ಮಿಶ್ರ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸ್ಕಾಟ್ಲೆಂಡ್ ತಂಡವನ್ನು 5-0 ಭರ್ಜರಿ ಅಂತರದಿಂದ ಮಣಿಸಿದ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಪ್ರಚಂಡ ಫಾರ್ಮ್ ಪ್ರದರ್ಶಿಸಿದ ಸೈನಾ ನೆಹ್ವಾಲ್ ಕೇವಲ 36 ನಿಮಿಷಗಳಲ್ಲಿ ಜೂಲಿ ಮ್ಯಾಕ್‌ಪರ್ಸನ್‌ಗೆ ಆಘಾತವಿಕ್ಕಿದರು. ಕೆ. ಶ್ರೀಕಾಂತ್ ಕೂಡ ಉತ್ತಮ ಲಯದಲ್ಲಿದ್ದರು. ಅವರು ಕೈರನ್ ಮೆರ್ರಿಲೀಸ್‌ಗೆ ಸೋಲುಣಿಸಿದರು. ಇಂಥ ಗೆಲುವು ಮುಂದಿನ ಸ್ಪರ್ಧೆಗಳಿಗೆ ಅಪಾರ ಆತ್ಮವಿಶ್ವಾಸ ತುಂಬಲಿದೆ ಎಂಬುದು ಶ್ರೀಕಾಂತ್ ಪ್ರತಿಕ್ರಿಯೆ.
Advertisement
ಬಾಕ್ಸಿಂಗ್ ರಿಂಗ್‌ನಲ್ಲೂ ರಿಂಗಣಬಾಕ್ಸಿಂಗ್ ರಿಂಗ್‌ನಲ್ಲೂ ಭಾರತ ಗೆಲುವು ರಿಂಗಣಿಸಿದೆ. ಇದೇ ಮೊದಲ ಸಲ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಂಡ ಅಮಿತ್ ಪಾಂಗಾಲ್ (49 ಕೆಜಿ) ಮತ್ತು ನಮನ್ ತನ್ವರ್ (91 ಕೆಜಿ) ಅಮೋಘ ಗೆಲುವಿನೊಂದಿಗೆ ಅಂತಿಮ ಎಂಟರ ಸುತ್ತು ತಲುಪಿದ್ದಾರೆ.
ಬೌಲ್ಸ್ ಸ್ಪರ್ಧೆಯ ನಾಲ್ವರ ತಂಡ ವಿಭಾಗದಲ್ಲಿ ಫರ್ಜಾನಾ ಖಾನ್, ಲವಿÉ ಚೌಬೇ, ರೂಪಾರಾಣಿ ಟಿರ್ಕಿ, ನಯನ್‌ಮೋನಿ ಸೈಕಿಯಾ ಅವರನ್ನೊಳಗೊಂಡ ಭಾರತದ ವನಿತಾ ತಂಡ ಇಂಗ್ಲೆಂಡ್ ಎದುರು 21-9 ಅಂತರದ ಗೆಲುವು ಸಾಧಿಸಿದೆ. ಆದರೆ ಪುರುಷರ ಡಬಲ್ಸ್ ಸ್ಪರ್ಧೆಯ ಮೂರನೇ ಸುತ್ತಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 12-17ಅಂತರದಿಂದ ಸೋತಿದೆ. ಇದಕ್ಕೂ ಮೊದಲು ಚಂದನ್ ಸಿಂಗ್, ಸುನಿಲ್ ಬಹದ್ದೂರ್ ಮತ್ತು ದಿನೇಶ್ ಕುಮಾರ್ ಅವರಿದ್ದ ತಂಡ ಮೂವರ ಆಟ ವಿಭಾಗದಲ್ಲಿ ಇಂಗ್ಲೆಂಡ್ ವಿರುದ್ಧ 14-15ರ ಸೋಲನುಭವಿಸಿತು. ಲಾನ್ ಸ್ಪರ್ಧೆಯು 2006ರ ಗೇಮ್ಸ್‌ನಲ್ಲಿ ಪರಿಚಯಿಸಲಾಗಿದ್ದು, ಟ್ರಿಪಲ್ಸ್ ವಿಭಾಗದಲ್ಲಿ ಕಳೆದ ಮೂರೂ ಕಾಮನ್ವೆಲ್ತ್ ಆವೃತ್ತಿಯಲ್ಲೂ ಚಿನ್ನ ಗೆದ್ದ ಕೀರ್ತಿ ದಕ್ಷಿಣ ಆಫ್ರಿಕಾ ತಂಡಕ್ಕೆ ತಲ್ಲುತ್ತದೆ. ಜೋಶ್ನಾ ಜಯ, ದೀಪಿಕಾ ಔಟ್
ವನಿತಾ ಸ್ಕ್ವಾಷ್ ಸಿಂಗಲ್ಸ್‌ನಲ್ಲಿ ಜೋಶ್ನಾ ಚಿನ್ನಪ್ಪ ಆಸ್ಟ್ರೇಲಿಯದ ಟಮಿಕಾ ಸಾಕ್ಸ್‌ಬಿ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಆದರೆ ದೀಪಿಕಾ ಪಳ್ಳಿಕಲ್ ಇಂಗ್ಲೆಂಡಿನ ಅಲಿಸನ್ ವಾಟರ್ ವಿರುದ್ಧ 0-3 ಅಂತರದ ಆಘಾತಕಾರಿ ಸೋಲನುಭವಿಸಿದರು.
Related Articles
ವನಿತಾ ಸೈಕ್ಲಿಂಗ್ ಸ್ಪ್ರಿಂಟ್ ಸ್ಪರ್ಧೆಯಲ್ಲಿ ಮಾಜಿ ಏಶ್ಯನ್ ಸ್ವರ್ಣ ಸಾಧಕಿ ದೇಬೊರಾ ಹೆರಾಲ್ಡ್ ಹೀಟ್ಸ್‌ನಲ್ಲಿ ಫೈನಲ್ ತಲುಪಿದರೂ ಆಸ್ಟ್ರೇಲಿಯದ ಕಾರ್ಲೆ ಮೆಕ್ಯುಲೋಕ್ ವಿರುದ್ಧ ಸೋತು ಪದಕ ಸ್ಪರ್ಧೆಯಿಂದ ಹೊರಬಿದ್ದರು.
Advertisement