Advertisement
ಬ್ಯಾಡ್ಮಿಂಟನ್: 4 ಸ್ವರ್ಣದ ನಿರೀಕ್ಷೆ :
Related Articles
Advertisement
ಇದೇ ಮೊದಲ ಬಾರಿಗೆ ಕಾಮನ್ವೆಲ್‌ಗೆ ಟಿ20 ಕ್ರಿಕೆಟ್, ಮಹಿಳಾ ಕ್ರೀಡೆಯ ರೂಪದಲ್ಲಿ ಸೇರ್ಪಡೆಯಾಗಿದೆ. ಇದರಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತವೂ ಸ್ಪರ್ಧಿಸುತ್ತಿದೆ. ಈ ತಂಡಕ್ಕೆ ಆಸ್ಟ್ರೇಲಿಯ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ನಿಂದ ಪ್ರಬಲ ಸ್ಪರ್ಧೆಯಿದೆ. ಇದನ್ನೆಲ್ಲ ಮೀರಿ
ಭಾರತೀಯರು ಚಿನ್ನ ಗೆದ್ದರೆ, ಅದೇನು ಅಚ್ಚರಿಯ ಸಾಧನೆಯಲ್ಲ. ಆ ಶಕ್ತಿ ಭಾರತೀಯರಿಗಿದೆ.
ಹಾಕಿ : ಆಸ್ಟ್ರೇಲಿಯವೇ ಪ್ರಬಲ ಎದುರಾಳಿ :
ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪ್ರಬಲ ಜರ್ಮನಿಯನ್ನು ಮಣಿಸಿ ಕಂಚು ಗೆದ್ದಿತ್ತು. ಈಗ ಭಾರತಕ್ಕಿರುವ ದೊಡ್ಡ ಸ್ಪರ್ಧೆ ಎಂದರೆ ಆಸ್ಟ್ರೇಲಿಯದ್ದು. ಈ ತಂಡವನ್ನು ಭಾರತ ಮಣಿಸಿದರೆ, ಚಿನ್ನ ಗೆದ್ದಂತೆಯೇ ಲೆಕ್ಕ. ತಂಡವೂ ಬಲಿಷ್ಠವಾಗಿದೆ. ಇದಕ್ಕೆ ಹೋಲಿಸಿದರೆ, ಮಹಿಳಾ ತಂಡದ ಮೇಲೆ ಬಹಳ ನಿರೀಕ್ಷೆಗಳಿಲ್ಲ.
ಟಿಟಿಯಲ್ಲಿ ಮೂರು ಸ್ವರ್ಣಕ್ಕೆ ಗುರಿ :
ಕಾಮನ್ವೆಲ್ ಮಟ್ಟಿಗೆ ಟೇಬಲ್ ಟೆನಿಸ್‌ನಲ್ಲಿ ಭಾರತ ಪ್ರಬಲ ಸ್ಪರ್ಧಿ. ಗೋಲ್ಡ್ ಕೋಸ್ಟ್ ಕಾಮನ್ವೆಲ್‌ನಲ್ಲಿ ಭಾರತೀಯರು ಮೂರು ಚಿನ್ನ ಗೆದ್ದಿದ್ದರು. ಪುರುಷ, ಮಹಿಳಾ ತಂಡಗಳು ಚಿನ್ನ ಗೆದ್ದಿದ್ದವು. ಹಾಗೆಯೇ ಮಹಿಳಾ ಸಿಂಗಲ್ಸ್ ನಲ್ಲಿ ಮಣಿಕಾ ಬಾತ್ರಾ ಗೆಲುವು ಸಾಧಿಸಿದ್ದರು. ಈಗಿನ ಶ್ರೇಯಾಂಕದ ಪ್ರಕಾರ ಭಾರತೀಯ ತಂಡಕ್ಕೆ ಪ್ರಬಲ ಸ್ಥಾನವೇ ಇದೆ. ಅದಕ್ಕೆ ಸರಿಯಾಗಿ ಆಡಿದರೆ ಭಾರತಕ್ಕೆ ಮತ್ತೆ ಮೂರು ಚಿನ್ನ ಬರುವುದು ಆಶ್ಚರ್ಯವಲ್ಲ.
