Advertisement
ಒಂದೇ ತಾಯಿ ಮಕ್ಕಳಲ್ಲದಿದ್ದರೂ ಸೋದರರಂತೆ ಇದ್ದೆವು..
Related Articles
Advertisement
ಕನಸು ಕನಸಾಗಿಯೇ ಉಳಿದುಕೊಂಡಿತು-
“ಪವರ್ ಸ್ಟಾರ್ ‘ ಜತೆ ಸಿನಿಮಾ ಮಾಡಬೇಕು ಎಂದುಕೊಂಡಿದ್ದ ನನ್ನ ಕನಸು ಕನಸಾಗಿಯೇ ಉಳಿದುಕೊಂಡಿದೆ ಎಂದು ನಟಿ ರಾಧಿಕಾ ಕುಮಾರಸ್ವಾಮಿ ಭಾವುಕರಾದರು. ಅಪ್ಪು ಅವರೊಂದಿಗಿನ ಒಡನಾಟ ಮೆಲುಕು ಹಾಕಿ, ನಾನು ಮತ್ತು ಅಪ್ಪು ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಬಂದವರು. ನಮ್ಮ ಹೋಮ್ ಬ್ಯಾನರ್ ನಲ್ಲಿ ಅವರಿಗಾಗಿ ಒಂದು ಸಿನಿಮಾ ಮಾಡಬೇಕು ಅಂದು ಕೊಂಡಿದ್ದೆ. ಈ ಬಗ್ಗೆ ಚರ್ಚೆ ಮಾಡಲು ಅವರನ್ನು ಭೇಟಿ ಆಗುವುದಾಗಿ ಹೇಳಿದ್ದೆ.
ನಮಗಾಗಿ ಒಂದು ಸಿನಿಮಾ ಮಾಡಿ ಎಂದು ಕೇಳಿ ಕೊಂಡಿದ್ದೆ ಖಂಡಿತವಾಗಿ ಮಾಡುತ್ತೇನೆ ಅಂತ ಒಪ್ಪಿಕೊಂಡಿದ್ದರು ಎಂದು ರಾಧಿಕಾ ಕಂಬನಿ ಮಿಡಿದರು. ನನ್ನ “ಭೈರಾದೇವಿ’ ಸಿನಿಮಾದ ಶೂಟಿಂಗ್ ವೇಳೆ ಕುಟುಂಬ ಸಮೇತರಾಗಿ ಚಿತ್ರೀಕರಣದ ಸೆಟ್ ಗೆ ಬಂದಿದ್ದರು. 6 ವರ್ಷಗಳಿ ಹಿಂದೆ ನಾನು ಅಪ್ಪು ಜತೆಗೆ ಕೆಲಸ ಮಾಡಬೇಕಿತ್ತು. ಆದರೆ ಸಾಧ್ಯ ವಾಗಿರಲಿಲ್ಲ. ನಾನು ಶಿವಣ್ಣನ ಜೊತೆ ಅಣ್ಣ-ತಂಗಿ ಕಥೆಯ ಸಿನಿಮಾ ಮಾಡಿ ದ ಬಳಿಕ ಅಪ್ಪಾಜಿಯವರ ಕುಟುಂಬದಲ್ಲಿ ನಾನೂ ಒಬ್ಬಳಾಗಿದ್ದೆ ಎಂದರು.
ಇದನ್ನೂ ಓದಿ:- ವಿಚಾರ ಶಕ್ತಿ ಹೆಚ್ಚಿಸುತ್ತದೆ ಚಿತ್ರಕಲೆ
ಬಂಗಾರದಂತ ಮಗ- ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ರಾಜ್ ಕುಮಾರ್ ಅವರ ಕಳೆಬರದ ಎದುರು ಬಿಕ್ಕಿ ಬಿಕ್ಕಿ ಅತ್ತ ನಟಿ ಉಮಾಶ್ರೀ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸರಳ ತನ ವಿನಯ, ದೊಡ್ಡವರಿಗೆ ಗೌರವ ಕೂಡುವುದನ್ನು ನೆನೆದು ಗಳಗಳನೆ ಕಣ್ಣೀರಿಟ್ಟರು. ಬಂಗಾದರಂತಹ ಮನುಷ್ಯನಿಗೆ ಬಂಗಾರದಂತಹ ಮಗ ಪುನೀತ್. ಎಲ್ಲರಿಗೂ ಒಂದೇ ರೀತಿ ಪ್ರೀತಿ ಹಂಚುತ್ತಿದ್ದ ಅಪ್ಪು ಮತ್ತೆ ಕನ್ನಡ ನಾಡಿನಲ್ಲಿ ಹಟ್ಟಿ ಬರಲಿ ಎಂದರು. ಈ ಸಾವು ಎಷ್ಟರ ಮಟ್ಟಿಗೆ ನ್ಯಾಯ ಅಂತ ಎಲ್ಲರ ಮನಸಲ್ಲೂ ಕಾಡುತ್ತಿರುವ ಪ್ರಶ್ನೆ ಅಪ್ಪು ತೋರುತ್ತಿದ್ದ ವಿನಯ ವಂತಿಕೆ ಮೆರೆಯವಂತಿಲ್ಲ ಎಂದು ಹೇಳಿದರು.
ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಅಭಿಮಾನಿ – “ನಾನು ಅಪ್ಪು ಅಣ್ಣನ ದೊಡ್ಡ ಫ್ಯಾನ್. ಅಣ್ಣನನ್ನು ಒಂದು ದಿನಾಲೂ ನೋಡಲಿಕ್ಕೆ ಆಗಿರಲಿಲ್ಲ. ಆತನ ಶವ ನೋಡುತ್ತೇನೆಂದು ಕನಸು ಮನಸಿನಲ್ಲೂ ಅಂದು ಕೊಂಡಿರಲಿಲ್ಲ’ ಎಂದು ಪುಟಾಣಿ ಅಭಿಮಾನಿಯೊಬ್ಬ ಕಂಠೀರವ ಕ್ರೀಡಾಂಗಣದಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಪುನೀತ್ ಅಣ್ಣನ ಸಾವು ನನ್ನ ಕುಟುಂಬದ ಸಹೋದರನೊಬ್ಬನ್ನು ಕಳೆದುಕೊಂಡ ರೀತಿ ಆಗುತ್ತಿದೆ. ಆತನ ಎಲ್ಲ ಸಿನಿಮಾ ನೋಡಿದ್ದೇನೆ. ಅಪ್ಪು ಅಣ್ಣನ ಡ್ಯಾನ್ಸ್, ಫೈಟ್, ಸಂಭಾಷಣೆ ನನಗಿಷ್ಟ. ಶಾಲೆಯಲ್ಲಿರುವಾಗ ಅಪ್ಪು ಅಣ್ಣನ ನಿಧನ ಸುದ್ದಿಯನ್ನು ಟೀಚರ್ ಹೇಳಿದಾಗ ಅರಗಿಸಿ ಕೊಳ್ಳಲಾಗಲಿಲ್ಲ ಎಂದು ಹೇಳಿ ಕಣ್ಣೀರು ಸುರಿಸಿದ. ಜಾಲತಾಣಗಳಲ್ಲಿ ತಮ್ಮದೇ ರೀತಿಯಲ್ಲಿ ಅಭಿಮಾನ ತೋರುತ್ತಿದ್ದಾರೆ. ಫಿಡಿಲಿಟಸ್ ಗ್ಯಾಲರಿಯ ಪ್ರಮುಖ ಚಿತ್ರಕಾರ ಕೋಟೆಗದ್ದೆ ರವಿ ತಮ್ಮ ಕುಂಚದಿಂದ ಸ್ಪೀಡ್ ಪೇಂಟಿಂಗ್ ಮೂಲಕ ದೊಡ್ಮನೆ ರಾಜಕುಮಾರನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಅಮ್ಮ ಕಣ್ಣೀರು ಹಾಕ್ತಾ ಇದ್ದಾರೆ – ಪುನೀತ್ ಸರ್ ಅವರನ್ನು ಚಿಕ್ಕವನಿದ್ದಾಗಲೇ ಚೆನ್ನೈನಲ್ಲಿ ನೋಡಿದ್ದೆ. ಒಳ್ಳೆಯ ಮನುಷ್ಯ ಇತ್ತೀಚಿಗಷ್ಟೇ ಅವರ ಸಿನಿಮಾದ ಹಾಡಿಗೆ ನೃತ್ಯ ನಿರ್ದೇಶನ ಮಾಡಿದೆ. ಅವರ ಸಾವು ಅಘಾತ ಉಂಟುಮಾಡಿದೆ ಮಾತುಗಳೇ ಬರುತ್ತಿಲ್ಲ. ಮನೆಯಲ್ಲಿ ನಮ್ಮ ಅಮ್ಮ ಈ ಸುದ್ದಿ ಕೇಳಿ ತುಂಬಾ ಅತ್ತು ಬಿಟ್ಟರು. ಈ ಸುದ್ದಿ ನಿಜನಾ ಅಂತ ಕೇಳುತ್ತಿದ್ದರು ಎಂದು ನಟ ಮತ್ತು ನೃತ್ಯ ನಿರ್ದೇಶಕ ಪ್ರಭುದೇವ ಹೇಳಿದರು.