ಯೂನಲ್ಲಿ ನಿಂತಿವೆ. ಅದರಲ್ಲೂ ಮಾರ್ಚ್‌ ಒಳಗೆ ಚಿತ್ರಗಳನ್ನು ಬಿಡುಗಡೆ ಮಾಡಿಬಿಡಬೇಕೆಂದು ಹಲವು ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರೆ. 

ಅದೇನಾದರೂ ತಪ್ಪಿದರೆ, ಮುಂದಿನ ಮೂರು ತಿಂಗಳುಗಳ ಕಾಲ ಪ್ರೇಕ್ಷಕರ ಅಭಾವ ಕಾಡಬಹುದು ಎಂಬ ಭಯ ಹಲವು ನಿರ್ಮಾಪಕರಲ್ಲಿದೆ.  ಮಾರ್ಚ್‌, ಏಪ್ರಿಲ್‌, ಮೇ ತಿಂಗಳುಗಳು ಬಂದರೆ ಎಲ್ಲಾ ಭಾಷೆಯ ಚಿತ್ರರಂಗಗಳಲ್ಲೂ ಸಣ್ಣ ನಡುಕ ಇದ್ದಿದ್ದೇ. ಅದಕ್ಕೆ ಕಾರಣ ಪರೀಕ್ಷೆಗಳು ಮತ್ತು ಕ್ರಿಕೆಟ್‌. ಈ ಬಾರಿ ಕನ್ನಡ ಚಿತ್ರರಂಗಕ್ಕೆ ಅವೆರಡೂ ಭಯಗಳ ಜೊತೆಗೆ ಇನ್ನೊಂದು ಭಯ ಕೂಡಾ ಸೇರಿದೆ. ಅದೇ ಅಸೆಂಬ್ಲಿ ಚುನಾವಣೆ. 

ಮೇ ತಿಂಗಳಲ್ಲಿ ಕರ್ನಾಟಕದ ಅಸೆಂಬ್ಲಿ ಚುನಾವಣೆಗಳು ನಡೆಯುವುದು ಖಾತ್ರಿಯಾಗಿದೆ. ಹಾಗಾಗಿ ಮಾರ್ಚ್‌, ಏಪ್ರಿಲ್‌ ಮತ್ತು ಮೇ ತಿಂಗಳುಗಳಲ್ಲಿ ಚಿತ್ರ ಬಿಡುಗಡೆ ಮಾಡುವುದು ಸ್ವಲ್ಪ ರಿಸ್ಕಿ ಎಂಬುದು ಎಲ್ಲರಿಗೂ ಅರ್ಥವಾಗುತ್ತಿದೆ. ಅದೇ ಕಾರಣಕ್ಕೆ ಮಾರ್ಚ್‌ ತಿಂಗಳಿಗೂ ಮುನ್ನವೇ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಲೆಕ್ಕಾಚಾರ ನಡೆಯುತ್ತಿದ್ದು, ಅದಕ್ಕೆ ಸೂಕ್ತ  ತಯಾರಿಗಳು ನಡೆಯುತಿವೆ. ಹಾಗೆ ನೋಡಿದರೆ, ಫೆಬ್ರವರಿ ತಿಂಗಳಿನಿಂದಲೇ ಕನ್ನಡ ಚಿತ್ರಗಳಿಗೆ ಸವಾಲು ಶುರುವಾಗಲಿದೆ. 

