Advertisement
ಯೋಜನೆಯ ಪ್ರಕಾರ, ಈ ಬಗ್ಗೆ ಮುಂದಿನ 100 ದಿನಗಳಲ್ಲಿ ಟೆಂಡರ್ ಆಹ್ವಾನಿಸಲು ನಿರ್ಧರಿಸಲಾಗಿದೆ. ಕಡಿಮೆ ದಟ್ಟಣೆ ಇರುವ ಮತ್ತು ಪ್ರವಾಸಿ ಸ್ಥಳಗಳಿಗೆ ಸಾಗುವ ರೈಲುಗಳನ್ನು ಮಾತ್ರ ಆರಂಭದಲ್ಲಿ ಖಾಸಗಿ ಕಂಪನಿಗಳಿಗೆ ನೀಡಲಾಗುತ್ತದೆ.
Related Articles
Advertisement
ಕೋಚ್ ಫ್ಯಾಕ್ಟರಿಯೂ ಖಾಸಗಿಗೆ: ರೈಲ್ವೆ ಮಂಡಳಿ ಪ್ರಸ್ತಾಪಿಸಿದ ಇನ್ನೊಂದು ಮಹತ್ವದ ಯೋಜನೆಯೆಂದರೆ, ಕೋಚ್ ಹಾಗೂ ಇತರ ಭಾಗಗಳ ಉತ್ಪಾದನೆ ಯೂನಿಟ್‌ಗಳನ್ನೂ ಖಾಸಗಿಯವರಿಗೆ ನೀಡುವುದು. ದೇಶದಲ್ಲಿ ಒಟ್ಟು 7 ಉತ್ಪಾದನಾ ಘಟಕಗಳಿವೆ. ಉತ್ಪಾದನಾ ಘಟಕಗಳು ಮತ್ತು ವರ್ಕ್‌ಶಾಪ್‌ಗ್ಳನ್ನು ಹೊಸ ಸಂಸ್ಥೆಗೆ ವರ್ಗಾಯಿಸಲಾಗುತ್ತದೆ. ಇದಕ್ಕಾಗಿ ಇಂಡಿಯನ್ ರೈಲ್ವೇಸ್ ರೋಲಿಂಗ್ ಸ್ಟಾಕ್ ಕಂಪನಿ ಸ್ಥಾಪಿಸಲಾಗುತ್ತದೆ. ಪ್ರತಿ ಉತ್ಪಾದನಾ ಘಟಕದ ಸಿಇಒ ಲಾಭ ನಷ್ಟದ ವರದಿ ಸಿದ್ಧಪಡಿಸಿ, ಅದನ್ನು ಹೊಸ ಸಂಸ್ಥೆಯ ಮೇಲ್ವಿಚಾರಕರಿಗೆ ವರದಿ ಮಾಡಬೇಕಾಗುತ್ತದೆ. ಈಗಾಗಲೇ ಈ ಸಂಬಂಧ ಕಾರ್ಮಿಕ ಸಂಘಟನೆಗಳ ಜೊತೆಗೆ ಮಾತುಕತೆ ನಡೆದಿದ್ದು, ರಾಯ್‌ಬರೇಲಿಯಲ್ಲಿರುವ ಮಾಡರ್ನ್ ಕೋಚ್ ಫ್ಯಾಕ್ಟರಿಯಿಂದಲೇ ಈ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಲಾಗಿದೆ.
ಸಬ್ಸಿಡಿ ಬಿಡುವಂತೆ ಪ್ರಚಾರಎಲ್ಪಿಜಿ ಸಬ್ಸಿಡಿಯನ್ನು ತೊರೆಯಲು ಕ್ಯಾಂಪೇನ್ ಮಾಡಿದಂತೆಯೇ ರೈಲು ಟಿಕೆಟ್ ದರದಲ್ಲೂ ಸಬ್ಸಿಡಿಯನ್ನು ಸ್ವಯಂಪ್ರೇರಿತವಾಗಿ ತೊರೆಯಲು ಪ್ರಚಾರ ಆರಂಭಿಸಲಾಗುತ್ತದೆ. ಪ್ರಯಾಣಿಕರಿಗೆ ಸಬ್ಸಿಡಿ ಸಹಿತ ಹಾಗೂ ಸಬ್ಸಿಡಿ ರಹಿತ ಟಿಕೆಟ್‌ಗಳನ್ನು ಖರೀದಿಸುವ ಅವಕಾಶ ಇರುತ್ತದೆ. ರೈಲ್ವೆ ಮೂಲಗಳ ಪ್ರಕಾರ, ಪ್ರಯಾಣಿಕರ ಸಾಗಣೆ ವಹಿವಾಟಿನಲ್ಲಿ ಶೇ. 53 ರಷ್ಟು ವೆಚ್ಚವಷ್ಟೇ ಟಿಕೆಟ್ ದರದ ಮೂಲಕ ಸಂಗ್ರಹವಾಗುತ್ತದೆ. ಹೀಗಾಗಿ ಸಬ್ಸಿಡಿ ಹೊರತುಪಡಿಸಿ ಟಿಕೆಟ್ ನೀಡುವ ಮೂಲಕ ಈ ಅಂತರವನ್ನು ಕಡಿಮೆ ಮಾಡಲು ರೈಲ್ವೆ ಮಂಡಳಿ ಚಿಂತನೆ ನಡೆಸಿದೆ.