Advertisement
ಕೊರೊನಾ ವರ್ಷದಿಂದ ಕಾಡುತ್ತಿದ್ದರೂ ಅನಗತ್ಯ ಓಡಾಟ, ದೊಡ್ಡ ಪ್ರಮಾಣದಲ್ಲಿ ಗುಂಪುಗೂಡುವುದು, ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದು ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂಬುದು ತಜ್ಞರ ಸಲಹಾ ಸಮಿತಿಯ ಆಕ್ಷೇಪ. ಇನ್ನೊಂದೆಡೆ ರೋಗ ಲಕ್ಷಣ, ಅಸ್ವಸ್ಥತೆಯಿದ್ದರೂ ಪರೀಕ್ಷೆಗೆ ಒಳಗಾಗದೆ ಸೋಂಕು ಉಲ್ಬಣಿಸಿದ ಬಳಿಕ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಳದಿಂದ ಆಮ್ಲಜನಕ, ವೆಂಟಿಲೇಟರ್ ಸೌಲಭ್ಯ, ಐಸಿಯು ಹಾಸಿಗೆಗಳಿಗೆ ಒಮ್ಮೆಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಚಿಕಿತ್ಸಾ ವ್ಯವಸ್ಥೆಯಲ್ಲಿ ಏರುಪೇರಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್ ಒಂದೇ ಪರಿಹಾರವಲ್ಲ ಎಂಬುದನ್ನು ಅರಿತಿರುವ ಸರಕಾರ ಅನಗತ್ಯ ಸಂಚಾರ, ಜನಸಂದಣಿಯನ್ನು ತಪ್ಪಿಸಲು ಇನ್ನಷ್ಟು ಬಿಗಿ ಕ್ರಮಗಳನ್ನು ಮೇ 4ರ ವರೆಗೆ ಜಾರಿಗೊಳಿಸಿರುವುದರಿಂದ ತುರ್ತು ಸಂಚಾರ ಹೊರತುಪಡಿಸಿ ಉಳಿದ ಪ್ರಯಾಣಕ್ಕೆ ಕಡಿವಾಣ ಬೀಳಬಹುದು. ಸೋಂಕು ಹರಡುವಿಕೆಯ ವೇಗ ತಗ್ಗಿಸಲು ಹಂತ ಹಂತವಾಗಿ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸುತ್ತಿರುವ ಸರಕಾರ ಸೋಂಕಿತರಿಗೆ ಸಕಾಲದಲ್ಲಿ ಗುಣಮಟ್ಟದ ಚಿಕಿತ್ಸೆ, ಸುಶ್ರೂಷೆ ಸಿಗುವ ವ್ಯವಸ್ಥೆಯನ್ನು ಆದ್ಯತೆ ಮೇರೆಗೆ ಕಲ್ಪಿಸಬೇಕಿದೆ.
Advertisement
ಸಮುದಾಯದ ಆರೋಗ್ಯ ರಕ್ಷಣೆ ಎಲ್ಲರ ಹೊಣೆ
12:18 AM Apr 22, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.