Advertisement

ಈ ಬಾರಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ

06:20 AM Apr 03, 2018 | |

ಮೂಲತಃ ಉಡುಪಿಯ ಪಡುತೋನ್ಸೆಯವರಾದ ಸುಧೀರ ಕಾಂಚನ್‌ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿದವರು. ನಿವೃತ್ತಿಯ ಅನಂತರ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಉದ್ಯೋಗಕ್ಕೆ ಸೇರಿದರು. ರಾಜಕೀಯ ಸೇರುವ ಉದ್ದೇಶಕ್ಕೆ 1983ರಲ್ಲಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ಕ್ರಾಂತಿರಂಗ ಜನತಾಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಸೋತರು. ಅನಂತರ 1989 ಹಾಗೂ 2014ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ಇವರು 1978ರಿಂದ-2000ರ ವರೆಗೆ ಪಡುತೋನ್ಸೆ ಗ್ರಾ.ಪಂ. ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

Advertisement

ಚುನಾವಣೆಗೆ ಸ್ಪರ್ಧಿಸಲು ಕಾರಣ ?
       ರಾಜಕೀಯದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ದೊಡ್ಡ ಮಟ್ಟದಲ್ಲಿತ್ತು. ಹೀಗಾಗಿ ವ್ಯವಸ್ಥೆಯ ವಿರುದ್ಧ ಹೋರಾಟಕ್ಕಾಗಿ ಸರಕಾರಿ ಬ್ಯಾಂಕ್‌ ಉದ್ಯೋಗಕ್ಕೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದೆ.

ಚುನಾವಣೆಯ ಸೋಲಿಗೆ ಕಾರಣ ?
       ಹಣ, ಮೋಸದ ರಾಜಕಾರಣದಿಂದ ಸೋಲಾಯಿತು. ಆದರೂ ನನ್ನ ಎದುರಾಳಿ ಬಸವರಾಜ್‌ ಅವರು ಒಂದು ಸಾವಿರಕ್ಕೂ ಕಡಿಮೆ ಮತದಿಂದ ಡಾ| ಬಿ.ಬಿ. ಶೆಟ್ಟಿಯವರ ವಿರುದ್ಧ ಸೋತಿದ್ದರು. ನಾನು ಐದು ಸಾವಿರ ಮತ ಪಡೆದಿದ್ದೆ. ಹೀಗಾಗಿ ನನ್ನಿಂದ ಬಸವರಾಜ್‌ ಸೋತರು. ಅಂದಿನ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ತೃಪ್ತಿ ಇದೆ.

ಸತತ ಸೋಲಿನ ಅನಂತರವೂ ರಾಜಕೀಯದಲ್ಲಿ ಆಸಕ್ತಿ ಉಳಿದಿದೆಯೇ?
       ಖಂಡಿತವಾಗಿ ಆಸಕ್ತಿ ಇದೆ. ಪ್ರಜಾಪ್ರಭುತ್ವದಲ್ಲಿ ವ್ಯವಸ್ಥೆಯ ವಿರುದ್ಧ ನಿರಂತರ ಹೋರಾಟ ನಡೆಸಲು ಅವಕಾಶವಿದೆ. ಹೀಗಾಗಿ ಹೋರಾಟ ನಿರಂತರ.

ಈ ಬಾರಿ ಸ್ಪರ್ಧೆ ಮಾಡುವಿರಾ?
       ಹೌದು, ಈ ಬಾರಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೇನೆ. ಗ್ರಾಮ ಪಂಚಾಯತ್‌ ಸದಸ್ಯನಾಗಿದ್ದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಜನರ ಮನದಲ್ಲಿವೆ. ಹಾಗೂ ಕ್ಷೇತ್ರದಾದ್ಯಂತ ಹಲವು ಹೋರಾಟಗಳನ್ನು ಮಾಡಿದ್ದೇನೆ. ಹಾಗಾಗಿ ಉಡುಪಿ ಕ್ಷೇತ್ರದ ಜನತೆ ನನ್ನ ಕೈಹಿಡಿಯಲಿದ್ದಾರೆ ಎನ್ನುವ ನಂಬಿಕೆಯಿದೆ. ಈಗಾಗಲೇ ಅನೇಕ ರಾಷ್ಟ್ರೀಯ ಪಕ್ಷಗಳ ಪ್ರಮುಖರು ಸಂಪರ್ಕದಲ್ಲಿದ್ದಾರೆ. ಪಕ್ಷೇತರನಾಗಿ ಸ್ಪರ್ಧಿಸಬೇಕೋ ಅಥವಾ ಯಾವುದಾದರೂ ಪಕ್ಷದ ಮೂಲಕವೇ ಸ್ಪರ್ಧಿಸಬೇಕೋ ಎನ್ನುವ ನಿರ್ಧಾರಕ್ಕೆ ಬಂದಿಲ್ಲ.

Advertisement

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next