ವೇಟ್‌ಲಿಫ್ಟಿಂಗ್ ಭಾರತದ ಚಿನ್ನದ ಗಣಿ :
ಕಾಮನ್ವೆಲ್‌ನಲ್ಲಿ ಭಾರತ ಗರಿಷ್ಠ ಚಿನ್ನ ನಿರೀಕ್ಷೆ ಮಾಡಬಹುದಾದ ಸ್ಪರ್ಧೆಗಳಲ್ಲಿ ವೇಟ್‌ಲಿಫ್ಟಿಂಗ್ ಕೂಡ ಒಂದು. ಇಲ್ಲಿ ಕಣದಲ್ಲಿರುವ ಸ್ಪರ್ಧಿಗಳೆಲ್ಲ ಒಂದಲ್ಲ ಒಂದು ಕೂಟದಲ್ಲಿ ಅದ್ಭುತ ಸಾಧನೆ ಮಾಡಿ ನಂಬಿಕೆ ಮೂಡಿಸಿರುವವರೇ. ಸೈಕೋಮ್ ಮೀರಾಭಾಯಿ ಚಾನು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಸಾಧಕಿ. 2021ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದ ಬಿಂದ್ಯಾರಾಣಿ ಕೂಡ ಕಣದಲ್ಲಿದ್ದಾರೆ. ಕುಂದಾಪುರದ ಪಿ.ಗುರುರಾಜ್ ಹಿಂದಿನ ಕಾಮನ್ವೆಲ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಈ ಬಾರಿ ಅವರು ಚಿನ್ನವನ್ನೇ ಗೆಲ್ಲುತ್ತಾರೆಂಬ ವಿಶ್ವಾಸ ಚಿಗುರಿದೆ. ಅವರು ಪ್ರಸ್ತುತ ವಿಶ್ವ ಶ್ರೇಯಾಂಕದಲ್ಲಿ 9ನೇ ಸ್ಥಾನದಲ್ಲಿದ್ದಾರೆ. 2018ರ ಕಾಮನ್ವೆಲ್‌ನ 76 ಕೆಜಿ ವಿಭಾಗದಲ್ಲಿ ಪೂನಂ ಯಾದವ್ ಚಿನ್ನ ಗೆದ್ದಿದ್ದರು. ಈ ಬಾರಿ ಅದನ್ನೇ ಪುನರಾವರ್ತಿಸುವುದು ಇವರಿಗೆ ದೊಡ್ಡ ಸಂಗತಿಯಾಗಲಿಕ್ಕಿಲ್ಲ. ಇವರೆಲ್ಲರೂ ದೊಡ್ಡ ಸಾಧಕರೇ ಆಗಿರುವುದರಿಂದ ದೊಡ್ಡದ್ದನ್ನೇ ನಿರೀಕ್ಷೆ ಮಾಡಲಾಗುತ್ತಿದೆ.
ನಿಖತ್, ಲವ್ಲಿನಾ, ಪಂಘಲ್ ಮೇಲೆ ಭರವಸೆ :
ಪ್ರಸ್ತುತ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿರುವ ಮಹಿಳಾ ಆಟಗಾರ್ತಿ, ಹೈದರಾಬಾದ್‌ನ ನಿಖತ್ ಜರೀನ್ (50 ಕೆಜಿ) ಬಂಗಾರದ ಭರವಸೆ ಮೂಡಿಸಿದ್ದಾರೆ. ಈಕೆಗೆ ಸ್ವರ್ಣ ಪದಕವನ್ನು ಕೊರಳಿಗೇರಿಸಿಕೊಳ್ಳುವುದು ಈಗಿನ ಲೆಕ್ಕಾಚಾರದಲ್ಲಿ ಒಂದು ಸವಾಲಿನ ಸಂಗತಿಯೇ ಅಲ್ಲ. ಇನ್ನು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿರುವ ಲವ್ಲಿನಾ ಬೋರ್ಗೋಹೇನ್ (70 ಕೆಜಿ) ಸ್ವಲ್ಪ ಪರಿಶ್ರಮವಹಿಸಿದರೂ ಚಿನ್ನ ಗೆಲ್ಲುತ್ತಾರೆ. ಪುರುಷರ ಪೈಕಿ ಅಮಿತ್ ಪಂಘಲ್ (51 ಕೆಜಿ) ಮೇಲೆ ಭರ್ಜರಿ ನಿರೀಕ್ಷೆಗಳಿವೆ. ಇವರ ಹಿಂದಿನ ಸಾಧನೆಗಳು ಅದಕ್ಕೆ ಪೂರಕವಾಗಿವೆ.
