ಕೋಲಾರ: ಕುಂಬಾರ ಸಮುದಾಯದ ಉಪ ಕಸುಬುಗಳು ನಾಶವಾಗುತ್ತಿರುವ ಸಂದರ್ಭದಲ್ಲಿ ಸಮಾಜದ ಏಳಿಗೆಗೆ ಶಿಕ್ಷಣ ಮಾತ್ರ ದಾರಿದೀಪವಾಗಿದೆ. ಅದಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮುದಾಯದ ಬೆಳವಣಿಗೆಗೆ ಸಹಕಾರಿ ಆಗಬೇಕಾಗಿದೆ ಎಂದು ವಿಧಾನ ಪರಿಷತ್ ಅಧೀನ ಕಾರ್ಯದರ್ಶಿ ಜಿ.ಪಂಕಜ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕುಂಬಾರ ಸಂಘದ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಕುರುಬರ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸನ್ಮಾನದಿಂದ ಜವಾಬ್ದಾರಿ ಹೆಚ್ಚಾಗುತ್ತದೆ. ಓದಿನ ಜವಾಬ್ದಾರಿಗಳೊಂದಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕಾಗಿದೆ ಎಂದು ವಿವರಿಸಿದರು.
ಸಮುದಾಯದ ಪ್ರತಿಯೊಬ್ಬರ ಭವಿಷ್ಯ ಅವರವರ ಕೈಯಲ್ಲೇ ಇದ್ದು ಜೀವನದ ಮುಂದಿನ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳುತ್ತೇವೆ ಎನ್ನುವುದು ವಿದ್ಯಾಭ್ಯಾಸದ ಸಂದರ್ಭದಲ್ಲೇನಿರ್ಧರಿಸಬೇಕಾಗಿದೆ, ಕೋವಿಡ್ ಬಂದ ನಂತರ ಉದ್ಯೋಗಗಳು ಕಡಿಮೆಯಾಗಿದ್ದು, ಸಮಾಜದತಪ್ಪು ದಾರಿಗಳಲ್ಲಿ ನಡೆಯದೇ ಓದು ಚಿಂತನೆಗಳನ್ನು ಮೈಗೂಡಿಸಿಕೊಂಡು ಸಾಮಾಜಿಕ ಪ್ರಜ್ಞೆ ಮೂಡಿಸಿಕೊಳ್ಳಬೇಕಾಗಿದೆ ಎಂದು ವಿವರಿಸಿದರು.
ಉತ್ತಮ ನಾಗರಿಕರಾಗಿ: ಕುಂಬಾರ ಸಮುದಾಯದಲ್ಲಿ ಬಡ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಜವಾಬ್ದಾರಿ. ಸೌಲಭ್ಯ ಪಡೆದವನುಸಮಾಜದ ಏಳಿಗೆಗಾಗಿ ದುಡಿಯುವಂತಾಗಬೇಕು,ಪ್ರತಿಯೊಬ್ಬ ಮನುಷ್ಯನು ಹಂಚಿಕೊಂಡುಬದುಕುವ ಸಂಸ್ಕೃತಿಯನ್ನು ಕಲಿಯಬೇಕಾಗಿದೆ,ಸಮಾಜಮುಖೀ ಚಟುವಟಿಕೆಗಳನ್ನು ನಡೆಸುವಮೂಲಕ ಸಮಾಜದ ಜೊತೆಗೆ ಉತ್ತಮನಾಗರಿಕನಾಗುವಂತೆ ಸಲಹೆ ನೀಡಿದರು.
ಸರಿದಾರಿ ಕಂಡುಕೊಳ್ಳಿರಿ: ಕಾರ್ಯಕ್ರಮದಲ್ಲಿ ಬೆಂಗಳೂರು ಸಿಐಡಿ ಎಸ್ಪಿ ಟಿ.ವೆಂಕಟೇಶ್ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಗುರುತಿಸಿಪ್ರೋತ್ಸಾಹಿಸುವುದರಿಂದ ಮುಂದೆ ಇನ್ನಷ್ಟುಸ್ಫೂರ್ತಿಯೊಂದಿಗೆ ಓದುವ ಮೂಲಕ ಉತ್ತಮ ಗುರುಗಳ ಪೋಷಕರ ಮಾರ್ಗದರ್ಶನಪಡೆಯುವ ಮೂಲಕ ಸಮಾಜದ ಏಳಿಗೆಗಾಗಿ ದುಡಿಯುತ್ತಾರೆ. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಮುಂಚೂಣಿಯಲ್ಲಿ ಇದ್ದು, ಸಮಾಜದ ದೇಶದಆಗುಹೋಗುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಮುಂದಿನ ದಾರಿಯನ್ನು ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಉತ್ತೇಜಿಸಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೋಕಸೇವಾಆಯೋಗದ ಮಾಜಿ ಅಧ್ಯಕ್ಷ ಜಿಲ್ಲಾ ಕುಂಬಾರ ವಿದ್ಯಾರ್ಥಿ ನಿಲಯದ ಗೌರವ ಅಧ್ಯಕ್ಷವೆಂಕಟಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಾಣಲು ಅವರನ್ನು ಇಂತಹಸಂದರ್ಭದಲ್ಲಿ ಗುರುತಿಸಿ ಉತ್ತೇಜನಮಾಡಬೇಕು, ಕುಂಬಾರ ಸಂಘದಿಂದ 11 ವರ್ಷಗಳಿಂದ ಪ್ರತಿಭಾ ಪುರಸ್ಕಾರಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಪಿಡಬ್ಲೂéಡಿನಿವೃತ್ತ ಅಭಿಯಂತರ ಬಾಬು ಕುಂಬಾರ್,ಬೆಂಗಳೂರು ಐಜಿಪಿ ಕಚೇರಿಯ ಎಎಒಮುದ್ದುಕೃಷ್ಣ, ಕುಂಬಾರ ಮುಖಂಡರಾದಶಿವಶಂಕರ್, ವಿಶ್ವನಾಥ್, ಗಿರಿಶೆಟ್ಟಿ, ಕಲ್ಲಂಡೂರು ಶ್ರೀನಿವಾಸಪ್ಪ, ಮಾಲೂರ ಅಪ್ಪಿ, ರಾಜು ಶ್ರೀನಿವಾಸಪ್ಪ, ರೆಡ್ಡಪ್ಪ, ನಿವೃತ್ತ ಶಿಕ್ಷಕ ವೆಂಕಟಸ್ವಾಮಿ, ಆನಂದ್, ಆಂಜಿನಪ್ಪ ಇತರರಿದ್ದರು.