Advertisement

‘ಒಡಿಎಫ್‌ ಪ್ಲಸ್‌ ಪ್ಲಸ್‌’ಗರಿಯತ್ತ ಮಹಾನಗರ ಪಾಲಿಕೆ

10:57 AM Apr 19, 2022 | Team Udayavani |

ಮಹಾನಗರ: ಬಿಬಿಎಂಪಿ ಮತ್ತು ಮೈಸೂರು ಪಾಲಿಕೆಯ ಬಳಿಕ ಇದೀಗ ಮಂಗಳೂರು ಪಾಲಿಕೆಯು ‘ಒಡಿಎಫ್‌ ಪ್ಲಸ್‌ ಪ್ಲಸ್‌’ ಗರಿಯನ್ನು ತನ್ನದಾಗಿಸಲು ಮುಂದಡಿ ಇಡುತ್ತಿದೆ.

Advertisement

ಮಂಗಳೂರು ಮಹಾನಗರ ಪಾಲಿಕೆ ಈಗಾಗಲೇ ಒಡಿಎಫ್‌ ಮತ್ತು ಒಡಿಎಫ್‌ ಪ್ಲಸ್‌ ಗ್ರೇಡ್‌ ಹೊಂದಿದ್ದು, ಈ ವರ್ಷ ಒಡಿಎಫ್‌ ಪ್ಲಸ್‌ ಪ್ಲಸ್‌ ಸ್ಥಾನಕ್ಕಾಗಿ ಸ್ಪರ್ಧೆಗಿಳಿದಿದೆ. ನಗರದ ಶೌಚಾಲಯಗಳನ್ನು ಅತ್ಯಂತ ಉತ್ತಮ ಮಟ್ಟದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ಒಡಿಎಫ್‌ ಪ್ಲಸ್‌ ಪ್ಲಸ್‌ ಪ್ರಮುಖ ಮಾನದಂಡವಾಗಿದ್ದು, ಈಗಾಗಲೇ ಈ ನಿಟ್ಟಿನಲ್ಲಿ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ನಗರದಲ್ಲಿ ಸರ್ವೇ ನಡೆಸಿದ್ದಾರೆ. ಇನ್ನೇನು ಕೆಲವು ದಿನಗಳಲ್ಲಿಯೇ ಫಲಿತಾಂಶವೂ ಹೊರ ಬೀಳಲಿದೆ.

ಒಡಿಎಫ್‌ ಪ್ಲಸ್‌ ಪ್ಲಸ್‌ ಸ್ಥಾನಮಾನ ಹೊಂದಲು ನಗರದ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳು ಸ್ವಚ್ಛವಾಗಿರಬೇಕು. ಏರ್‌ಪ್ರಷನರ್‌, ಟವೆಲ್‌, ಸಾಬೂನು, ಮಕ್ಕಳಿಗೆ ಅನುಕೂಲಕರ ಶೌಚಾಲಯ (ಎತ್ತರ), ನ್ಯಾಪ್‌ ಕಿನ್‌, ಕೈ ಒಣಗಿಸುವ ಯಂತ್ರ ಇದ್ದು, ಶೌಚಾಲಯದ ಹೊರ ಪ್ರದೇಶ ರಾತ್ರಿ ವೇಳೆ ಕತ್ತಲಿನಿಂದ ಕೂಡಿರಬಾರದು. ಎಲ್ಲ ಶೌಚಾಲಯಗಳ ಕಟ್ಟಡಗಳು ಸುವ್ಯವಸ್ಥೆಯಲ್ಲಿವೆ ಎಂದು ಪ್ರಮಾಣೀಕರಿಸಿರಬೇಕು ಎನ್ನುವುದು ಸಹಿತ ಹಲವು ಪ್ರಮುಖ ಮಾನದಂಡಗಳ ಮೇಲೆ ಒಡಿಎಫ್‌ ಪ್ಲಸ್‌ ಪ್ಲಸ್‌ ಗ್ರೇಡ್‌ ಸಿಗುತ್ತದೆ.

ಪಾಲಿಕೆಯಲ್ಲಿ ಹರಿನಾಥ್‌ ಅವರು ಮೇಯರ್‌ ಆಗಿದ್ದಾಗ ಮಂಗಳೂರನ್ನು ಬಯಲು ಮಲ ವಿಸರ್ಜನೆ ಮುಕ್ತ ನಗರವೆಂದು (ಒಡಿಎಫ್‌) ಘೋಷಣೆ ಮಾಡಲಾಗಿತ್ತು. ಮುಂದೆ ‘ಒಡಿಎಫ್‌ ಪ್ಲಸ್‌’ ನಗರವಾಗಿ ಬೆಳೆಯಲು ಅರ್ಹತೆ ಪಡೆದಿತ್ತು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳ ಸುಸ್ಥಿರತೆ ಉದ್ದೇಶದಿಂದ ಮಂಗಳೂರು ನಗರವನ್ನು ಕಳೆದ ವರ್ಷ ಒಡಿಎಫ್‌ ಪ್ಲಸ್‌ ಆಗಿ ಘೋಷಣೆ ಮಾಡಲಾಗಿತ್ತು.

ಸರ್ವೇ ಪೂರ್ಣ

Advertisement

ಮಂಗಳೂರು ಮಹಾನಗರ ಪಾಲಿಕೆ ಈ ಬಾರಿ ಒಡಿಎಫ್‌ ಪ್ಲಸ್‌ ಪ್ಲಸ್‌ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಿದೆ. ಕಳೆದ ಬಾರಿ ಪಾಲಿಕೆಗೆ ಒಡಿಎಫ್‌ ಪ್ಲಸ್‌ ಪ್ರಮಾಣಪತ್ರ ಸಿಕ್ಕಿತು. ಒಡಿಎಫ್‌ ಪ್ಲಸ್‌ ಪ್ಲಸ್‌ ಸ್ಪರ್ಧೆಯ ಹಿನ್ನೆಲೆಯಲ್ಲಿ ಕೇಂದ್ರದ ತಂಡ ಈಗಾಗಲೇ ಮಂಗಳೂರು ನಗರದಲ್ಲಿ ಸರ್ವೇ ನಡೆಸಿದ್ದು, ಇನ್ನು ಫಲಿತಾಂಶ ಘೋಷಣೆ ಮಾಡಿಲ್ಲ. ಈ ಫಲಿತಾಂಶವು ಸ್ವಚ್ಛ ಸರ್ವೇಕ್ಷಣೆ ಉತ್ತಮ ಅಂಕ ಪಡೆಯಲು ಸಹಕಾರಿಯಾಗಲಿದೆ. -ಅಕ್ಷಯ್‌ ಶ್ರೀಧರ್‌, ಪಾಲಿಕೆ ಆಯುಕ್ತರು

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next