Advertisement

ಕೊನೆಗೂ ಮುಗಿದ ಉಮೇದುವಾರಿಕೆ ಪೈಪೋಟಿ

12:40 PM Aug 20, 2018 | Team Udayavani |

ಎಚ್‌.ಡಿ.ಕೋಟೆ: ಇದೇ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಎಚ್‌.ಡಿ.ಕೋಟೆ ಪುರಸಭೆ ಚುನಾವಣೆ ಕಾವೇರುತ್ತಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶನಿವಾರ ಕೊನೆಯಾಯಿತು. ಪ್ರಮುಖ ರಾಜಕೀಯ ಪಕ್ಷಗಳ ಪ್ರಬಲ ಪೈಪೋಟಿಯ ನಡುವೆಯೇ ಹೊಸ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ವಿವಿಧ ವಾರ್ಡ್‌ಗಳಲ್ಲಿ ಸ್ಪರ್ಧಿಸಲು ಒಟ್ಟು 103 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

Advertisement

ಅಂತಿಮ ಪಟ್ಟಿ ಇಂತಿದೆ: ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ 1ನೇ ವಾರ್ಡ್‌ಗೆ ಅಭ್ಯರ್ಥಿಯಾಗಿ ಆಸಿಫ್‌ ಇಕ್ಬಾಲ್‌ (ಕಾಂಗ್ರೆಸ್‌), ಮಹಮ್ಮದ್‌ ಆಸಿಫ್‌ (ಜೆಡಿಎಸ್‌), ಪ್ರವೀಣ್‌ಕುಮಾರ್‌(ಬಿಜೆಪಿ), 2ನೇ ವಾರ್ಡ್‌ಗೆ ರುಕ್ಮಿಣಿ.ಟಿ.ಎಸ್‌(ಕಾಂಗ್ರೆಸ್‌), ಸರೋಜಮ್ಮ(ಜೆಡಿಎಸ್‌), 3ನೇ ವಾರ್ಡ್‌ಗೆ ಸಾಹೀರಾಬಾಬು (ಸಾಮಾನ್ಯ)(ಕಾಂಗ್ರೆಸ್‌), ಜಾಹಿದಾಬೇಗಂ(ಜೆಡಿಎಸ್‌), ಯಮುನಾ(ಬಿಜೆಪಿ), 4ನೇ ವಾರ್ಡ್‌ಗೆ ಎಚ್‌.ಸಿ.ನರಸಿಂಹಮೂರ್ತಿ(ಸಾಮಾನ್ಯ)(ಕಾಂಗ್ರೆಸ್‌), ಮಂಜುಳ(ಬಿಜೆಪಿ), ಎನ್‌.ಗುರುಮಲ್ಲು(ಜೆಡಿಎಸ್‌), 5ನೇ ವಾರ್ಡ್‌ಗೆ ರವೀಂದ್ರ(ಸಾಮಾನ್ಯ)(ಕಾಂಗ್ರೆಸ್‌), ಸಿದ್ದರಾಜು(ಬಿಜೆಪಿ), ನಂಜಪ್ಪ(ಬಿಎಸ್‌ಪಿ), ರಫೀಕ್‌(ಜೆಡಿಎಸ್‌), ಪಾರ್ಥಸಾರ(ಪಕ್ಷೇತರ).

6ನೇ ವಾರ್ಡ್‌ಗೆ ನಂದಿನಿ(ಸಾಮಾನ್ಯ)(ಬಿಜೆಪಿ), ಎಸ್‌.ದಾûಾಯಿಣಿ(ಜೆಡಿಎಸ್‌), ಶಶಿಕಲಾ(ಕಾಂಗ್ರೆಸ್‌), 7ನೇ ವಾರ್ಡ್‌ಗೆ ಪುಟ್ಟಬಸವನಾಯಕ(ಸಾಮಾನ್ಯ)(ಕಾಂಗ್ರೆಸ್‌), ತಿಮ್ಮನಾಯಕ(ಜೆಡಿಎಸ್‌), ಬೀರಪ್ಪ(ಬಿಜೆಪಿ), ದೇವನಾಯಕ(ಪಕ್ಷೇತರ), 8ನೇ ವಾರ್ಡ್‌ಗೆ ದೇವೀರಮ್ಮ(ಎಸ್ಸಿ)(ಬಿಜೆಪಿ), ನಾಗಮ್ಮ (ಕಾಂಗ್ರೆಸ್‌), ಲತಾ(ಜೆಡಿಎಸ್‌),9ನೇ ವಾರ್ಡ್‌ಗೆ ಕೆ.ಸಿ.ರತ್ನಮ್ಮ (ಸಾಮಾನ್ಯ)(ಬಿಜೆಪಿ), ಪ್ರೇಮಕುಮಾರಿ(ಬಿಜೆಪಿ), ಅನಿತಾ(ಜೆಡಿಎಸ್‌), ರಂಜಿತಾ(ಕಾಂಗ್ರೆಸ್‌), 10ನೇ ವಾರ್ಡ್‌ಗೆ ಲೋಕೇಶ್‌.ಜಿ(ಬಿಜೆಪಿ), ಎಸ್‌.ಶ್ರೀನಿವಾಸ(ಕಾಂಗ್ರೆಸ್‌), ನಾಗರಾಜು(ಜೆಡಿಎಸ್‌), ಲಿಲಿತಕುಮಾರ್‌.ಬಿ.ಎಸ್‌(ಪಕ್ಷೇತರ).

