ಘೋಷಣೆ ಮಾಡುವ ಮೂಲಕ ರಾಜ್ಯದ ಜನತೆಯಲ್ಲಿ ಮೂಡಿದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
Advertisement
ಚನ್ನಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಕುಮಾರಪರ್ವ ಸಮಾವೇಶದಲ್ಲಿ ಮಾತನಾಡಿ, ತಾವು ಚನ್ನಪಟ್ಟಣ ಮತ್ತು ರಾಮನಗರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದರು. ಚನ್ನಪಟ್ಟಣದಜನತೆಯ ಅಭಿಮಾನಕ್ಕೆ ತಲೆಬಾಗಿ ತಾವು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದು, ತಮಗೆ ಆಶೀರ್ವಾದ ಮಾಡುವಂತೆ ಕೋರಿದರು.
ಯುಗಾದಿಯಂದು ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ತಾವೇ ಸ್ಪರ್ಧೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೂ ಕ್ಷೇತ್ರದ ಜನತೆಯಲ್ಲಿ ಹಾಗೂ ವಿರೋಧ ಪಕ್ಷದ ನಾಯಕರಲ್ಲಿ ಕುಮಾರಸ್ವಾಮಿ ಅವರು ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಅನುಮಾನಗಳು ಗಾಳಿಸುದ್ದಿಯಂತೆ ಹರಡಿದ್ದವು. ಕುಮಾರಪರ್ವದ ಯಶಸ್ಸಿನ ಹಿನ್ನೆಲೆ ಈ ಭರವಸೆ ನೀಡಿದ್ದಾರೆ ಎಂಬ ಗುಸುಗುಸುಗಳು ಕೇಳಿಬಂದಿದ್ದವು. ಆದರೆ ಇದೀಗ ಎಚ್‌ಡಿಕೆ ಸೇರಿದಂತೆ ಮಾಜಿ ಪ್ರಧಾನಿ ದೇವೇಗೌಡರೂ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದು, ಕ್ಷೇತ್ರದಲ್ಲಿನ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
Related Articles
Advertisement
ಹರ್ಷೋದ್ಘಾರ: ಸತತ ಒಂದು ಗಂಟೆಯ ಭಾಷಣದ ಬಳಿಕ ಕುಮಾರಸ್ವಾಮಿ ಅವರು ಚನ್ನಪಟ್ಟಣದಿಂದ ತಾವು ಸ್ಪರ್ಧೆ ಮಾಡುತ್ತಿದ್ದು, ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಸಮಯದ ಅಭಾವದಿಂದ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರಕ್ಕೆ ಬರುವುದು ಅಪರೂಪವಾಗಬಹುದು. ಈ ಹಿನ್ನೆಲೆಯಲ್ಲಿ ಪ್ರತಿ ಕಾರ್ಯಕರ್ತರೂ ತಾವೇ ಕುಮಾರಸ್ವಾಮಿ ಎಂದು ತಮ್ಮ ಪರ ಮತಯಾಚನೆ ಮಾಡುವಂತೆ ಮನವಿ ಮಾಡಿದರು. ಆಗ ಜನರ ಹರ್ಷೋದ್ಘಾರ ಮಾಡಿದರು.
ಮಂಗಳವಾರ ನಡೆದ ಕುಮಾರ ಪರ್ವ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ಜನಸಾಗರವೇ ಹರಿದು ಬಂದಿತು. ವೇದಿಕೆ ಬಳಿ 50 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರೆ, ಇತ್ತ ಕುಮಾರಸ್ವಾಮಿ ಅವರನ್ನು ತಾಲೂಕಿನ ಕೆಂಗಲ್‌ನಿಂದ ಕರೆತಂದ ಜನಸಾಗರವು ವೇದಿಕೆಗೆ ಬಂದ ಕ್ಷಣ ನಿಜಕ್ಕೂ ಜನಸಾಗರದಲ್ಲೇ ಸಮಾವೇಶ ತುಂಬಿತ್ತು. ಸಮಾವೇಶದಲ್ಲಿಯೂ 70 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು.
