Advertisement

ಸಾಧನೆಗೆ ಸಂವಹನ ಕೌಶಲ್ಯ ಅತೀ ಮುಖ್ಯ

04:53 PM Apr 04, 2019 | Naveen |

ದಾವಣಗೆರೆ: ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಔದ್ಯೋಗಿಕ ಕ್ಷೇತ್ರದಲ್ಲಿನ ಸಾಧನೆಗೆ ಸಂವಹನ ಕೌಶಲ್ಯ ಅತೀ ಮುಖ್ಯ ಎಂದು ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಪ್ರೊ| ಎಸ್‌.ವಿ. ಹಲಸೆ ತಿಳಿಸಿದರು.

Advertisement

ಬುಧವಾರ ಮಾಗನೂರು ಸರ್ವಮಂಗಳಮ್ಮ ಬಸಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನ ಇಂಗ್ಲಿಷ್‌ ವಿಭಾಗದಿಂದ ಸಾಫ್ಟ್‌ ಮತ್ತು ಕಮ್ಯುನಿಕೇಟಿವ್‌ ಸ್ಕಿಲ್ಸ್‌ ವಿಷಯ ಕುರಿತ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಸಮುದಾಯ ಮಾತೃಭಾಷೆಯ ಜೊತೆಗೆ ಈಗಿನ ಕಾಲದ ಅಗತ್ಯವಾಗಿರುವ ಇಂಗ್ಲಿಷ್‌ ಕಲಿಕೆಗೂ ಸಮಾನ ಆದ್ಯತೆ, ಗಮನ ನೀಡಬೇಕು ಎಂದರು.

ವಿದ್ಯಾರ್ಥಿಗಳು ಎಲ್ಲಾ ಭಾಷೆ ಕಲಿಯುವ ಮೂಲಕ ಸಂವಹನ ಕಲೆ  ಬೆಳೆಸಿಕೊಂಡಲ್ಲಿ ಉನ್ನತ ಹುದ್ದೆ ಸೇರಿದಂತೆ ಎಲ್ಲವನ್ನು ಪಡೆದುಕೊಳ್ಳುವ ಸಾಮರ್ಥ್ಯ ಬರಲಿದೆ. ಮಾತಿನ ಕೌಶಲ್ಯಕ್ಕೆ ಎಲ್ಲರನ್ನು ಸೆಳೆಯುವಂತಹ ಹಾಗೂ ಸಮಸ್ಯೆ ಇತ್ಯರ್ಥ ಮಾಡುವಂತಹ ಶಕ್ತಿ ಇದೆ. ಕೆಲಸದ ಜತೆಗೆ ಮಾತಿಕ ಕಲೆಯೂ ಗೊತ್ತಿರಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ಇಂದಿನ ಆಧುನಿಕ ಜಗತ್ತು ಬಯಸುವ ವಿಭಿನ್ನ ಕೌಶಲ್ಯ ಯೋಜನೆ, ಗುರಿ ಹೊಂದಬೇಕು. ಉದ್ಯೋಗ ಪಡೆದು ಕೊಳ್ಳುವುದಕ್ಕೆ ಇದು ಸಹಕಾರಿ ಆಗಲಿದೆ. ಅನ್ಯ ಭಾಷೆ, ಆ ಮೂಲಕ ಜ್ಞಾರ್ನಾಜನೆ ಪಡೆದುಕೊಳ್ಳುವ ಪ್ರಯತ್ನವಾಗಬೇಕು ಎಂದು ಸಲಹೆ ನೀಡಿದರು.

ಈಗ ಬಹುತೇಕರು ಆರು ತಿಂಗಳ ಸೆಮಿಸ್ಟರ್‌ ಓದುವುದರ ಬಗ್ಗೆಯೇ ಯೋಜನೆ ಹಾಕಿಕೊಳ್ಳುತ್ತಾರೆ. ಆ ವಿಷಯವನ್ನು ಆಳವಾಗಿ ತಿಳಿದುಕೊಳ್ಳುವಂತಹ ಪ್ರಯತ್ನವನ್ನೇ ಮಾಡುವುದಿಲ್ಲ. ವಿದ್ಯಾರ್ಥಿ ಜೀವನದಲ್ಲೇ ಮುಂದಿನ ಭವಿಷ್ಯದ ಬಗ್ಗೆ ಯೋಜಿಸಿ, ಅದೇ ಮಾರ್ಗದಲ್ಲಿ ಯಶ ಕಾಣುವ ಸತತ ಪ್ರಯತ್ನವನ್ನೂ ಮಾಡಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಸುಲಭವಾಗಿ ಎದುರಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕು. ಆದರೆ, ಈಗಿನ ಅನೇಕಾನೇಕ ವಿದ್ಯಾರ್ಥಿಗಳು ಮೊಬೈಲ್‌ನಲ್ಲೇ ಮುಳುಗಿ ಹೋಗಿರುತ್ತಾರೆ. ಮೊಬೈಲ್‌ ದಾಸತನಕ್ಕೆ ಆದಷ್ಟು ಕಡಿವಾಣ ಕಾಣಬೇಕಾಗಿದೆ. ಮೊಬೈಲ್‌ನ್ನು ಅವಶ್ಯಕತೆ ಅನುಗುಣವಾಗಿ ಬಳಕೆ ಮಾಡಿಕೊಂಡು ಓದಿನ ಕಡೆ ಹೆಚ್ಚಿನ ಆಸಕ್ತಿ ತೋರಿಸಿದರೆ ಮುಂದಿನ ಭವಿಷ್ಯ ಉತ್ತಮವಾಗಲಿದೆ ಎಂದರು.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ| ಸಿ.ಎಚ್‌. ಮುರಿಗೇಂದ್ರಪ್ಪ ಮಾತನಾಡಿ, ಯಾವುದೇ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಸಂವಹನ ಕೌಶಲ್ಯವನ್ನು ಒಂದು ವಿಷಯವಾಗಿ ಕಡ್ಡಾಯಗೊಳಿಸಿಲ್ಲ. ಸೆಮಿಸ್ಟರ್‌ ಗಳಲ್ಲಿ ಒಂದು ವಿಷಯ ಕಡಿಮೆ ಮಾಡಿದರೂ ಪರವಾಗಿಲ್ಲ. ಸಂವಹನ ಕೌಶಲ್ಯ ಕಡ್ಡಾಯ ಮಾಡಬೇಕು. ಮುಂದಿನ ದಿನಗಳಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಸಂವಹನ ಕೌಶಲ್ಯ ಒಂದು ವಿಷಯವಾಗಿ ಜಾರಿಗೆ ತರಬೇಕು. ಆ ವಿಷಯವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಓದುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

Advertisement

ಪ್ರಾಚಾರ್ಯ ಡಾ| ಕೆ. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಎನ್‌.ಆರ್‌. ಪುರ ಕಾಲೇಜು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ನಿಜಾಮುದ್ದೀನ್‌, ಎವಿಕೆ ಕಾಲೇಜು ಪ್ರಾಚಾರ್ಯ ಪ್ರೊ| ಪಿ.ಎಸ್‌. ಶಿವಪ್ರಕಾಶ್‌, ಪ್ರೊ| ಕೆ.ಎಸ್‌. ಎನ್‌.ರಾವ್‌, ಎಂ.ಎಸ್‌. ವಿಜಯ್‌, ಪ್ರೊ| ಜೆ. ತಾರಾಮಣಿ, ಶೃತಿ, ದೀಪಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next