ಹುಕ್ಕೇರಿ: ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಜಾಣರಿದ್ದರೂ, ಆ ಜಾಣತನವನ್ನು ಬಿಂಬಿಸುವ ಸಂವಹನ ಕಲೆಯ ಕೊರತೆಯಿಂದ ಉದ್ಯೋಗಾವಕಾಶ ಕಳೆದುಕೊಳ್ಳುತ್ತಿದ್ದಾರೆಂದು ಮಾಜಿ ಸಂಸದರು ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2022-23 ನೇ ಶೈಕ್ಷಣಿಕ ಸಾಲಿನ ವಿವಿಧ ಸಂಘಗಳ ಕಾರ್ಯ ಚಟುವಟಿಕೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕನ್ನಡದ ಜತೆ ಇಂಗ್ಲಿಷ್ ಕಲಿಯಬೇಕು. ಶಿಕ್ಷಣ ಪಡೆದು ಇನ್ನೊಬ್ಬರ ಕೈಯಲ್ಲಿ ನೌಕರಿ ಮಾಡುವ ಬದಲಿಗೆ ಉದ್ಯೋಗ ಪ್ರಾರಂಭಿಸಿ ಇತರರಿಗೆ ನೌಕರಿ ಕೊಟ್ಟು ಮಾಲೀಕರಾಗಲು ಪ್ರಯತ್ನಿಸಬೇಕೆಂದು ಎಂದು ಸಲಹೆ ನೀಡಿದರು.
ಬೆಲ್ಲದ ಬಾಗೇವಾಡಿ ಬ್ಯಾಂಕ್ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 10 ಕಂಪ್ಯೂಟರ್ ಒದಗಿಸಲಾಗುವುದೆಂದು ಹೇಳಿದರು. ಈ ಇದೇ ಸಂದರ್ಭದಲ್ಲಿ ದಿ| ಉಮೇಶ್ ಕತ್ತಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ, ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ ಮಾತನಾಡಿದರು. ಪುರಸಭೆ ಮತ್ತು ಸಿಡಿಸಿ ಸದಸ್ಯ ರಾಜು ಮುನ್ನೋಳಿ ಅತಿಥಿಯಾಗಿದ್ದರು. ಪ್ರಾಚಾರ್ಯ ವಿರೂಪಾಕ್ಷಿ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಡಾ| ಈರಣ್ಣ ಭೂಸ್ಥಳಿ,
ಹಳೆ ವಿದ್ಯಾರ್ಥಿ ಸಂಘದ ಸಂಯೋಜಕ ರಾಜೇಶ್ ಕುಂಬಾರ, ಸಾಂಸ್ಕೃತಿಕ ಘಟಕದ ಸಂಯೋಜಕ ಎಲ್. ಬಿ.ಪಟಾಯಿತ, ಐ.ಟಿ.ಸಂಯೋಜಕ ಪ್ರೊ.ಮಲ್ಲಿಕಾರ್ಜುನ ದಲಾಲ್, ಕ್ರೀಡೆ ಹಾಗೂ ರೋವರ್ಸ ಮತ್ತು ರೇಂಜರ್ಸ ಘಟಕದ ಸಂಯೋಜಕ ವೈ.ಎಸ್. ಢಂಗೆ, ಎನ್.ಎಸ್. ಎಸ್ ಮತ್ತು ರೆಡ್ ಕ್ರಾಸ್ ಘಟಕದ ಸಂಯೋಜಕ ಬಿ.ಎಂ.ವಾಸನ್, ದೈಹಿಕ ದೌರ್ಜನ್ಯ ತಡೆ ಹಾಗೂ ಎಸ್.ಸಿ ಮತ್ತು ಎಸ್.ಟಿ ಘಟಕದ ಸಂಯೋಜಕಿ ರಾಣಿ ರತ್ನಪ್ರಭಾ, ಮಹಿಳಾ ಸಬಲೀಕರಣ ಘಟಕದ ಸಂಯೋಜಕಿ ರೇಖಾ ನೀರಲಗಿ ಮತ್ತು ಎಲ್. ಎಂ.ಎಸ್. ಸಂಯೋಜಕ ಸುಹೇಲ್ ಸತ್ತೀಕರ, ವ್ಯಾಪಾರಸ್ಥ ಚನ್ನಪ್ಪ ಗಜಬರ್ ಇದ್ದರು.