Advertisement

ಪ್ರವಾಸೋದ್ಯಮ ಅಭಿವೃದ್ಧಿಗೆ ದಿಕ್ಸೂಚಿ ವರದಿ: ಬೊಮ್ಮಾಯಿ

12:46 AM Nov 02, 2019 | mahesh |

ಉಡುಪಿ: ಗೋವಾದಂತೆ ಕರ್ನಾಟಕದಲ್ಲಿಯೂ ಪ್ರವಾಸೋದ್ಯ ಮವನ್ನು ಅಭಿವೃದ್ಧಿ ಪಡಿಸಲು ಕಾರ್ಯಪಡೆ ರಚಿಸಿದ್ದು, ಇನ್ನೆರಡು ತಿಂಗಳಲ್ಲಿ ದಿಕ್ಸೂಚಿ ದಾಖಲೆ (ವಿಶನ್‌ ಡಾಕ್ಯುಮೆಂಟ್‌) ರಚನೆಯಾಗಲಿದೆ ಎಂದು ಗೃಹ ಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಅಜ್ಜರಕಾಡು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನಡೆಸಿದ ಅವರು ರಾಜ್ಯೋತ್ಸವ ಸಂದೇಶ ನೀಡಿದರು. ಹೊಸ ಸಿಆರ್‌ಝಡ್‌ ನಿಯಮಾವಳಿಯಂತೆ ರಾಜ್ಯ ದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಸಂಕಲ್ಪಿಸಿದ್ದೇವೆ. ದಿಕ್ಸೂಚಿ ವರದಿ ಪ್ರಕಾರ ಹಣ ತೆಗೆದಿರಿಸಿ ಹೂಡಿಕೆ ಮಾಡಲಾಗುವುದು ಎಂದರು.

ದೇವಸ್ಥಾನಗಳ ಪ್ರವಾಸೋದ್ಯಮ, ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುತ್ತೇವೆ. ಈ ಮೂಲಕ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಕರಾವಳಿ ಜಿಲ್ಲೆಯವರು ಸಾಹಸ ಪ್ರವೃತ್ತಿಯನ್ನೇ ಬಂಡವಾಳ, ಉದ್ಯಮಶೀಲತೆಯಾಗಿ ಪರಿವರ್ತಿಸಬೇಕು ಎಂದು ಕರೆ ನೀಡಿದರು. ನಮ್ಮ ಸರಕಾರ ನೆರೆ ಹಾವಳಿಯನ್ನು ಸಮರ್ಥವಾಗಿ ನಿರ್ವಹಿಸಿದೆ ಎಂದರು.

ವಿಧಾನಸಭೆಯ ಮುಖ್ಯ ಸಚೇತಕ ವಿ. ಸುನೀಲ್‌ ಕುಮಾರ್‌, ಶಾಸಕ ರಘುಪತಿ ಭಟ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್‌, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾಧಿಕಾರಿ ಜಿ. ಜಗದೀಶ, ಜಿ.ಪಂ. ಸಿಇಒ ಪ್ರೀತಿ ಗೆಹಲೋಟ್, ಎಸ್‌ಪಿ ನಿಶಾ ಜೇಮ್ಸ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕರಾವಳಿ ಕಾವಲು ಪಡೆ ಎಸ್‌ಪಿ ಚೇತನ್‌ ಆರ್‌. ಉಪಸ್ಥಿತರಿದ್ದರು.

ಸಿಂಹಾವಲೋಕನ- ಆತ್ಮಾವಲೋಕನ
ಕರಾವಳಿ ನಾಡು ತುಳು-ಕನ್ನಡದ ಬೀಡು. ಕರಾವಳಿಯ ಜನರಿಂದ ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡದ ಕಂಪು ಹರಡಲು ಸಾಧ್ಯವಾಗಿದೆ ಎಂದ ಅವರು, ನಾವು ಮಾಡಿದ ಸಾಧನೆಗಿಂತ ಮಾಡಲು ಇರುವುದು ಹೆಚ್ಚಿಗೆ ಇದೆ. ಹಿಂದಿನ ಸಾಧನೆಗಳ ಸಿಂಹಾವಲೋಕನ ನಡೆಸುವ ಜತೆಗೆ ಮುಂದಿನ ದಿಕ್ಸೂಚಿ ಕುರಿತು ಆತ್ಮಾವಲೋಕನ ನಡೆಸಬೇಕಾಗಿದೆ ಎಂದರು.

Advertisement

5 ಲಕ್ಷ ರೂ. ಪರಿಹಾರ
ಸಂಪೂರ್ಣ ಮನೆ ಹಾನಿಗೊಂಡರೆ ಸಿಗುತ್ತಿದ್ದ 95,000 ರೂ. ಪರಿಹಾರದ ಜತೆ 5 ಲ.ರೂ. ಮತ್ತು ಬಹುತೇಕ ನಷ್ಟಗೊಂಡ ಮನೆಯವರಿಗೂ 5 ಲ.ರೂ. ಪರಿಹಾರ ಕೊಡಲು ಸರಕಾರ ನಿರ್ಧರಿಸಿದೆ.ಚಭಾಗಶಃ ಹಾನಿಗೊಂಡವರಿಗೆ ಇದ್ದ 25,000 ರೂ. ಮೊತ್ತವನ್ನು 50 ಸಾವಿರ ರೂ.ಗೆ ಏರಿಸಲಾಗಿದೆ. ಭತ್ತದ ಬೆಳೆ ನಾಶಗೊಂಡವರಿಗೂ ಪರಿಹಾರ ನೀಡಲಾಗುತ್ತಿದೆ. ಮೀನುಗಾರರಿಗೆ ಆದ ಹಾನಿಗೆ ಪರಿಹಾರ ಕೊಡಿಸಲು ಮುಖ್ಯಮಂತ್ರಿಗಳು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದು, ಸದ್ಯವೇ ಘೋಷಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next