11ನೇ ವಾರ್ಡ್‌ಗೆ ಎಂ.ಮಹದೇವಸ್ವಾಮಿ(ಎಸ್ಸಿ)(ಬಿಜೆಪಿ), ಎಚ್‌.ಸಿ.ಶ್ರೀನಿವಾಸ್‌(ಜೆಡಿಎಸ್‌), ವೆಂಕಟೇಶ್‌(ಕಾಂಗ್ರೆಸ್‌), ಶ್ರೀನಿವಾಸ್‌(ಪಕ್ಷೇತರ), ಜಿ.ಡಿ.ರಾಜಗೋಪಾಲ್‌(ಸಮಾಜವಾದಿ), ಸಿದ್ದರಾಮು(ಪಕ್ಷೇತರ), 12ನೇ ವಾರ್ಡ್‌ಗೆ ಜಿ.ನಂದೀಶ್‌(ಬಿಜೆಪಿ), ವಿ.ಶ್ರೀನಿವಾಸ್‌(ಜೆಡಿಎಸ್‌), ಕುಲುಮೆ ರಾಜು(ಕಾಂಗ್ರೆಸ್‌), ವಿಶ್ವಾರಾಧ್ಯ (ಪಕ್ಷೇತರ), ಅಭಿಜಿತ್‌(ಪಕ್ಷೇತರ), 13ನೇ ವಾರ್ಡ್‌ಗೆ ಕೆ.ಪಿ.ಮಂಜುಳ(ಎಸ್ಸಿ) (ಜೆಡಿಎಸ್‌), ಎಂ.ಮಧುಕುಮಾರ್‌(ಕಾಂಗ್ರೆಸ್‌), ರಾಕೇಶ್‌ಶರ್ಮ(ಬಿಜೆಪಿ), ಪ್ರದೀಪ್‌(ಪಕ್ಷೇತರ),14ನೇ ವಾರ್ಡ್‌ಗೆ ಆರ್‌.ಜ್ಯೋತಿ(ಬಿಜೆಪಿ), ತೇಜ(ಜೆಡಿಎಸ್‌), ಎಚ್‌.ಬಿ.ಗೀತಾ(ಕಾಂಗ್ರೆಸ್‌), 15ನೇ ವಾರ್ಡ್‌ಗೆ ಸುಶೀಲಮ್ಮ (ಸಾಮಾನ್ಯ)(ಜೆಡಿಎಸ್‌), ಲಕ್ಷ್ಮಿ(ಕಾಂಗ್ರೆಸ್‌), ಮಂಜುಳಬಾಯಿ(ಬಿಜೆಪಿ), ಕೆ.ಎಲ್‌.ಸುಹಾಸಿನಿ(ಪಕ್ಷೇತರ), ಎಚ್‌.ಎನ್‌.ಕುಸುಮ(ಪಕ್ಷೇತರ). 

