Advertisement

Commonwealth Youth Games: ಅನುಪ್ರಿಯಾ, ಶೋನ್‌ಗೆ ಪದಕ

11:48 PM Aug 08, 2023 | Team Udayavani |

ಹೊಸದಿಲ್ಲಿ : ಟ್ರಿನ್‌ಬಾಗೋದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್‌ ಯುತ್‌ ಗೇಮ್ಸ್‌ನಲ್ಲಿ ಭಾರತದ ಈಜುಪಟು ಶೋನ್‌ ಗಂಗೂಲಿ ಮತ್ತು ಶಾಟ್‌ಪುಟರ್‌ ಅನುಪ್ರಿಯಾ ವಿ. ಶಶಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಜಯಿಸಿದ್ದಾರೆ.

Advertisement

ಶೋನ್‌ ಗಂಗೂಲಿ ಬಾಲಕರ 400 ಮೀ. ಮಿಡ್ಲೆ ಸ್ಪರ್ಧೆಯಲ್ಲಿ 4:25.47 ಸಾಧನೆಯೊಂದಿಗೆ ದ್ವಿತೀಯ ಸ್ಥಾನಿಯಾದರು. ಇಂಗ್ಲೆಂಡ್‌ನ‌ ರೀಸ್‌ ಗ್ರೇಡಿ ಚಿನ್ನ (4:24.16) ಮತ್ತು ಸ್ಕಾಟ್ಲೆಂಡ್‌ನ‌ ಇವಾನ್‌ ಡೇವಿಡ್‌ಸನ್‌ ಕಂಚು ಗೆದ್ದರು (4:25.68).

ಈ ಸಾಧನೆಯ ವೇಳೆ ಶೋನ್‌ ಗಂಗೂಲಿ ಆರ್ಯನ್‌ ನೆಹ್ರಾ ಅವರ ರಾಷ್ಟ್ರೀಯ ದಾಖಲೆ ಯನ್ನು ಮುರಿದರು (4:27.62). ಆರ್ಯನ್‌ ಕಳೆದ ತಿಂಗಳ ರಾಷ್ಟ್ರೀಯ ಕೂಟದಲ್ಲಿ ಈ ಸಾಧನೆಗೈದಿದ್ದರು.

ಬಾಲಕಿಯರ ಶಾಟ್‌ಪುಟ್‌ ವಿಭಾಗದಲ್ಲಿ ಅನುಪ್ರಿಯಾ 15.62 ಮೀ. ಸಾಧನೈಗದು ತೃತೀಯ ಸ್ಥಾನಿಯಾದರು. 3ನೇ ಪ್ರಯತ್ನದಲ್ಲಿ ಈ ದೂರ ದಾಖಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next