Advertisement

ಪ್ರತಿ ಕ್ಷೇತ್ರದಲ್ಲೂ ಸ್ಪರ್ಧೆ ಅನಿವಾರ್ಯ

09:56 AM Sep 09, 2017 | |

ಕಲಬುರಗಿ: ತಾಂತ್ರಿಕ ಜಗತ್ತಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಅದಕ್ಕಾಗಿ ವಿದ್ಯಾರ್ಥಿಗಳಷ್ಟೆ ಅಲ್ಲ, ನೌಕರಸ್ಥರು ಹಾಗೂ ವಿವಿಧ ಸ್ತರದ ಜನರು ಸ್ಪರ್ಧೆಗಳಿಗೆ ಮಾನಸಿಕ ತಯಾರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಗುವಿವಿ ಕುಲಪತಿ ಪ್ರೊ| ಎಸ್‌.ಆರ್‌.ನಿರಂಜನ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಸಾಯಿ ಪ್ರಿಸಿಡೆನ್ಸಿ ಪದವಿ ಕಾಲೇಜಿನ ಸ್ವಾಗತ ಹಾಗೂ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯೋಗ ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಉತ್ತಮ ಅಂಕಗಳಷ್ಟೆ ಅಲ್ಲದೆ, ಉತ್ತಮ ದೈಹಿಕ, ಆಂಗಿಕ ಭಾಷೆ ಬೇಕಾಗುತ್ತದೆ.
ಅದನ್ನು ನೋಡಿ ಖಾಸಗಿ ವಲಯದಲ್ಲಿ ನೌಕರಿ ಗಿಟ್ಟಿಸಬಹುದು. ಅದರೊಂದಿಗೆ ಉನ್ನತ ಶಿಕ್ಷಣದಲ್ಲೂ ಸ್ಪರ್ಧೆ ಇದೆ. ಈಗಂತೂ ಪ್ರವೇಶಕ್ಕಾಗಿ ಸಿಇಟಿ, ಟಿಇಟಿ ಇತರೆ ಅರ್ಹತಾ ಪರೀಕ್ಷೆಗಳನ್ನು ಬರೆಯುವುದು ಕಡ್ಡಾಯವೂ ಹಾಗೂ ಅನಿವಾರ್ಯವೂ ಆಗಿದೆ ಎಂದರು.

ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ಸಂದರ್ಭದಲ್ಲಿಯೇ ಕಷ್ಟ ಪಟ್ಟು ಓದಿಕೊಂಡು ಸ್ಪರ್ಧೆಗಳಿಗೆ ಅರ್ಹತೆಯನ್ನು ಹಾಗೂ ಸಾಮರ್ಥ್ಯವನ್ನು ಸಂಪಾದಿಸಿಕೊಳ್ಳಬೇಕು ಎಂದು ಹೇಳಿದರು.

ಶಾಸಕ ದತ್ತಾತ್ರೇಯ ಪಾಟೀಲ ಮಾತನಾಡಿ, ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ಸಿಗುವ
ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಶ್ರಮ ವಹಿಸಬೇಕು ಎಂದರು. ಕಾಲೇಜು ಮಟ್ಟದಲ್ಲಿ ಪದವಿ ಪ್ರದಾನ ಕಾರ್ಯಕ್ರಮ
ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಲ್ಲಿಂದ ಹೊರಬರುವ ಕಾಲೇಜು ವಿದ್ಯಾರ್ಥಿಗಳು ಸಮಾಜದಲ್ಲಿ
ಉತ್ತಮ ಪ್ರಜೆಗಳಾಗಿ ಬಾಳಿ ಎಂದು ಆಶಯ ವ್ಯಕ್ತಪಡಿಸಿದರು. 

Advertisement

ಗುವಿವಿ ಮೌಲ್ಯ ಮಾಪನ ಕುಲಸಚಿವ ಡಾ| ಸಿ.ಎಸ್‌. ಪಾಟೀಲ, ಜಿ.ಪಂ.ಸದಸ್ಯ ದಿಲೀಪ ಆರ್‌. ಪಾಟೀಲ,
ನಾರಾಯಣರಾವ ಕಾಳೆ, ಸಂಗಣ್ಣಗೌಡ ಪೋಲಿಸ್‌ ಪಾಟೀಲ್‌, ನಾಗೇಶ ಕೊಳ್ಳಿ, ಡಾ| ರಮೇಶ ಲಂಡನಕರ್‌, ಶಿವಶರಣಪ್ಪ ಸಿಗರಕಂಟಿ, ಡಾ.ಸಂಗಮೇಶ ಹಿರೇಮಠ, ಪ್ರಶಾಂತ ಅತನೂರ, ತೌಸೀಫ್‌ ಜಿ.ಕೆ., ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next