Advertisement

ಲಸಿಕೆ ಅಭಿಯಾನದಲ್ಲಿ ಸಮುದಾಯಗಳೂ ಭಾಗಿಯಾಗಿ

01:19 AM Mar 20, 2021 | Team Udayavani |

ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಳ್ಳಲು ಮನಸ್ಸಿದ್ದರೂ ಕೆಲವರಿಗೆ ಮಾಹಿತಿಯ ಕೊರತೆ ಮತ್ತು ವಿವಿಧ ರೀತಿಯ ತೊಡಕುಗಳಿರುತ್ತವೆ. ಅವುಗಳನ್ನು ನಿವಾರಿಸಿ ಅವರಿಗೆ ಅವಶ್ಯವಿರುವ ನೆರವನ್ನು ಸಮುದಾಯದ ನಾಯಕರು, ಸಂಘಟನೆಗಳು ನೀಡಿದರೆ ಸರಕಾರದ ಯೋಜನೆ ಯಶಸ್ವಿಯಾಗಿ ಸ್ವಸ್ಥ ಸಮಾಜ ನಿರ್ಮಾಣ
ವಾಗಲು ಸಾಧ್ಯವಿದೆ.

Advertisement

ಉದಯವಾಣಿ ಆರಂಭಿಸಿದ “ಲಸಿಕೆಯೇ ಶ್ರೀ ರಕ್ಷೆ’ ಅಭಿಯಾನಕ್ಕೆ ಮೊದಲ ದಿನವೇ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಕೆಲವರು ವಿವಿಧ ಸಂದೇಹಗಳ ಬಗ್ಗೆ ಪ್ರಶ್ನೆ ಕೇಳಿದ್ದರೆ, ಇನ್ನು ಕೆಲವು ಹಿರಿಯರು ಮತ್ತು ಆರೋಗ್ಯ ಸಮಸ್ಯೆ ಇರುವವರು ನಮಗೆ ಲಸಿಕಾ ಕೇಂದ್ರಕ್ಕೆ ಹೋಗುವುದೇ ಸಮಸ್ಯೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ. ನಮಗೆ ಸ್ವಲ್ಪ ಸಹಾಯ ದೊರೆತರೆ ಖಂಡಿತಕ್ಕೂ ಲಸಿಕೆ ಪಡೆದುಕೊಳ್ಳುತ್ತೇವೆ ಎಂದಿದ್ದಾರೆ. ಆದುದರಿಂದ ವಿವಿಧ ಸಮುದಾಯದ ಮುಖಂಡರು ಆಸ್ಥೆ ತೋರಿ ವಿವಿಧ ಸಂಘಟನೆಗಳ ಮೂಲಕ ಆಯಾ ಊರಿನಲ್ಲಿರುವ ಹಿರಿಯರ ಮನೆಗೆ ಹೋಗಿ ಅವರಿಗೆ ನೆರವಾದರೆ ಸಾಕಷ್ಟು ಮಂದಿಗೆ ಉಪಕಾರವಾಗುವುದು.

ಹೆಚ್ಚಿನ ಹಿರಿಯರಿಗೆ ಮೊಬೈಲ್‌, ಕಂಪ್ಯೂಟರ್‌ ಮೂಲಕ ನೋಂದಣಿ ಕಷ್ಟವಾಗುತ್ತಿದೆ. ಇನ್ನು ಕೆಲವರಿಗೆ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಆ ಸೌಲಭ್ಯ ಇದೆಯೇ, ಯಾವಾಗ ಹೋದರೆ ಉತ್ತಮ ಎಂಬಿತ್ಯಾದಿ ಮಾಹಿತಿಗಳ ಕೊರತೆ ಇದೆ. ಇನ್ನು ಕೆಲವರು ವ್ಹೀಲ್‌ಚೇರ್‌ ಆಶ್ರಯಿಸಿದ್ದಾರೆ. ಮತ್ತೆ ಕೆಲವರು ನಡೆದು ಹೋಗುವಷ್ಟು ಶಕ್ತರಿಲ್ಲ. ಇವರಿಗೆಲ್ಲ ಊರಿನಲ್ಲಿರುವ ಸಮುದಾಯದ ಮುಖಂಡರಿಂದ ಮತ್ತು ಸಮುದಾಯದ ಸಂಘಟನೆ ಗಳಿಂದ ನೆರವು ಅಗತ್ಯವಾಗಿದೆ. ಆಯಾ ಊರಿನಲ್ಲಿ ಲಸಿಕೆ ಲಭ್ಯವಿರುವ ಮಾಹಿತಿ, ಹೋಗುವ ವ್ಯವಸ್ಥೆ ಇತ್ಯಾದಿಗಳನ್ನು ಕಲ್ಪಿಸಿದಲ್ಲಿ ಹಿರಿ ಜೀವಗಳೂ ಲಸಿಕೆಯ ಶ್ರೀರಕ್ಷೆಯನ್ನು ಬೇಗನೆ ಪಡೆಯಲು ಸಾಧ್ಯ.

