Advertisement
109 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಪರ್‌ದೀಪ್ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ ಒಟ್ಟಾರೆ 202 ಕೆ.ಜಿ. ಭಾರ ಎತ್ತಿ ದಾಖಲೆ ನಿರ್ಮಿಸಿದರು. ಸ್ನ್ಯಾಚ್‌ನಲ್ಲಿ 148 ಕೆ.ಜಿ. ಭಾರ ಎತ್ತಿದ್ದ ಅವರು ಒಟ್ಟು 350 ಕೆ.ಜಿ. ಭಾರ ಎತ್ತಿ ಚಿನ್ನ ಗೆದ್ದರು. ಎರಡು ಬಾರಿಯ ಕಾಮನ್‌ವೆಲ್ತ್ ಚಾಂಪಿಯನ್ ವಿಕಾಸ್ ಠಾಕೂರ್ 96 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ವಿಕಾಸ್ ಒಟ್ಟಾರೆ 338 ಕೆ.ಜಿ. ಭಾರ ಎತ್ತಿದ್ದರು. ಒಟ್ಟಾರೆ ಈ ಸ್ಪರ್ಧೆಯಲ್ಲಿ ಭಾರತೀಯ ಲಿಫ್ಟರ್‌ಗಳು ಯೂತ್, ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ಹಲವು ದಾಖಲೆ ಮುರಿದು 35 ಪದಕ ಗೆದ್ದು ಯಶಸ್ವಿಯಾಗಿ ಕೂಟ ಮುಗಿಸಿದ್ದಾರೆ. Advertisement
ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್:ಪರದೀಪ್‌ಗೆ ಚಿನ್ನ
12:37 AM Jul 14, 2019 | Sriram |
Advertisement
Udayavani is now on Telegram. Click here to join our channel and stay updated with the latest news.