Advertisement

ವಾರಾಣಸಿಯಲ್ಲಿಯೇ ಸ್ಪರ್ಧೆ

10:59 PM Apr 05, 2019 | Team Udayavani |

ಹೊಸದಿಲ್ಲಿ: ವಾರಾಣಸಿ ಹೊರತುಪಡಿಸಿ ಎರಡನೇ ಕ್ಷೇತ್ರದಲ್ಲಿ ಸ್ಪರ್ಧಿಸುವ ಇರಾದೆ ಇಲ್ಲ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ತಿಳಿಸಿದ್ದಾರೆ. “ಎಬಿಪಿ’ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪಕ್ಷ ತಮ್ಮನ್ನು ವಾರಾಣಸಿಯಿಂದ ಸ್ಪರ್ಧಿಸುವಂತೆ ಸೂಚಿಸಿದೆ. ನಾಮಪತ್ರ ಸಲ್ಲಿಕೆ ಬಗ್ಗೆ ನಾಯಕರ ಜತೆಗೆ ಸಮಾಲೋಚನೆ ಮಾಡಿದ ಬಳಿಕ ಆ ದಿನ ಸಲ್ಲಿಕೆ ಮಾಡುವುದಾಗಿ ತಿಳಿಸಿದ್ದಾರೆ. 2014ರಲ್ಲಿಯೂ ಕೂಡ ಪಕ್ಷದ ನಾಯಕರು ಅಲ್ಲಿಂದಲೇ ಸ್ಪರ್ಧಿಸುವಂತೆ ಸೂಚನೆ ಮಾಡಿದ್ದರಿಂದ ಕಣಕ್ಕೆ ಇಳಿದಿದ್ದೆ ಎಂದು ಹೇಳಿದ್ದಾರೆ. ಈ ಕ್ಷೇತ್ರದ ಸಂಸದರಾಗಿದ್ದ ಮುರಳೀ ಮನೋಹರ ಜೋಶಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಸೋಲು ಅಥವಾ ಗೆಲುವು ಎರಡೂ ಕೂಡ ಜನರ ತೀರ್ಮಾನ ಎಂದಿದ್ದಾರೆ.

Advertisement

ನಮ್ಮ ಕ್ರಮಗಳಿಂದ ಪರಾರಿ: ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ವಂಚಿಸಿ ಪರಾರಿಯಾದ ನೀರವ್‌ ಮೋದಿ, ವಿಜಯ ಮಲ್ಯ, ಮೆಹುಲ್‌ ಚೋಸ್ಕಿ ವಿರುದ್ಧ ನಮ್ಮ ನೇತೃತ್ವದ ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಾರಂಭಿಸಿತು. ಅದರಿಂದ ಅವರು ಪಲಾಯನ ಮಾಡಿದರು ಎಂದಿದ್ದಾರೆ. ಈಗ ಅವರು ಯಾವ ದೇಶದಲ್ಲಿದ್ದಾರೆಯೋ ಅಲ್ಲಿನ ಸರಕಾರಗಳು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಿ, ಜೈಲು ಪಾಲಾಗುವಂತೆ ಮಾಡಿದ್ದೇವೆ ಎಂದಿದ್ದಾರೆ. ಈ ಮೂಲಕ ಸ್ವರ್ಣೋದ್ಯಮಿ ನೀರವ್‌ ಮೋದಿಗೆ ಲಂಡನ್‌ ಕೋರ್ಟ್‌ ಜಾಮೀನು ನಿರಾಕರಿಸಿದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ ಪ್ರಧಾನಿ. ದೇಶದಲ್ಲಿಯೂ ಕೂಡ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದಿದ್ದಾರೆ ಪ್ರಧಾನಿ.

Advertisement

Udayavani is now on Telegram. Click here to join our channel and stay updated with the latest news.

Next