Advertisement
ಸಂಸ್ಥೆಯನ್ನು ಭಾವೀ ಜನಾಂಗಕ್ಕೆ ಮುನ್ನಡೆಸಲು ಯುವಜನತೆಯ ಆವಶ್ಯಕತೆಯಿದೆ. ಆರೋಗ್ಯ ಮತ್ತು ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ನಮ್ಮ ಹಿರಿಯರು ಈ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಅವರ ದೂರದೃಷ್ಟಿತ್ವದ ಆರೋಗ್ಯನಿಧಿ ಮತ್ತು ವಿದ್ಯಾನಿಧಿಯನ್ನು ನಾವು ಸುಭದ್ರಗೊಳಿಸಿ ಯುವಜನತೆಯನ್ನು ಪ್ರೇರೆಪಿಸಬೇಕು. ಈ ಅಗತ್ಯಗಳನ್ನು ಮೊದಲಾಗಿ ನಾವು ರೂಪಿಸಬೇಕು. ಹಣದ ಕೊರತೆಯಿಂದ ನಮ್ಮವರು ಶಿಕ್ಷಣದಿಂದ ವಂಚಿತರಾಗಬಾರದು. ಆದುದರಿಂದ ಯುವಜನತೆಯೂ ನಮ್ಮದೇ ಆದ ವಂಶಪಾರಂಪರ್ಯ ಕುಲಕಸುಬನ್ನು ಅವಲಂಬಿಸಿ ಕುಲವೃತ್ತಿಗೆ ಒತ್ತುನೀಡಬೇಕು ಎಂದು ಭಂಡಾರಿ ಆ್ಯಂಡ್ ಭಂಡಾರಿ ಅಡ್ವೊಕೇಟ್ ಸಾಲಿಸಿಟರ್ ನ ಮುಖ್ಯಸ್ಥ ಮತ್ತು ಭಂಡಾರಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ನ್ಯಾಯವಾದಿ ಸುಂದರ್ ಜಿ. ಭಂಡಾರಿ ತಿಳಿಸಿದರು.
Related Articles
Advertisement
ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ, ಪ್ರತಿಭಾ ಪುರಸ್ಕಾರಗಳನ್ನು ಹಾಗೂ ದಿ| ಮಹಾಲಿಂಗ ಭಂಡಾರಿ ಮತ್ತು ದಿ| ಸುಶೀಲಾ ಅಚಣ್ಣ ಭಂಡಾರಿ ಸ್ಮಾರಣಾರ್ಥ ಸುಲೋಚನಾ ಬಾಲಕೃಷ್ಣ ಪ್ರಾಯೋಜಕತ್ವದವಿದ್ಯಾರ್ಥಿ ವೇತನವನ್ನು ಪ್ರದಾನಿಸಿ ಅಭಿನಂದಿಸಲಾಯಿತು.
ಸಮಿತಿಯ ಉಪಾಧ್ಯಕ್ಷ ಪುರುಷೋತ್ತಮ ಜಿ. ಭಂಡಾರಿ, ಜೊತೆ ಕಾರ್ಯದರ್ಶಿಗಳಾದ ನ್ಯಾಯವಾದಿ ಶಾಂತರಾಜ್ ಡಿ. ಭಂಡಾ ರಿ ಮತ್ತು ರಂಜಿತ್ ಎಸ್. ಭಂಡಾರಿ, ಜೊತೆ ಕೋಶಾಧಿಕಾರಿಗಳಾದ ಪ್ರಕಾಶ್ ಕೆ. ಭಂಡಾರಿ ಮತ್ತು ಸುಭಾಷ್ ಜಿ. ಭಂಡಾರಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ರೇಖಾ ಎ. ಭಂಡಾರಿ, ಮಾಜಿ ಅಧ್ಯಕ್ಷ ಬಾಲಕೃಷ್ಣ ಪಿ.ಭಂಡಾರಿ, ಮಾಜಿ ಕಾರ್ಯಾಧ್ಯಕ್ಷೆಯರಾದ ರುಕ್ಮಿಣಿ ಭಂಡಾರಿ, ಲಲಿತಾ ವಿ. ಭಂಡಾರಿ, ಶೋಭಾ ಸುರೇಶ್ ಭಂಡಾರಿ, ವಿಶ್ವನಾಥ ಭಂಡಾರಿ, ಗಂಗಾಧರ ಭಂಡಾರಿ ದುಬೈ, ನಾರಾಯಣ ಭಂಡಾರಿ ಥಾಣೆ, ರಾಕೇಶ್ ಭಂಡಾರಿ, ಸಂತೋಷ್ ಭಂಡಾರಿ, ಶಾಲಿನಿ ರಮೇಶ್ ಭಂಡಾರಿ, ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ, ಸಮಿತಿಯ ಇತರ ಪದಾಧಿಕಾರಿಗಳು, ಸದಸ್ಯರು, ಅಪಾರ ಸಂಖ್ಯೆಯ ಭಂಡಾರಿ ಬಾಂಧವರು ಹಾಜರಿದ್ದರು. ಪ್ರಾರಂಭದಲ್ಲಿ ಶ್ರೀ ಕಚ್ಚಾರು ನಾಗೇಶ್ವರ ದೇವರನ್ನು ಸ್ತುತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸದಸ್ಯರ ಭಜನೆಯೊಂದಿಗೆ ದಿನಪೂರ್ತಿಯಾಗಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಸಮಿತಿಯ ಪರಿವಾರದಿಂದ ವಿವಿಧ ವಿನೋದಾವಳಿ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯಿತು. ಸಚಿನ್ ಭಂಡಾರಿ ಅವರಿಂದ “ನಮ್ಮ ಊರು’ ವಿಶೇಷ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಜಯಶೀಲ ಯು. ಭಂಡಾರಿ ಬಳಗದಿಂದ “ಸುಂದರ ರಾವಣ’ಯಕ್ಷಗಾನ ಪ್ರದರ್ಶನಗೊಂಡಿತು.
ಕು| ಗಾಯತ್ರಿ ಎನ್. ಭಂಡಾರಿ ಪ್ರಾರ್ಥನೆಗೈದರು. ಸಮಿತಿಯ ಉಪಾಧ್ಯಕ್ಷ ಪ್ರಭಾಕರ್ ಪಿ. ಭಂಡಾರಿ ಸ್ವಾಗತಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಜಯಸುಧಾ ಟಿ. ಭಂಡಾರಿ, ಪಲ್ಲವಿ ರಂಜಿತ್ ಭಂಡಾರಿ ಅವರು ಅತಿಥಿಗಳನ್ನು ಮತ್ತು ಶಿಲ್ಪಾಭಂಡಾರಿ, ಕಾರ್ತಿಕ್ ಭಂಡಾರಿ ಸಮ್ಮಾನಿತರನ್ನು ಪರಿಚಯಿಸಿದರು. ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು.
ಗೌರವ ಪ್ರಧಾನ ಕಾರ್ಯದರ್ಶಿ ಶಶಿಧರ ಡಿ. ಭಂಡಾರಿ ಪ್ರಸ್ತಾವಿಕ ನುಡಿಗಳನ್ನಾಡಿ, ಸಮ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ದರು. ಕು| ಕ್ಷಮಾ ಆರ್. ಭಂಡಾರಿ, ಕು| ಶ್ರೇಯಲ್ ಯು. ಭಂಡಾರಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಸರಿತಾ ಭಂಡಾರಿ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್