Advertisement

ಕಾಮನ್ವೆಲ್ತ್‌ ಗೇಮ್ಸ್‌ ಉದ್ಘಾಟನೆಗೆ ಸೀರೆ ಬದಲು ಪ್ಯಾಂಟು ಬಳಕೆ!

06:10 AM Feb 21, 2018 | |

ನವದೆಹಲಿ: ವಿಶ್ವದ ಯಾವುದೇ ಕ್ರೀಡಾಕೂಟಗಳಿರಲಿ, ಅದು ಒಲಿಂಪಿಕ್ಸ್‌ ಅಗಿರಲಿ ಅಥವಾ ಕಾಮನ್ವೆಲ್ತ್‌ ಆಗಿರಲಿ ಕೂಟದ ಉದ್ಘಾಟನೆ ಸಂದರ್ಭ ಸೀರೆಯುಟ್ಟ ಭಾರತೀಯ ಮಹಿಳಾ ಕ್ರೀಡಾಪಟುಗಳು ಶಿಸ್ತಿನ ಪಥ ಸಂಚಲನವನ್ನು ನೋಡುವುದೇ ಒಂದು ಖುಷಿ.

Advertisement

ವಿಶ್ವದ ಎಲ್ಲ ರಾಷ್ಟ್ರಗಳಿಗಿಂತ ಪಥ ಸಂಚಲನದಲ್ಲಿ ಭಾರತದ ಮಹಿಳಾ ಸ್ಪರ್ಧಿಗಳು ವಿಭಿನ್ನವಾಗಿ ಕಾಣಿಸುತ್ತಿದ್ದರು. ಸೀರೆಯುಟ್ಟ ನಾರಿಯರು ಕೇವಲ ಭಾರತವನ್ನಲ್ಲ ಭಾರತದ ಇಡೀ ಸಂಸ್ಕೃತಿಯನ್ನೇ ವಿಶ್ವ ಮಟ್ಟದ ಕೂಟಗಳಲ್ಲಿ ಬಿಂಬಿಸುತ್ತಿದ್ದರು. ಇದೀಗ ಕಾಮನ್ವೆಲ್ತ್‌ ಕೂಟದ ಇತಿಹಾಸವೊಂದರಲ್ಲಿ ಹೊಸ ಬದಲಾವಣೆಯನ್ನು ಭಾರತದ ಮಟ್ಟಿಗೆ ತರಲು ಐಒಎ (ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ) ನಿರ್ಧರಿಸಿದೆ.

ಹೌದು, ಇದುವರೆಗಿದ್ದ ಸೀರೆಗೆ ಎಳ್ಳುನೀರು ಬಿಟ್ಟು ಆಟಗಾರ್ತಿಯರು ಬ್ಲೇಜರ್‌ ವಿತ್‌ ಪ್ಯಾಂಟ್‌ ಧರಿಸಲು
ಸೂಚಿಸಿದೆ. ಇದಕ್ಕೆ ಕಾರಣ ಏನು ಎಂದು ಕೇಳಿದರೆ ಸೀರೆಗಿಂತ ಪ್ಯಾಂಟ್‌ ಹೆಚ್ಚು ಆರಾಮವಾಗಿರುತ್ತದೆ ಎನ್ನುವುದು ಐಒಎ ಉತ್ತರ. ಈ ಹಿಂದೆ ಅಥ್ಲೀಟ್‌ಗಳು ಹಲವು ಬಾರಿ ಸೀರೆ ಉಡುವುದು ಕಷ್ಟ ಎಂದು ಹೇಳಿದ್ದರು. 4-5 ಗಂಟೆ ಸೀರೆಯುಟ್ಟು ನಿಲ್ಲುವುದು, ಸೀರೆಯುಡಲು ಇನ್ನೊಬ್ಬರ ಸಹಾಯ ತೆಗೆದುಕೊಳ್ಳಬೇಕಿರುವುದು ಎನ್ನುವ ದೂರು ಕೇಳಿ ಬಂದಿದೆ. ಕಳೆದ ಒಲಿಂಪಿಕ್ಸ್‌ ಕೂಟದ ಸಂದರ್ಭದಲ್ಲೂ ದೂರು ಕೇಳಿ ಬಂದಿತ್ತು. ಇದನ್ನೆಲ್ಲ ಪರಿಗಣಿಸಿ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಐಒಎ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next