6 ಕಿ.ಮೀ. ಮೆರವಣಿಗೆ: ಬೆಳಗ್ಗೆ 11 ಗಂಟೆಗೆ ಆಯೋಜಿಸಿದ್ದ ಸಮಾವೇಶಕ್ಕೆ ತಾಲೂಕಿನ ಕೆಂಗಲ್ ಬಳಿ 12 ಗಂಟೆಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್‌ಡಿ.ಕುಮಾರಸ್ವಾಮಿ ಅವರು ಕೆಂಗಲ್ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ ಬೈಕ್ ರ್ಯಾಲಿಯೊಂದಿಗೆ ಮೆರವಣಿಗೆ ಹೊರಟರು. ಸತತ 6 ಕಿ.ಮೀ. ದೂರದ 4 ಗಂಟೆಗಳ ಮೆರವಣಿಗೆಯ ನಂತರ ಸಂಜೆ 4 ಗಂಟೆಗೆ ವೇದಿಕೆ ಏರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ದುರಾಡಳಿತದಿಂದ ಜನತೆ ಬಳಿಲಿದ್ದಾರೆ. ನನಗೆ ಅನಾರೋಗ್ಯದ ಸಮಸ್ಯೆ ಇದೆ. ವೈದ್ಯರ ಸಲಹೆಗಳನ್ನು ಧಿಕ್ಕರಿಸಿ ನಾನು ರಾಜ್ಯದ ಜನತೆಯ ಹಿತ ಕಾಯಲು ಶ್ರಮಿಸುತ್ತಿದ್ದೇನೆ. ನನಗೆ ಒಂದು ಅವಕಾಶ ನೀಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಆಗ ಅನುಭವದ ಕೊರತೆ ಇತ್ತು ತಾವು 20 ತಿಂಗಳ ಅವಧಿಯ ಮುಖ್ಯಮಂತ್ರಿ ಅಧಿಕಾರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ
ಮಾಡಿದ್ದೇನೆ. ಆದರೂ ಆಗ ನನಗೆ ರಾಜಕೀಯ ರಂಗದ ಅನುಭವ ಇರಲಿಲ್ಲ. ಆದರೆ ಇಂದು ರಾಜಕೀಯ ರಂಗವನ್ನು ಕರಗತ ಮಾಡಿಕೊಂಡಿದ್ದೇನೆ. ಕಳೆದ 11 ವರ್ಷಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳ ತಮ್ಮ ದುರಾಡಳಿತದಿಂದ ರಾಜ್ಯದ ಜನತೆಯ ಜೊತೆಗೆ ಚೆಲ್ಲಾಟ ಆಡಿದ್ದಾರೆ. ಇಂದು ರಾಜ್ಯದ ಜನತೆಗೆ ಒಳಿತು ಮಾಡಲು ಶ್ರಮಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದೇನೆ. ನನಗೆ ರಾಜ್ಯದ ಜನತೆ ಒಮ್ಮೆ ಅವಕಾಶ ನೀಡುವಂತೆ ಕುಮಾರಸ್ವಾಮಿ ಮನವಿ ಮಾಡಿದರು. ಬ್ಯಾರೇಜ್ ದೇವೇಗೌಡರ ಕೊಡುಗೆ ಚನ್ನಪಟ್ಟಣ ತಾಲೂಕಿನ ನೀರಾವರಿ ಭಗೀರಥ ಎಂದು ಸ್ವಯಂಘೋಷಣೆ ಮಾಡಿಕೊಂಡಿರುವ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್‌ರಿಗೆ ತಾಲೂಕಿನ ನಿಜವಾದ ಇತಿಹಾಸ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರು ಇಗ್ಗಲೂರು ಬ್ಯಾರೇಜ್ ನಿರ್ಮಾಣದಲ್ಲಿ ದೇವೇಗೌಡರ ಕೊಡುಗೆ ಏನೂ ಇಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ 1984ರಲ್ಲಿ ಇಗ್ಗಲೂರೂ ಬ್ಯಾರೇಜ್‌ಗೆ ಹೊರ ರೂಪದೊಂದಿಗೆ ಮರುಜೀವ ನೀಡಿದ್ದು ದೇವೇಗೌಡ ಎಂಬುದು ಮರೆಯದ ಇತಿಹಾಸ ಎಂದು ಟಾಂಗ್ ನೀಡಿದರು.