ಹೊಸ ಕ್ರೀಡೆಗಳು :
ಮಹಿಳಾ ಟಿ20 ಕ್ರಿಕೆಟ್ :
ಕಾಮನ್ವೆಲ್ ಗೇಮ್ಸ್‌ನಲ್ಲಿ ಟಿ20 ಕ್ರಿಕೆಟ್ ಇದೇ ಮೊದಲ ಬಾರಿಗೆ ಪ್ರವೇಶ ಪಡೆದಿದೆ. ಆದರೆ ಇಲ್ಲಿನ ವಿಶೇಷವೆಂದರೆ ಮಹಿಳಾ ಟಿ20ಗೆ ಮಾತ್ರ ಸ್ಥಾನ ನೀಡಿರುವುದು. ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಇಲ್ಲಿ ಆಡಲಿದೆ. ಪುರುಷರ ಟಿ20 ಕ್ರಿಕೆಟ್‌ಗೆ ಈ ಬಾರಿ ಸ್ಥಾನ ನೀಡಿಲ್ಲ. ಇದಕ್ಕೆ ಕಾರಣವೂ ಸರಳ. ಈ ಅವಧಿಯಲ್ಲಿ ಪುರುಷರ ತಂಡಗಳು ಬೇರೆಬೇರೆ ಕೂಟಗಳಲ್ಲಿ ನಿರಂತರ ಪಾಲ್ಗೊಳ್ಳುತ್ತಿರುತ್ತವೆ.
3×3 ಬಾಸ್ಕೆಟ್‌ಬಾಲ್ :
ಮಾಮೂಲಿ ಬಾಸ್ಕೆಟ್‌ಬಾಲ್ ಪಂದ್ಯಗಳನ್ನು 94 ಅಡಿ ಉದ್ದ, 50 ಅಡಿ ಅಗಲದ ಅಂಕಣದಲ್ಲಿ; ಎರಡೂ ತಂಡಗಳು ತಲಾ ಐವರು ಆಟಗಾರರೊಂದಿಗೆ ಆಡುತ್ತವೆ. ಪಂದ್ಯದ ಅವಧಿ 40 ನಿಮಿಷ. ಈ ಬಾರಿ ಕಾಮನ್ವೆಲ್‌ನಲ್ಲಿ 3×3 ಮಾದರಿಯ ಬಾಸ್ಕೆಟ್‌ಬಾಲ್ ಅನ್ನು ಪರಿಚಯಿಸಲಾಗುತ್ತಿದೆ. ಇದು ಅತ್ಯಂತವಾಗಿ ನಡೆಯುತ್ತದೆ. ಹಾಗಾಗಿ ಸಂಘಟಕರಿಗೆ ಸಮಯವೂ ಉಳಿಯುತ್ತದೆ. ಅಷ್ಟೇ ರೋಮಾಂಚಕವೂ ಆಗಿರುತ್ತದೆ. ಈ ಮಾದರಿಯಲ್ಲಿ ಎರಡೂ ತಂಡಗಳಲ್ಲಿ ತಲಾ ಮೂವರು ಮಾತ್ರ ಆಡುತ್ತಾರೆ. ಪಂದ್ಯದ ಅವಧಿ 10 ನಿಮಿಷ ಮಾತ್ರ.
