Advertisement
ಕಾರ್ಡ್ ಅಭಿಯಾನ, ಪ್ರತಿಭಟನೆಗೆ ಸಿದ್ಧತೆಕಳೆದ ಒಂದೂವರೆ ವರ್ಷದಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಕಾಮಗಾರಿ ನಡೆಸುತ್ತಿರುವ ಕಂಪೆನಿ ಜನರ ಬೇಡಿಕೆಗಳಿಗೆ ಕ್ಯಾರೇ ಎಂದಿಲ್ಲ.ಮಾತ್ರವಲ್ಲದೆ ಪ್ರತಿ ಗ್ರಾಮ ಪಂಚಾಯತ್‌ಗಳು,ಸಂಘ ಸಂಸ್ಥೆಗಳು ನೂರಾರು ಮನವಿ ನೀಡಿದರು ಸಹ ಹೆದ್ದಾರಿ ಪ್ರಾಧಿಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲದಿರುವುದು ಇಲಾಖೆಯ ಬೇಜವಬ್ದಾರಿ ಹಾಗೂ ನಿರ್ಲಕ್ಷವನ್ನು ಬಿಂಬಿಸಿದೆ. ನೂರಾರು ಅಪಘಾತಗಳಿಂದ ಸಾವಿರಾರು ಜನರು ಕಳೆದ ಆರೇಳು ವರ್ಷಗಳಿಂದ ಪ್ರಾಣ ಕಳೆದುಕೊಂಡು ಪ್ರತಿನಿತ್ಯದ ಅಗತ್ಯಕ್ಕಾಗಿ ಅವಲಂಬಿಸುವ ಹೆದ್ದಾರಿ ವಿಚಾರದಲ್ಲಿ ಈ ರೀತಿಯ ಧೋರಣೆ ಕರಾವಳಿಗರನ್ನು ರೊಚ್ಚಿಗೆಬ್ಬಿಸಿದೆ.
ಸಂಸದರು ಮುಖ್ಯಮಂತ್ರಿಗಳ ಪುತ್ರರಾಗಿದ್ದಾರೆ. ಮಾತ್ರವಲ್ಲದೆ ಹೆದ್ದಾರಿ ಪ್ರಾಧಿಕಾರದ ಕೇಂದ್ರ ಸರಕಾರದ ಅಧೀನದಲ್ಲಿದೆ. ಬೈಂದೂರು ಕ್ಷೇತ್ರದಲ್ಲಿ ಸಂಸದರಿಗೆ ಅತ್ಯಧಿಕ ಬಹುಮತ ಕೂಡ ದೊರಕಿದೆ. ಒಂದೊಮ್ಮೆ ಹೆದ್ದಾರಿ ಸಮಸ್ಯೆ ಪರಿಹರಿಸದೆ ಟೋಲ್ ಆರಂಭಿಸಿದರೆ ಬೈಂದೂರು ಕ್ಷೇತ್ರದ ಜನರಿಗೆ ಸಂಸದರಿಂದ ಆದ ಅನ್ಯಾಯ ಎನ್ನುವುದು ಹೆದ್ದಾರಿ ಹೋರಾಟ ಸಮಿತಿ ಸದಸ್ಯರ ಅಭಿಪ್ರಾಯವಾಗಿದೆ ಹಾಗೂ ಹಕ್ಕುಗಳಿಗಾಗಿ ಜನಸಾಮಾನ್ಯರು ಪರದಾಡ ಬೇಕಾದ ಪರಿಸ್ಥಿತಿ ಉಂಟಾಗಿದೆ.
Related Articles
Advertisement
ಅನುಮತಿ ಬಂದಿಲ್ಲಟೋಲ್ ಆರಂಭ ಕುರಿತಂತೆ ಈಗಾಗಲೇ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದೆ. ಹೆದ್ದಾರಿ ಪ್ರಾಧಿಕಾರದ ನಿಯಮದಲ್ಲಿ ಕಾಮಗಾರಿ ಪೂರೈಸಲಾಗುತ್ತಿದೆ. ಇದುವರೆಗೆ ಅಧಿಕೃತ ಅನುಮತಿ ಬಂದಿಲ್ಲ. ಸ್ಥಳೀಯ ರಿಯಾಯಿತಿ ಹಾಗೂ ಸ್ಥಳೀಯ ಬೇಡಿಕೆಗಳಿಗೆ ಪ್ರಾಧಿಕಾರ ಅನುಮತಿ ನೀಡಬೇಕಿದೆ. ಭೂ ಒತ್ತುವರಿ ಆಗದ ಕಡೆ ಬಿಟ್ಟು ಉಳಿದ ಕಡೆ ಕಾಮಗಾರಿ ಪೂರ್ಣಗೊಂಡಿದೆ.