Advertisement

ಏಕೆಂದರೆ, ಫೆಬ್ರವರಿ 1ರಿಂದ 24ರವರೆಗೂ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಒಂದು ದಿನದ ಮತ್ತು ಟಿ20 ಪಂದ್ಯಗಳು ನಡೆಯಲಿವೆ. ಎರಡು ಘಟಾನುಘಟಿ ತಂಡಗಳು ಎದುರುಬದುರಾಗುತ್ತಿರುವುದರಿಂದ, ಸಹಜವಾಗಿಯೇ ಜನರಿಗೆ ಆ ಕಡೆ ಹೆಚ್ಚು ಗಮನವಿರುತ್ತದೆ. ಇನ್ನು ಮಾರ್ಚ್‌ನಲ್ಲಿ ಪರೀಕ್ಷೆಗಳಿರುವುದರಿಂದ, ಆ ತಿಂಗಳು ಸಹಜವಾಗಿಯೇ ಚಿತ್ರರಂಗದ ಪಾಲಿಗೆ ಸ್ಲಾಗ್‌ ಓವರ್‌ ಎಂದರೆ ತಪ್ಪಿಲ್ಲ. ಆ ತಿಂಗಳಲ್ಲಿ ಬೇರೆ ತರಗತಿಯ ಪರೀಕ್ಷೆಗಳ ಜೊತೆಗೆ ಹತ್ತನೇ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ವಿದ್ಯಾರ್ಥಿಗಳನ್ನು ಮತ್ತು ಅವರ ಹೆತ್ತವರ ನಿದ್ದೆಗೆಡಿಸಿರುತ್ತವೆ. 

ಏಪ್ರಿಲ್‌ ನಾಲ್ಕರಿಂದ, ಮೇ 27ರವರೆಗೆ ಐಪಿಲ್‌ ಕ್ರಿಕೆಟ್‌ ಪಂದ್ಯಾವಳಿಗಳು ನಡೆಯಲಿವೆ. ಈ ಎರಡು ತಿಂಗಳು ಕ್ರಿಕೆಟ್‌ ಪ್ರಿಯರ ಪಾಲಿಗೆ ಹಬ್ಬ ಎಂದರೆ ತಪ್ಪಿಲ್ಲ. ಇನ್ನು ಮೇನಲ್ಲಿ ಚುನಾವಣೆಯ ಸಮಯ. ಈ ಬಾರಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದು, ಜನರ ಗಮನವೆಲ್ಲಾ ಆ ಕಡೆ ಕೇಂದ್ರೀಕೃತವಾಗಿರುವುದರಿಂದ ಚಿತ್ರಗಳ ಕಡೆ ಗಮನ ಸಹಜವಾಗಿಯೇ ಕಡಿಮೆಯಾಗುತ್ತದೆ. ಹಾಗಾಗಿ ಈ ಮೂರು ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡಿದರೆ, ರಿಸ್ಕ್ ಜಾಸ್ತಿ ಎಂಬ ಭಯ ನಿರ್ಮಾಪಕರದ್ದು.

ಹಾಗಂತ ಈ ಮೂರು ತಿಂಗಳುಗಳಲ್ಲಿ ಚಿತ್ರ ಬಿಡುಗಡೆ ಮಾಡಬಾರದು, ಮಾಡಿದರೆ ಜನ ಬರುವುದಿಲ್ಲ ಮತ್ತು ಇದರಿಂದ ಸಾಕಷ್ಟು ನಷ್ಟವಾಗುತ್ತದೆ ಎನ್ನುವುದೆಲ್ಲಾ ಸುಳ್ಳು. ಆದರೆ, ಈ ಮೂರೂ ತಿಂಗಳು ಕನ್ನಡ ಚಿತ್ರರಂಗಕ್ಕೆ ದೊಡ್ಡ ಸವಾಲೆನ್ನು ವುದು ಹೌದು. ಪರೀಕ್ಷೆ ಗಳಿರಲಿ, ಚುನಾವಣೆ ಯಾಗಲಿ ಅಥವಾ ಕ್ರಿಕೆಟ್‌ ಬರಲಿ …ಅದರಿಂದ ಜನ ಚಿತ್ರ ನೋಡುವುದೇ ಇಲ್ಲ ಅಥವಾ ಚಿತ್ರಮಂದಿರಗಳಿಂದ ದೂರಾಗಿಬಿಡುತ್ತಾರೆ ಎನ್ನುವುದು ತಪ್ಪಾಗುತ್ತದೆ. 