3×3 ಗಾಲಿಕುರ್ಚಿ ಬಾಸ್ಕೆಟ್‌ಬಾಲ್ :
ಇನ್ನೊಂದು ಮಹತ್ವದ ಸಂಗತಿಯೆಂದರೆ 3×3 ಬಾಸ್ಕೆಟ್‌ಬಾಲ್ ಮಾದರಿಯಲ್ಲೇ ದಿವ್ಯಾಂಗರಿಗಾಗಿ ಕಾಮನ್ವೆಲ್ ಸಂಘಟಕರು ಗಾಲಿಕುರ್ಚಿ ಸ್ಪರ್ಧೆಗಳನ್ನು ಅಳವಡಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ಕೂಟದಲ್ಲಿ ಹೀಗೊಂದು ಸ್ಪರ್ಧೆ ಸೇರಿಕೊಂಡಿದೆ. ಇದನ್ನು ಸ್ಮಿತ್‌ಫೀಲ್ಡ್ ಅಂಕಣದಲ್ಲಿ ಸಂಘಟಕರು ನಡೆಸುತ್ತಾರೆ. ಇಲ್ಲೂ ಕೂಡ ಭಾರತಕ್ಕೆ ಅರ್ಹತೆ ಸಿಕ್ಕಿಲ್ಲ.
ಅಂಗವಿಕಲರ ಟೇಬಲ್ ಟೆನಿಸ್ :
ಅಂಗವಿಕಲರ ಟೇಬಲ್ ಟೆನಿಸ್ ಅನ್ನು ಈ ಬಾರಿಯ ಕೂಟಕ್ಕೆ ಸೇರಿಸಬೇಕೆಂದು 2019ರ ಆಗಸ್ಟ್‌ನಲ್ಲೇ ತೀರ್ಮಾನವಾಗಿತ್ತು. ಅಂತೆಯೇ ಈ ಬಾರಿ ಅದನ್ನು ಸೇರಿಸಲಾಗಿದೆ. ಈ ಸ್ಪರ್ಧೆಗಳೆಲ್ಲ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ನಡೆಯಲಿವೆ. ಈ ಕೂಟದಲ್ಲಿ ಒಟ್ಟು 32 ಮಂದಿ ಪಾಲ್ಗೊಳ್ಳುತ್ತಾರೆ. ಮಹಿಳೆಯರು, ಪುರುಷರ ವಿಭಾಗದಲ್ಲಿ ತಲಾ 16 ಮಂದಿ ಸೆಣೆಸಲಿದ್ದಾರೆ. ಇಲ್ಲಿ ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಹಾಗಾಗಿ 4 ಚಿನ್ನದ ಪದಕಗಳಿವೆ.
ಸಾಲುಸಾಲು ಪದಕಗಳ ನಿರೀಕ್ಷೆ :
2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರವಿಕುಮಾರ್ ದಹಿಯಾ ಬೆಳ್ಳಿ, ಭಜರಂಗ್ ಪುನಿಯ ಕಂಚು ಗೆದ್ದಿದ್ದರು. ವಸ್ತುಸ್ಥಿತಿಯಲ್ಲಿ ಇಬ್ಬರೂ ಚಿನ್ನ ಗೆಲ್ಲಬಲ್ಲಷ್ಟು ಸಮರ್ಥರಾಗಿದ್ದರು. ಇನ್ನು ದೀಪಕ್ ಪುನಿಯ, ವಿನೇಶ್ ಫೊಗಾಟ್ ಪ್ರಬಲ ಸ್ಪರ್ಧಿಗಳು. ಟೋಕಿಯೊದಲ್ಲಿ ಇವರು ಪದಕ ಗೆಲ್ಲುವುದು ಸಣ್ಣ ತಪ್ಪಿನಿಂದ ತಪ್ಪಿಹೋಯಿತು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಸಾಕ್ಷಿ ಮಲಿಕ್, 2021ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದ ದಿವ್ಯಾ ಕಕ್ರಾನ್ ಕೂಡ ಕಣದಲ್ಲಿದ್ದಾರೆ. ಈ ಪೈಕಿ ರವಿಕುಮಾರ್, ಭಜರಂಗ್, ಫೊಗಾಟ್, ದೀಪಕ್‌ರಿಂದ ಚಿನ್ನವನ್ನೇ ನಿರೀಕ್ಷಿಸಲಾಗುತ್ತಿದೆ. ಸಾಕ್ಷಿ, ಕಕ್ರಾನ್ ಒಂದಲ್ಲ ಒಂದು ಪದಕವನ್ನಂತೂ ಗೆಲ್ಲಬಲ್ಲರು.
