Advertisement

ಮಹಾನಾಯಕನ ಮಹಾಯಾತ್ರೆ; ಶಿಕ್ಷಣದಿಂದ ಮಾತ್ರ ಸಮುದಾಯ ಬಲಿಷ್ಠ: ಎಂ ಗುರುಮೂರ್ತಿ

04:44 PM Apr 28, 2022 | Team Udayavani |

ಚಿಕ್ಕಜಾಜೂರು : ಮಹಾನ್ ಚೇತನ, ಮಹಾನಾಯಕ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಅಸ್ಪೃಶ್ಯತೆ ಹೋಗಲಾಡಿಸಲು ಜಾತಿವಾದಿಗಳನ್ನು ಹತ್ತಿಕ್ಕಲು ನಮ್ಮ ಸಮುದಾಯಕ್ಕೆ ಶಿಕ್ಷಣವು ಬಹುಮುಖ್ಯ ಎಂದು ರಾಜ್ಯ ಡಿಎಸ್ ಎಸ್ ಸಂಘಟನಾ ಸಂಚಾಲಕ ಗುರುಮೂರ್ತಿ ತಿಳಿಸಿದರು.

Advertisement

ಚಿಕ್ಕಜಾಜೂರು ದಲಿತ ಯುವಕ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರ 131ನೇ ಜಯಂತಿ ಹಾಗೂ ಬಾಬು ಜಗಜೀವನ್ ರಾವ್ ರವರ 115 ನೇ ಜಯಂತಿ ಅಂಗವಾಗಿ ಮಹಾನಾಯಕನ ಮಹಾಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿ ಮನೆ ಮನೆಗಳಲ್ಲಿ ಹೆಚ್ಚಿನ ಶಿಕ್ಷಣ ಪಡೆದರೆ ನಮಗೆ ಸಂವಿಧಾನದಲ್ಲಿ ಅಂಬೇಡ್ಕರ್ ಅವರಿಂದ ರಚಿಸಲ್ಪಟ್ಟ ಮೀಸಲಾತಿಗಳನ್ನು ಪಡೆಯಲು ಸಹಕಾರಿಯಾಗುತ್ತದೆ. ಯಾವುದೇ ಸರ್ಕಾರಿ ಕೆಲಸ ಸಿಕ್ಕರೆ ದೇವಸ್ಥಾನಕ್ಕೆ ಹೋಗುವುದನ್ನು ಬಿಡಿ, ಅದರ ಬದಲು ಮೀಸಲಾತಿಯನ್ನು ಸೃಷ್ಟಿಸಿ ದಲಿತರ ಬದುಕಿಗೆ ಆಸರೆಯಾದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಫೋಟೋಗೆ ಪೂಜೆ ಮಾಡಿ ಎಂದು ಸಭೆಯನ್ನುದ್ದೇಶಿಸಿ ಜಾಗೃತಿ ಮೂಡಿಸಿದರು.

ಹೊಳಲ್ಕೆರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆಎಂ ಶಿವಕುಮಾರ್ ಮಾತನಾಡಿ, ಸಂವಿಧಾನ ರಚನೆಕಾರ ಅಂಬೇಡ್ಕರ್ ಅವರು ಒಂದೇ ವರ್ಗದ ಜನಾಂಗಕ್ಕೆ ಮಾತ್ರ ಮಾದರಿಯಾಗಿ ಇಲ್ಲ, ಅವರು ಬರೆದಿರುವ ಸಂವಿಧಾನದಲ್ಲಿ ದೇಶದ ಎಲ್ಲ ಜನಾಂಗದವರಿಗೆ ಸರಿಸಮಾನತೆಯ ಬಗ್ಗೆ ಸಂವಿಧಾನದ ಕರಡು ರಚಿಸಿಸಿದ್ದಾರೆ ಇಂತ ಮಹಾನ್ ವ್ಯಕ್ತಿ ನಮ್ಮ ದೇಶದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಪುಣ್ಯ ಎಂದು ಹರ್ಷ ವ್ಯಕ್ತಪಡಿಸಿದರು.