ಕೋವಿಡ್ ನಿಂದಾಗಿ ದೇಶದಲ್ಲಿ ಅನೇಕ ಮಂದಿ ಆರೋಗ್ಯ ಸಮಸ್ಯೆಗೀಡಾಗಿದ್ದು, ಅದೃಷ್ಟವಶಾತ್‌ ನಿರೀಕ್ಷೆಗಿಂತಲೂ ಬೇಗನೆ ಲಸಿಕೆ ತಯಾರಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಲಸಿಕೆಯನ್ನು ಪಡೆದು ನಾವು ಕೊರೊನಾವನ್ನು ಮಣಿಸಬೇಕಾಗಿದೆ. ನಾನು ಕೂಡ ಲಸಿಕೆ ಹಾಕಿಸಿಕೊಂಡಿದ್ದು, ಯಾವುದೇ ಅಡ್ಡಪರಿಣಾಮವಾಗುವುದಿಲ್ಲ.

-ಡಾ| ಡಿ.ವೀರೇಂದ್ರ ಹೆಗ್ಗಡೆಯವರು, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ

Advertisement

ಲಸಿಕೆ ಹಾಕಿಸಿಕೊಂಡು ನಮ್ಮೊಂದಿಗೆ ಸಮಾಜವೂ ಆರೋಗ್ಯವಂತವಾಗಿರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ನಮ್ಮ ಲಸಿಕೆ ವಿಶ್ವದಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸಿಸಿದ್ದು, 70 ದೇಶಗಳಲ್ಲಿ ಈ ಲಸಿಕೆಗೆ ಬೇಡಿಕೆ ಇದೆ. ನಾನು ಲಸಿಕೆ ಹಾಕಿಸಿಕೊಂಡಿದ್ದು, ನೀವೂ ಹಾಕಿಸಿಕೊಳ್ಳಿ.

-ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಜೈನ ಮಠ,ಮೂಡುಬಿದಿರೆ

 

ಕೋವಿಡ್ ಸೋಂಕು ವಿರುದ್ಧ ಹೋರಾಡಲು ಸರಕಾರ ಹಲವು ಉಪಕ್ರಮಗಳನ್ನು ಘೋಷಿಸಿದ್ದು, ಅದರಲ್ಲಿ ಲಸಿಕೆ ಪಡೆಯುವುದೂ ಒಂದು. ಲಸಿಕೆ ಬಗ್ಗೆ ಕೆಲವರಲ್ಲಿ ಗೊಂದಲವಿದೆ. ಈ ನಿಟ್ಟಿನಲ್ಲಿ ಉದಯವಾಣಿ ಆರಂಭಿಸಿರುವ “ಲಸಿಕೆಯೇ ಶ್ರೀ ರಕ್ಷೆ’ ಅಭಿಯಾನಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ಅವರು ಓದುಗರ ಪ್ರಶ್ನೆಗಳಿಗೆ ಉತ್ತರಿಸಿ ಗೊಂದಲ, ಭೀತಿಯನ್ನು ದೂರ ಮಾಡಿದ್ದಾರೆ.

 

ನಮ್ಮ ಮನೆಯ ಹಿರಿಯ ನಾಗರಿಕರೊಬ್ಬರು ಮನೆ ಯಿಂದ ಹೊರಗೆ ಹೋಗುವವರೇ ಅಲ್ಲ. ಅವರೂ ಲಸಿಕೆ ಹಾಕಿಸಬೇಕೇ?

-ನಾಗರಾಜ್‌, ಬಂಟ್ವಾಳ
60 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿ ಕೊಳ್ಳ ಬೇಕು. ಅದರಲ್ಲಿ ಮನೆಯಲ್ಲೇ ಇರುವವರು, ಹೊರಗೆ ಹೋಗು ವವರು ಎಂಬ ವ್ಯತ್ಯಾಸವಿಲ್ಲ.