ದೀಪಿಕಾ, ಜೋಶ್ನಾ, ಸೌರವ್… :
ಸ್ಕ್ವಾಷ್‌ನಲ್ಲಿ ಭಾರತದ ಪರ ಅತ್ಯಂತ ಅನುಭವಿಗಳು, ಪ್ರತಿಭಾವಂತರು ಕಣದಲ್ಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಸೌರವ್ ಘೋಷಾಲ್, ಮಹಿಳಾ ಸಿಂಗಲ್ಸ್‌ನಲ್ಲಿ ಜೋಶ್ನಾ ಚಿನ್ನಪ್ಪ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಇನ್ನು ಮಹಿಳಾ ಡಬಲ್ಸ್‌ನಲ್ಲಿ ದೀಪಿಕಾ-ಜೋಶ್ನಾ ಗ್ಲಾಸೊYà ಕಾಮನ್ವೆಲ್‌ನಲ್ಲಿ ಚಿನ್ನ ಗೆದ್ದಿದ್ದರು. ಈ ಬಾರಿಯೂ ಅದನ್ನೇ ಪುನರಾವರ್ತಿಸಲಿ ಎಂಬ ಹಾರೈಕೆ ಅಭಿಮಾನಿಗಳದ್ದು. ವಿಶ್ವಕೂಟದ ಮಿಶ್ರ ಡಬಲ್ಸ್‌ನಲ್ಲಿ ಸೌರವ್-ದೀಪಿಕಾ ಜೋಡಿ ಪ್ರಶಸ್ತಿ ಗೆದ್ದಿತ್ತು. ದೀಪಿಕಾ ಈ ಸಾಧನೆ ಮಾಡಿದ್ದು ಎರಡು ಮಕ್ಕಳ ತಾಯಿಯಾಗಿ ವಿಶ್ರಾಂತಿ ಪಡೆದು, ಮತ್ತೆ ಕಣಕ್ಕೆ ಮರಳಿದ ನಂತರ! ಹೀಗಾಗಿ ಅವರನ್ನು ಕಡೆಗಣಿಸುವ ಸ್ಥಿತಿಯಲ್ಲಿ ಎದುರಾಳಿಗಳಿಲ್ಲ.
215: ಅಧಿಕೃತವಾಗಿ ಬರ್ಮಿಂಗ್ ಹ್ಯಾಮ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಕ್ರೀಡಾಪಟುಗಳ ಸಂಖ್ಯೆ 215. ಇವರಲ್ಲಿ ಕೆಲವರು ನಾನಾ ಕಾರಣಗಳಿಂದ ಹೊರಗುಳಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.
141 : ಈ ಬಾರಿ 19 ಕ್ರೀಡೆಗಳ 141 ಸ್ಪರ್ಧೆಗಳಲ್ಲಿ ಭಾರತೀಯರು ಕಣಕ್ಕಿಳಿಯಲಿದ್ದಾರೆ.
