Advertisement

PCB; ಭಾರತ ಕ್ರಿಕೆಟ್ ತಂಡ ಪಾಕ್ ಗೆ ಬರಲು ನಿರಾಕರಿಸಿದರೆ ಪರಿಹಾರವನ್ನು ನೀಡಿ

05:17 PM Nov 26, 2023 | Team Udayavani |

ದುಬೈ: ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ರಾಜಕೀಯ ಮತ್ತು ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಭಾರತ ತಂಡ ನಮ್ಮಲ್ಲಿ ಆಡಲು ರಾಕರಿಸಿದರೆ ಪಿಸಿಬಿಗೆ ಪರಿಹಾರ ನೀಡಬೇಕು ಎಂದು ಒಪ್ಪಂದಗಳಿಗೆ ಸಹಿ ಹಾಕುವಂತೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು (ಐಸಿಸಿ) ಒತ್ತಾಯಿಸಿದೆ.

Advertisement

ಐಸಿಸಿ ಪಾಕಿಸ್ಥಾನವನ್ನು ಪಂದ್ಯಾವಳಿಯ ಆತಿಥೇಯ ಎಂದು ಗುರುತಿಸಿದ್ದರೂ, ಜಾಗತಿಕ ಸಂಸ್ಥೆಯು ಅದರೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಪಿಸಿಬಿಯ ಅತ್ಯಂತ ವಿಶ್ವಾಸಾರ್ಹ ಮೂಲವು ಭಾನುವಾರ ಪಿಟಿಐಗೆ ತಿಳಿಸಿದೆ.

2025ರ ಫೆಬ್ರವರಿ-ಮಾರ್ಚ್‌ನಲ್ಲಿ ಪಾಕಿಸ್ಥಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸುವ ಕುರಿತು ಚರ್ಚಿಸಲು ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಮತ್ತು ಸಿಒಒ ಸಲ್ಮಾನ್ ನಾಸೀರ್ ಅವರು ಅಹಮದಾಬಾದ್‌ನಲ್ಲಿ ಐಸಿಸಿ ಕಾರ್ಯಕಾರಿ ಮಂಡಳಿಯನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.

ಬಿಸಿಸಿಐ ಮತ್ತೊಮ್ಮೆ ತನ್ನ ತಂಡವನ್ನು ಪಾಕಿಸ್ಥಾನಕ್ಕೆ ಕಳುಹಿಸಲು ನಿರಾಕರಿಸುವ ಸಂಭವನೀಯತೆಯ ಬಗ್ಗೆ ಪಾಕ್ ಅಧಿಕಾರಿಗಳು ಚರ್ಚಿಸಿದ್ದು, ಯಾವುದೇ ಪರಿಸ್ಥಿತಿಯಲ್ಲಿ ಐಸಿಸಿ ಪಂದ್ಯಾವಳಿಯಲ್ಲಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ” ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next