Advertisement

ಭಾರತದಲ್ಲಿ ಕೋವಿಡ್-19 ವೈರಸ್ ಸಮುದಾಯ ಹಂತಕ್ಕೆ ಪಸರಿಸುತ್ತಿದೆ: ಐಎಂಎ

11:31 AM Jul 19, 2020 | Mithun PG |

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 34 ಸಾವಿರ ಕೋವಿಡ್ ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 10.38 ಲಕ್ಷಕ್ಕೆ ತಲುಪಿದೆ. ಇದೀಗ ದೇಶದಲ್ಲಿ ಕೋವಿಡ್  ವೈರಸ್ ಸಮೂದಾಯ ಹಂತಕ್ಕೆ ಪಸರಿಸಲು ಆರಂಭಿಸಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ಮಾಧ್ಯಮಕ್ಕೆ ತಿಳಿಸಿದೆ.

Advertisement

ಪ್ರತಿ ದಿನ ದೇಶದಲ್ಲಿ 30 ಸಾವಿರಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗುತ್ತಿದೆ. ಇದೊಂದು ಆಘಾತಕಾರಿ ಬೆಳವಣಿಗೆಯಾಗಿದೆ. ಹಲವಾರು ಅಂಶಗಳು ಇದಕ್ಕೆ ಕಾರಣವಾಗಿದ್ದರೂ, ವೈರಸ್ ಗ್ರಾಮೀಣ ಪ್ರದೇಶಗಳಿಗೆ ಹರಡುತ್ತಿರುವುದು ಪರಿಸ್ಥಿತಿ ವಿಷಮಿಸಿದೆ ಎಂಬರ್ಥ ನೀಡುತ್ತದೆ. ಇದೊಂದು ಕೆಟ್ಟ ಸಂಕೇತವಾಗಿದ್ದು, ವೈರಸ್ ಸಮೂದಾಯ ಹಂತಕ್ಕೆ ಹರಡುತ್ತಿದೆ ಎಂದು ಐಎಂಎ ಆಸ್ಪತ್ರೆ ಮಂಡಳಿ ಅಧ್ಯಕ್ಷರಾದ ಡಾ. ವಿ ಕೆ ಮೋಂಗಾ ತಿಳಿಸಿದ್ದಾರೆ.

ಆದರೆ ಕೇಂದ್ರ ಆರೋಗ್ಯ ಸಚಿವಾಲಯ ಭಾರತದಲ್ಲಿ ಇನ್ನೂ ಕೋವಿಡ್ -19 ರ ಸಮುದಾಯ ಹಂತಕ್ಕೆ ಪಸರಿಸಿಲ್ಲ ಎಂದು ಹೇಳಿಕೆ ನೀಡಿತ್ತು. ಆದರೆ ಬೆನ್ನಲ್ಲೆ ಐಎಂಐ ಸೇರಿದಂತೆ ಹಲವಾರು ಆರೋಗ್ಯ ತಜ್ಞರು ಇದನ್ನು ಬಲವಾಗಿ ಪ್ರಶ್ನಿಸಿದ್ದಾರೆ.

ಅಮೆರಿಕಾ ಮತ್ತು ಬ್ರೆಜಿಲ್ ನಂತರ ಭಾರತವು ಈಗ ವಿಶ್ವದಲ್ಲೇ ಮೂರನೇ ಅತಿ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ಹೊಂದಿದೆ ಎಂಬ ವಾಸ್ತವದ ಹೊರತಾಗಿಯೂ ಸರ್ಕಾರ ಸಮುದಾಯ ಹಂತಕ್ಕೆ ಹರಡಿಲ್ಲ ಎನ್ನುವುದು ಪ್ರಶ್ನಾರ್ಹ. ಈಗ ಕೋವಿಡ್ -19 ವೈರಸ್ ಪಟ್ಟಣಗಳು ​​ಮತ್ತು ಹಳ್ಳಿಗಳಿಗೆ ನುಗ್ಗುತ್ತಿವೆ. ಇದು ಪರಿಸ್ಥಿತಿಯನ್ನು ನಿಯಂತ್ರಿಸಲು ತುಂಬಾ ಕಷ್ಟಕರವಾಗಲಿದೆ ಎಂದು ಐಎಂಎ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next