503: ಭಾರತ ಈ ವರೆಗೆ ಒಟ್ಟು 503 ಪದಕ ಗೆದ್ದಿದೆ. ಚಿನ್ನ 181, ಬೆಳ್ಳಿ 173 ಮತ್ತು ಕಂಚು 149. ಚಿನ್ನದ ಪದಕ ಲೆಕ್ಕಾಚಾರದಲ್ಲಿ ಭಾರತಕ್ಕೆ 4ನೇ ಸ್ಥಾನ.
03 : ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 3ನೇ ಗೇಮ್ಸ್ ಇದಾಗಿದೆ. 1934ರಲ್ಲಿ ಲಂಡನ್, 2002ರಲ್ಲಿ ಮ್ಯಾಂಚೆಸ್ಟರ್ ಬಳಿಕ ಈಗ ಬರ್ಮಿಂಗ್‌ಹ್ಯಾಮ್ ಸರದಿ.
01: ಭಾರತಕ್ಕೂ ಒಮ್ಮೆ ಗೇಮ್ಸ್ ಆತಿಥ್ಯ ಲಭಿಸಿತ್ತು. 2010ರ ಈ ಪಂದ್ಯಾವಳಿ ಹೊಸದಿಲ್ಲಿಯಲ್ಲಿ ಅದ್ಧೂರಿಯಿಂದ ನಡೆದಿತ್ತು.
05: ಆತಿಥ್ಯ ಹಾಗೂ ಪದಕ ಸಾಧನೆಯಲ್ಲಿ ಮುಂಚೂ ಣಿಯಲ್ಲಿರುವ ದೇಶ ಆಸ್ಟ್ರೇಲಿಯ. ಕಾಂಗರೂಗಳ ನಾಡಿನಲ್ಲಿ ಅತ್ಯಧಿಕ 5 ಸಲ ಗೇಮ್ಸ್ ನಡೆದಿದೆ.
2,415: ಆಸ್ಟ್ರೇಲಿಯ ಗೆದ್ದ ಒಟ್ಟು ಪದಕಗಳ ಸಂಖ್ಯೆ 2,415. ಇದರಲ್ಲಿ ಚಿನ್ನದ ಪದಕಗಳ ಪಾಲೇ 932. ಇದೂ ದಾಖಲೆ.
ಲಾಂಛನ ರಚಿಸಿದ್ದು 10ರ ಬಾಲಕಿ ಎಮ್ಮಾಲೂ! :
ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ ಲಾಂಛನ ಬಹಳ ವಿಶೇಷವಾದದ್ದು. ಇದರ ರಚನೆಯ ಕಾರಣಕ್ಕಾಗಲೀ, ಸೌಂದರ್ಯ, ಅರ್ಥವಂತಿಕೆಯ ಕಾರಣಕ್ಕಾಗಲೀ ಇದು ಸುದ್ದಿಯಾಗಿಲ್ಲ. ಇದು ಸದ್ದು ಮಾಡಲು ಕಾರಣವೇ ಬೇರೆ. ಈ ಮಾದರಿಯನ್ನು ರಚಿಸಿದ್ದು ಕೇವಲ 10 ವರ್ಷದ ಬಾಲಕಿ ಎಮ್ಮಾ ಲೂ!