ನಾವು ಮೊದಲು ಶಿಕ್ಷಣಕ್ಕೆ ಒತ್ತು ನೀಡಿ ಸಂಘಟಿತರಾದರೆ ನಮಗೆ ಸಿಗಬೇಕಾದ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬಹುದು ಎಂದು ಚಿತ್ರದುರ್ಗ ಜಿಲ್ಲಾ ಡಿಎಸ್ ಎಸ್ ಸಂಚಾಲಕ ಕೆಂಗುಂಟೆ ಜಯಣ್ಣ ತಿಳಿಸಿದರು.

Advertisement

ಚಿಕ್ಕಜಾಜೂರು ಗ್ರಾಮಪಂಚಾಯಿತಿ ಅಧ್ಯಕ್ಷೆ ರಶ್ಮಿ ಪ್ರದೀಪ್ ಕುಮಾರ್ ಹಾಗೂ ಸಂಘಟನಾ ಗಣ್ಯರು ಕಾರ್ಯಕ್ರಮವನ್ನು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಕಾರ್ಯಕ್ರಮದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಅವರ ಪುತ್ಥಳಿಯನ್ನು ಬೆಳ್ಳಿರಥದಲಿ ಕೂರಿಸಿ ಡಿಜೆ, ಡೊಳ್ಳ , ತಮಟೆ ಕುಣಿತ ವಾದ್ಯಗಳೊಂದಿಗೆ ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಮಹಿಳೆಯರ ಕುಣಿತ ವಿಶೇಷವೆನಿಸಿತು.

ನವೀನ್ ಮದ್ದೇರು, ಉಚ್ಚಂಗಿ ಪ್ರಸಾದ್ , ಪಾಡಿಗಟ್ಟೆ ಸುರೇಶ್ , ಕಿರಣ್ ಕುಮಾರ್, ಜಿಕೆ ಯೋಗೇಶ್, ಜಮೀರ್ ಪಾಷಾ, ಬಾಬು, ಶ್ರೀಕಾಂತ್ ಮಠದ್, ದೊರೆ ಮಲ್ಲಿಕಾರ್ಜುನ್, ಮಧು ಪಾಲೇಗೌಡ, ಎಂಜಿ ಲೋಹಿತ್ ಕುಮಾರ್, ಮಂಜುನಾಥ್ ಕೊಡಗವಳ್ಳಿಹಟ್ಟಿ, ಈಡಿಗರ ತಿಮ್ಮಯ್ಯ , ಬಸವರಾಜ್ , ಹಗೇದ್ ರಂಗಪ್ಪ,ಹಗೇದ್ ಹಾಲೇಶ್, ಹನುಮಂತಪ್ಪ, ರಾಜು, ಜಯಪ್ಪ, ರಾಮಪ್ಪ, ಗ್ರಾಪಂ ಸದಸ್ಯೆ ಜಯಶ್ರೀ ಓಂಕಾರಪ್ಪ, ವನಜಾಕ್ಷಿ ಮಲ್ಲೇಶ್, ಸಂಘದ ಗೌರವಾಧ್ಯಕ್ಷ ಎನ್,ಓಂಕಾರಪ್ಪ, ಮಲ್ಲೇಶ್ ಎಂ, ಸಂತೋಷ್ ಆರ್ , ಶ್ರೀಧರ್, ಮತ್ತು ಎಸ್ಸಿ ಮಹಿಳಾ ಸಂಘದ ಸದಸ್ಯರು ಹಾಗೂ ಡಿಎಸ್ಎಸ್ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಹಗೇದ್ ಹಾಲೇಶ್ ಉಪಹಾರದ ವ್ಯವಸ್ಥೆ ಮಾಡಿಸಿದ್ದರು.

ಚಿಕ್ಕಜಾಜೂರು ಪೊಲೀಸ್ ಇಲಾಖೆಯ ಮಲ್ಲೇಶ್, ಗಿರೀಶ್ , ಹಾಗೂ ಸಿಬ್ಬಂದಿಯವರು ಕಾರ್ಯಕ್ರಮಕ್ಕೆ ಸೂಕ್ತ ಬಂದೋಬಸ್ತ್ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next