ಆದರೆ, ಇದೆಲ್ಲದರಿಂದ ಚಿತ್ರಗಳ ಪ್ರರ್ದಶನಕ್ಕೆ ಸ್ವಲ್ಪ ಮಟ್ಟಿಗೆ ಏಟು ಬೀಳುವುದು ಖಂಡಿತ. ಈ ಹಿಂದಿನ ವರ್ಷಗಳಲ್ಲಿ ಕ್ರಿಕೆಟ್‌ ಸೀಸನ್‌ ಇದ್ದಾಗ, ಪರೀಕ್ಷೆಗಳು ನಡೆಯುತ್ತಿದ್ದಾಗ ಕೆಲವು ಪ್ರದರ್ಶನಗಳು ಖಾಲಿ ಹೊಡೆಯುತ್ತಿವೆ ಎಂದು ನಿರ್ಮಾಪಕರೇ  ಬೇಸರಿಸಿಕೊಂಡಿದ್ದು ಉಂಟು. ಅದರಲ್ಲೂ ಸ್ವಲ್ಪ ನಿರೀಕ್ಷಿತ ಅಥವಾ ಹೆಸರಾಂತ ಕಲಾವಿದರ ಚಿತ್ರಗಳಿಗೆ ಅಷ್ಟೇನೂ ಬಿಸಿ ತಟ್ಟುವುದಿಲ್ಲ. ಹೊಸಬರ, ಹೆಚ್ಚು ಪ್ರಚಾರ ಮಾಡದವರ, ಕೊನೆಯ ಕ್ಷಣದಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಿದವರ ಚಿತ್ರಗಳಿಗೆ ಮಾತ್ರ ಪ್ರೇಕ್ಷಕರ ಅಭಾವ ದೊಡ್ಡ ಮಟ್ಟದಲ್ಲಿ ಕಾಡುವುದು ನಿಜ.

ಹಾಗಂತ ಹಿಂದಿನ ವರ್ಷಗಳಲ್ಲಿ ಈ ತರಹದ ಸಂದರ್ಭಗಳಲ್ಲಿ ಚಿತ್ರ ಬಿಡುಗಡೆ ಮಾಡಿದವರೆಲ್ಲಾ ಸೋತಿಲ್ಲ ಅಥವಾ ನೆಲಕಚ್ಚಿಲ್ಲ. ಈ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಗೆದ್ದ ಚಿತ್ರಗಳ ಉದಾಹರಣೆಗಳೂ ಹಲವು ಇವೆ. ಆದರೆ, ಈ ಬಾರಿ ಕ್ರಿಕೆಟ್‌, ಪರೀಕ್ಷೆ, ಚುನಾವಣೆ ಎಲ್ಲವೂ ಒಂದರಹಿಂದೊಂದು ಬರುತ್ತಿರುವುರಿಂದ, ಚಿತ್ರ ಮಾಡಿ ಮುಗಿಸಿ, ಬಿಡುಗಡೆಗೆ ಎದುರು ನೋಡುತ್ತಿರುವ ಕೆಲವು ನಿರ್ಮಾಪಕರಲ್ಲಾದರೂ ಆತಂಕ ಸೃಷ್ಟಿಸಿದೆ. 

ಹಾಗಾಗಿ ಇನ್ನೊಂದೆರೆಡು ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆಗೆ ಹಲವರು ಬಂದಿದ್ದು, ಒಂದು ಪಕ್ಷ ಸ್ವಲ್ಪ ತಡವಾದರೆ, ಮೇ ನಂತರ ಚಿತ್ರ ಬಿಡುಗಡೆ ಮಾಡುವ ಯೋಚನೆಗೆ ಹಲವರು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.ಹಾಗಂತ ಇಷ್ಟಕ್ಕೇ ಮುಗಿಯುವುದಿಲ್ಲ. ಜೂನ್‌ನಲ್ಲಿ ಶಾಲೆ ಆರಂಭ, ಮಳೆ … ಎಂಬ ಹೊಸ ಸವಾಲುಗಳು ಕನ್ನಡ ಚಿತ್ರಗಳ  ಮುಂದೆ ಹಾಜರಾಗುತ್ತವೆ. ಇಷ್ಟು ವರ್ಷಗಳ ಕಾಲ ಚಿತ್ರರಂಗ ಇವನ್ನೆಲ್ಲಾ ಮೆಟ್ಟಿ ನಿಂತಿವೆ.ಈ ಬಾರಿಯೂ ಅದು ಮುಂದುವರೆಯುತ್ತದೆ ಅಷ್ಟೇ.

Advertisement

Udayavani is now on Telegram. Click here to join our channel and stay updated with the latest news.

Next