2020ರಲ್ಲೇ 5ರಿಂದ 15 ವರ್ಷದ ಮಕ್ಕಳ ನಡುವೆ ಬ್ರಿಟನ್‌ನಾದ್ಯಂತ ಒಂದು ಸ್ಪರ್ಧೆ ನಡೆಸಲಾಗಿತ್ತು. ಬರ್ಮಿಂಗ್‌ಹ್ಯಾಮ್‌ನ ಸಂಸ್ಕೃತಿ, ವೈವಿಧ್ಯತೆ ಪ್ರತಿನಿಧಿಸುವಂತಹ ಒಂದು ಚಿತ್ರ ಬಿಡಿಸುವುದೇ ಇದರ ಉದ್ದೇಶವಾಗಿತ್ತು. ಆಯ್ಕೆಯಾದ 50 ಚಿತ್ರಗಳನ್ನು ಅಂತಿಮವಾಗಿ ವಚ್ಯುìವಲ್ ಸಮ್ಮೇಳನದಲ್ಲಿ ವಿಶ್ಲೇಷಣೆ ನಡೆಸಲಾಯಿತು. ಇದರಲ್ಲಿ ಬೋಲ್ಟನ್ ನಗರದ ಬಾಲಕಿ ಎಮ್ಮಾ ಲೂ ಬಿಡಿಸಿದ ಪೆರ್ರಿ ದಿ ಬುಲ್ ಚಿತ್ರ ವಿಜೇತವಾಯಿತು! ಆ ಬಾಲಕಿ ಮನೆಗೆ ಪೆರ್ರಿಯ ವೇಷ ಧರಿಸಿದ ವ್ಯಕ್ತಿಯನ್ನು ಕರೆದುಕೊಂಡೇ ಸಂಘಟಕರು ತೆರಳಿದರು. ಆಗ ಬಾಲಕಿಗಾದ ಸಂಭ್ರಮ ಬಹಳ ವಿಶಿಷ್ಟವಾದದ್ದು, ಆಕೆ ವ್ಯಕ್ತಪಡಿಸಿದ ಭಾವನೆಗಳು ಅಷ್ಟೇ ಮುಗ್ಧವಾದವು.
ಪೆರ್ರಿಯ ವಿಶೇಷಗಳೇನು, ಅರ್ಥವೇನು? :
ಬರ್ಮಿಂಗ್‌ಹ್ಯಾಮ್‌ನಲ್ಲಿ ಪೆರ್ರಿ ಬಾರ್ ಎನ್ನುವ ಪ್ರದೇಶವಿದೆ. ಇಲ್ಲೇ ಅಲೆಕ್ಸಾಂಡರ್ ಮೈದಾನವಿರುವುದು. ಇದರಲ್ಲೇ ಈ ಬಾರಿಯ ಕಾಮನ್ವೆಲ್ ಉದ್ಘಾಟನ ಮತ್ತು ಮುಕ್ತಾಯ ಸಮಾರಂಭ ನಡೆಯುವುದು. ಹಾಗೆಯೇ ಬರ್ಮಿಂಗ್‌ಹ್ಯಾಮ್ ಗೂಳಿ ಕಾಳಗಕ್ಕೆ ಹೆಸರುವಾಸಿ. ಈ ನಗರದ ಕೇಂದ್ರಭಾಗದಲ್ಲಿ ಗೂಳಿ ಕಾಳಗದ ಅಂಕಣವನ್ನೇ ಹೋಲುವ ಶಾಪಿಂಗ್ ಮಾಲ್ ಇದೆ. ಇದು ಖ್ಯಾತಿ ಪಡೆದಿದೆ. ಆದ್ದರಿಂದ ಗೂಳಿಯ ಚಿತ್ರವನ್ನೇ ಎಮ್ಮಾ ಆಯ್ದುಕೊಂಡರು. ಅದಕ್ಕೆ ಪೆರ್ರಿ ಎನ್ನುವ ಹೆಸರಿಟ್ಟರು. ಈ ಪೆರ್ರಿ ಅತ್ಯಂತ ಸ್ನೇಹಮಯಿ, ಕರುಣಾಮಯಿ, ತುಂಟ ಗೂಳಿ. ಇದರಲ್ಲೊಂದು ಮೂರು ತ್ರಿಕೋನಗಳುಳ್ಳ ರೇಖಾಕೃತಿಯಿದೆ. ಇದನ್ನು ಒಟ್ಟು 6 ಗೆರೆಗಳಿಂದ ರಚಿಸಲಾಗಿದೆ. ಇದು ಬರ್ಮಿಂಗ್‌ಹ್ಯಾಮ್ ಮತ್ತು ವೆಸ್ಟ್ ಮಿಡ್‌ಲ್ಯಾಂಡ್‌ನ ವೈವಿಧ್ಯಮಯ ಸಂಸ್ಕೃತಿಯ ಸಂಕೇತವಾಗಿದೆ.