16ನೇ ವಾರ್ಡ್‌ಗೆ ನಜ್ಮಾಬಾನು(ಸಾಮಾನ್ಯ)(ಕಾಂಗ್ರೆಸ್‌), ಕೆ.ಎ.ದರ್ಶಿನಿ(ಜೆಡಿಎಸ್‌), ಸರ್ವಮಂಗಳ(ಬಿಜೆಪಿ), ಲಕ್ಷ್ಮಿ(ಪಕ್ಷೇತರ), ಸುಮಾಸಂತೋಷ್‌(ಪಕ್ಷೇತರ), 17ನೇ ವಾರ್ಡ್‌ಗೆ ಭಾಗ್ಯ (ಎಸ್ಸಿ)(ಜೆಡಿಎಸ್‌), ಶಾಂತಮ್ಮ(ಕಾಂಗ್ರೆಸ್‌), ಸುಶೀಲ(ಬಿಜೆಪಿ), ಇಂದ್ರ(ಬಿಎಸ್‌ಪಿ), 18ನೇ ವಾರ್ಡ್‌ಗೆ ಪ್ರೇಮ್‌ಸಾಗರ್‌(ಎಸ್ಸಿ)(ಪಕ್ಷೇತರ), ಕೃಷ್ಣಯ್ಯ(ಜೆಡಿಎಸ್‌), ಪುಟ್ಟರಾಜು(ಕಾಂಗ್ರೆಸ್‌), ಎಸ್‌.ನಾಗರಾಜಯ್ಯ(ಬಿಜೆಪಿ), ಲೋಹಿತ(ಬಿಎಸ್‌ಪಿ), ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ 19ನೇ ವಾರ್ಡ್‌ಗೆ ಡಿ.ಸುರೇಂದ್ರ(ಕಾಂಗ್ರೆಸ್‌), ಎನ್‌.ಬಿ.ಹರೀಶ್‌(ಜೆಡಿಎಸ್‌), ಮರೀಗೌಡ(ಬಿಜೆಪಿ), ವಿನೋದ್‌ರಾವ್‌(ಬಿಜೆಪಿ), ವಿ.ಚನ್ನಕೇಶವಗೌಡ(ಪಕ್ಷೇತರ), ಡಿ.ರಾಮು(ಪಕ್ಷೇತರ), ಧರಣೇಶ್‌(ಪಕ್ಷೇತರ), ಮಕುºಲ್‌ (ಬಿಎಸ್‌ಪಿ). 

Advertisement

20ನೇ ವಾರ್ಡ್‌ಗೆ ಸಿ.ಪಿ.ಕವಿತಾ(ಎಸ್ಸಿ)(ಜೆಡಿಎಸ್‌), ಸುಧಾಮಣಿ(ಕಾಂಗ್ರೆಸ್‌), ಮಹಾದೇವಿ(ಬಿಎಸ್‌ಪಿ), 21ನೇ ವಾರ್ಡ್‌ಗೆ ಕಾಂತರಾಜು9(ಎಸ್ಸಿ)(ಜೆಡಿಎಸ್‌), ಸೋಮಶೇಖರ್‌(ಕಾಂಗ್ರೆಸ್‌), ರಘು(ಬಿಜೆಪಿ), ಎಸ್‌.ಉಮೇಶ(ಪಕ್ಷೇತರ), ಪ.ಪಂಗಡಕ್ಕೆ ಮೀಸಲಾಗಿರುವ 22ನೇ ವಾರ್ಡ್‌ಗೆ ಕೆ.ಕೃಷ್ಣ (ಕಾಂಗ್ರೆಸ್‌), ಲೋಕೇಶ.ಸಿ (ಜೆಡಿಎಸ್‌), ಎಸ್‌.ಚನ್ನನಾಯಕ(ಬಿಜೆಪಿ), ವಿ.ಶ್ರೀನಿವಾಸ(ಪಕ್ಷೇತರ), 23ನೇ ವಾರ್ಡ್‌ಗೆ ಜಯಮ್ಮ(ಎಸ್ಟಿ)(ಕಾಂಗ್ರೆಸ್‌), ಎಂ.ಶಿವಮ್ಮ(ಜೆಡಿಎಸ್‌), ಭಾಗ್ಯ(ಪಕ್ಷೇತರ).

ಆ.31 ರಂದು ನಡೆಯುವ ಪುರಸಭೆ ಚುನಾವಣೆಗೆ ಶನಿವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದರಿಂದ ಬೆಳಿಗ್ಗೆ 10 ಗಂಟೆಯಿಂದ ಆರಂಭವಾದ ನಾಮಪತ್ರ ಸಲ್ಲಿಕೆ 3:30 ಗಂಟೆಗೆ ಕೊನೆಯಾಯಿತು. ಪಟ್ಟಣದ ಮಿನಿವಿಧಾನಸೌಧದಲ್ಲಿ 1 ರಿಂದ 12ನೇ ವಾರ್ಡ್‌ಗಳ ನಾಮಪತ್ರ ಸ್ವೀಕಾರ ನಡೆದರೆ, ಪುರಸಭೆ ಕಛೇರಿಯಲ್ಲಿ 13 ರಿಂದ 23 ವಾರ್ಡ್‌ಗಳ ನಾಮಪತ್ರ ಸಲ್ಲಿಕೆ  ನಡೆಯಿತು.

ಆ.20 ರಂದು ವಿವಿಧ ವಾರ್ಡ್‌ಗಳಿಂದ ಸಲ್ಲಿಕೆಯಾಗಿರುವ ಎಲ್ಲಾ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದ್ದು, ಆ.23 ರ ಗುರುವಾರ ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಆ.31 ರಂದು ನಡೆಯುವ ಚುನಾವಣೆಯ ಮತ ಎಣಿಕೆ ಕಾರ್ಯ ಸೆ.3 ರ ಸೋಮವಾರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next