-ಮೋಹನ್ ಜೋಶ್, ಸಿ.ಜಿ.ಎಂ., ಐಆರ್‌ಬಿ ಕಂಪೆನಿ ಹೊನ್ನಾವರ ಶಿರೂರು ಗಢಿ ಭಾಗದಲ್ಲಿ ಆರಂಭವಾದ ಐ.ಆರ್.ಬಿ ಕಂಪೆನಿಯ ಟೋಲ್‌ಗೇಟ್ ಆರಂಭಕ್ಕೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಅನುಮತಿ ನೀಡಬೇಕೋ ಅಥವಾ ಉಡುಪಿ ಜಿಲ್ಲಾಧಿಕಾರಿಗಳು ಸ್ಪಂದಿಸಬೇಕು ಎನ್ನುವ ಗೊಂದಲ ಕೂಡ ಇದೆ. ಕಾರಣವೆಂದರೆ ಟೋಲ್ ಇರುವ ಒಂದು ಪಾಶ್ವ ಉತ್ತರ ಕನ್ನಡ ಹಾಗೂ ಇನ್ನೊಂದು ಪಾಶ್ವ ಉಡುಪಿ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದೆ. ಎರಡು ಜಿಲ್ಲೆಯ ಗಡಿಭಾಗದ ಜನರಿಗೂ ಸಮಸ್ಯೆಯಾಗುವ ಲಕ್ಷಣಗಳಿವೆ.ಇದರ ಜತೆಗೆ ಪ್ರಮುಖ ಊರುಗಳಿಗೆ ಅಳವಡಿಸಬೇಕಾದ ಮಾರ್ಗ ಸೂಚಿಗಳನ್ನು ಅಳವಡಿಸಿಲ್ಲ.ಮಾತ್ರವಲ್ಲದೆ ಟೋಲ್ ಪ್ಲಾಜಾದಲ್ಲೂ ಕೂಡ ಶಿರೂರು ಅನ್ನುವ ಬದಲು ಶಿರೂರ ಎಂದು ತಪ್ಪು ಮುದ್ರಿಸಲಾಗಿದೆ.ಇದೆಲ್ಲದರ ಜೊತೆ ಟೋಲ್‌ಗೇಟ್ ಬಳಿ ಸುಂಕ ಸಂಗ್ರಹಿಸುವ ಎಲ್ಲ ಸಿದ್ಧªತೆಗಳು ನಡೆದಿದ್ದು ತೆರೆಮರೆಯಲ್ಲಿ ಸ್ಥಳೀಯರನ್ನು ಓಲೈಸುವ ಪ್ರಕ್ರಿಯೆ ನಡೆಯುತ್ತಿದೆ. ಒಂದೊಮ್ಮೆ ಹೆದ್ದಾರಿ ಸಮಸ್ಯೆ ಸರಿಪಡಿಸದೆ ಸ್ಥಳೀಯರಿಗೆ ಟೋಲ್ ರಿಯಾಯಿತಿ ನೀಡದೆ ಸುಂಕ ಸಂಗ್ರಹಕ್ಕೆ ಮುಂದಾದರೆ ಸಾರ್ವಜನಿಕರೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ತಾ.ಪಂ. ಸದಸ್ಯ ಹಾಗೂ ಹೆದ್ದಾರಿ ಹೋರಾಟ ಸಮಿತಿ ಸಂಚಾಲಕ ಸದಸ್ಯರಾದ ಪುಷ್ಪರಾಜ್ ಶೆಟ್ಟಿ ತಿಳಿಸಿದ್ದಾರೆ. -ಅರುಣ ಕುಮಾರ್ ಶಿರೂರು