ಲಸಿಕೆ ನೀಡಲು ಆರೋಗ್ಯ ಕಾರ್ಯಕರ್ತರು ಮನೆಮನೆಗೆ ಬರುತ್ತಾರೋ?

-ರಾಧಾಕೃಷ್ಣ, ಕಾಪು
ಮನೆಬಾಗಿಲಿಗೆ ತೆರಳಿ ಲಸಿಕೆ ನೀಡುವ ಬಗ್ಗೆ ಸರಕಾರ ನಿರ್ಧರಿ ಸಿಲ್ಲ. ಅಶಕ್ತರು ಇತರರ ಸಹಾಯ ಪಡೆದು ಲಸಿಕಾ ಕೇಂದ್ರಕ್ಕೆ ಹೋಗುವುದು ಅನಿವಾರ್ಯ.

ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿ ದವರಿಗೂ ಲಸಿಕೆ ಅಗತ್ಯವೇ?

-ಹರಿಪ್ರಸಾದ್‌, ಉಡುಪಿ

ಖಂಡಿತಾ ಅಗತ್ಯ. ಒಬ್ಬರಿಗೆ ಒಂದಕ್ಕಿಂತ ಹೆಚ್ಚು ಸೋಂಕು ತಗಲಿದ ಉದಾಹರಣೆಗಳಿವೆ. ಈ ಕಾರಣಕ್ಕೆ ಪ್ರತಿಯೋರ್ವರೂ ಲಸಿಕೆ ಪಡೆದುಕೊಳ್ಳಬೇಕು.

20 ವರ್ಷದಿಂದ ಅಸ್ತಮಾದಿಂದ ಬಳಲುತ್ತಿದ್ದೇನೆ ಲಸಿಕೆ ಪಡೆಯಬಹುದೇ?

-ಸುಬ್ರಾಯ ಶೇಟ್‌, ಸಂತೆಕಟ್ಟೆ

ಅನಾರೋಗ್ಯದ ಹಿನ್ನೆಲೆಯ ವಿವರವಾದ ಮಾಹಿತಿ ಹಾಗೂ ಸೂಕ್ತ ವೈದ್ಯಕೀಯ ದಾಖಲೆ(ಡಿಸಾcರ್ಜ್‌ ಸಮ್ಮರಿ, ಈಗ ಪಡೆದುಕೊಳ್ಳುವ ಔಷಧಗಳ ವಿವರ)ಗಳನ್ನು ತೋರಿಸಿ ಲಸಿಕೆ ಪಡೆದುಕೊಳ್ಳಬಹುದು.

ಬಿಪಿ, ಶುಗರ್‌, ಅಸ್ತಮಾ ಇದ್ದವರುಯಾವ ರೀತಿಯ ದಾಖಲೆಗಳನ್ನು ನೀಡಬೇಕು?
-ವೆಂಕಟರಮಣ ಕಲ್ಕೂರ, ಪೇತ್ರಿ, ನೀಲಾವರ

ವೈದ್ಯರು ನೀಡುತ್ತಿರುವ ಔಷಧಗಳ ಬಗ್ಗೆ ದಾಖಲೆ ನೀಡಬೇಕು. ಇಂಜೆಕ್ಷನ್‌ ಅಲರ್ಜಿ ಇದ್ದವರು, ಗರ್ಭಿಣಿಯರು, ಎದೆ ಹಾಲುಣಿಸುವವರು, 18 ವರ್ಷಕ್ಕಿಂತ ಕೆಳಗಿನವರು ಲಸಿಕೆ ತೆಗೆದುಕೊಳ್ಳ ಬಾರದು.

ವಿದೇಶಕ್ಕೆ ತೆರಳುವವರು ಲಸಿಕೆ ತೆಗೆದುಕೊಳ್ಳುವುದು ಕಡ್ಡಾಯವೇ?

-ಸಂತೋಷ್‌ ಶೆಟ್ಟಿ, ಉಳಿಯಾರಗೋಳಿ

ಈವರೆಗೆ ಕಡ್ಡಾಯವಾಗಿಲ್ಲ. ನೆಗೆಟಿವ್‌ ಸರ್ಟಿಫಿಕೆಟ್‌ ಕಡ್ಡಾಯ.

Advertisement

Udayavani is now on Telegram. Click here to join our channel and stay updated with the latest news.

Next