Advertisement
ನಿರಂತರ ಕುಸಿತದ ಹೊರತಾಗಿಯೂ ಅಮೋಘ ಹೋರಾಟ ಸಂಘಟಿಸಿದ ಆಸ್ಟ್ರೇಲಿಯ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.
ರೇಣುಕಾ ಸಿಂಗ್ ದಾಳಿಗೆ ತತ್ತರಿಸಿದ ಆಸೀಸ್ 49 ರನ್ ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. 15ನೇ ಓವರ್‌ನಲ್ಲಿ 110ಕ್ಕೆ 7ನೇ ವಿಕೆಟ್ ಪತನಗೊಂಡಾಗಲೂ ಪಂದ್ಯ ಭಾರತದ ಕೈಯಲ್ಲೇ ಇತ್ತು. ಆದರೆ ಕೆಳ ಕ್ರಮಾಂಕದ ಆಟಗಾರರಾದ ಆ್ಯಶ್ಲಿ ಗಾರ್ಡನರ್, ಗ್ರೇಸ್ ಹ್ಯಾರಿಸ್ ಮತ್ತು ಅಲಾನಾ ಕಿಂಗ್ ಸೇರಿಕೊಂಡು ಮುನ್ನುಗ್ಗಿ ಬೀಸತೊಡಗುವುದರೊಂದಿಗೆ ಪಂದ್ಯದ ಗತಿಯೇ ಬದಲಾಯಿತು. ಭಾರತದ ಬೌಲಿಂಗ್ ಧೂಳೀಪಟಗೊಂಡಿತು.
Related Articles
Advertisement
ಕೌರ್ ಅರ್ಧ ಶತಕಭಾರತದ ಬ್ಯಾಟಿಂಗ್ ಸರದಿಯಲ್ಲಿ ನಾಯಕಿ ಕೌರ್ ಸರ್ವಾಧಿಕ 52 ರನ್ ಹೊಡೆದರು (34 ಎಸೆತ, 8 ಫೋರ್, 1 ಸಿಕ್ಸರ್). ಶಫಾಲಿ 33 ಎಸೆತಗಳಿಂದ 48 ರನ್ (33 ಎಸೆತ, 9 ಬೌಂಡರಿ), ಸ್ಮತಿ ಮಂಧನಾ 24 ರನ್ ಮಾಡಿದರು. ಸಂಕ್ಷಿಪ್ತ ಸ್ಕೋರ್: ಭಾರತ-8 ವಿಕೆಟಿಗೆ 154 (ಕೌರ್ 52, ಶಫಾಲಿ 48, ಮಂಧನಾ 24, ಜೊನಾಸೆನ್ 22ಕ್ಕೆ 4, ಶಟ್ 26ಕ್ಕೆ 2). ಆಸ್ಟ್ರೇಲಿಯ-19 ಓವರ್‌ಗಳಲ್ಲಿ 7 ವಿಕೆಟಿಗೆ 157 (ಗಾರ್ಡನರ್ ಔಟಾಗದೆ 52, ಹ್ಯಾರಿಸ್ 37, ಕಿಂಗ್ ಔಟಾಗದೆ 18, ರೇಣುಕಾ 18ಕ್ಕೆ 4, ದೀಪ್ತಿ 24ಕ್ಕೆ 2).