ಮಹಿಳೆಯರಲ್ಲಿ ಕ್ಯಾನ್ಸರ್ ಲಕ್ಷಣಗಳು ವಿಭಿನ್ನವಾಗಿರಬಹುದಾಗಿದ್ದು, ಯಾವ ಕ್ಯಾನ್ಸರ್ ಎಂಬುದನ್ನು ಆಧರಿಸಿಯೂ ಬದಲಾಗಬಹುದಾಗಿದೆ. ಸಾಮಾನ್ಯವಾಗಿ ಮಹಿಳೆಯರನ್ನು ಬಾಧಿಸುವ ವಿವಿಧ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದ ಸಾಮಾನ್ಯ ಲಕ್ಷಣಗಳನ್ನು ಇಲ್ಲಿ ವಿವರಿಸಲಾಗಿದೆ.
ಸ್ತನ ಕ್ಯಾನ್ಸರ್
ಸ್ತನದಲ್ಲಿ ಅಥವಾ ಕಂಕುಳಲ್ಲಿ ಗಂಟುಗಳು ಅಥವಾ ದಪ್ಪಗಾಗುವುದು
ಸ್ತನದ ಆಕಾರ ಅಥವಾ ಗಾತ್ರದಲ್ಲಿ ಬದಲಾವಣೆ
ಸ್ತನದ ತೊಟ್ಟುಗಳಿಂದ ಎದೆಹಾಲು ಅಲ್ಲದ ಸ್ರಾವ; ವಿಶೇಷವಾಗಿ ರಕ್ತಸಹಿತವಾಗಿ ರುವುದು
ಜೋತು ಬೀಳುವುದು, ಕೆಂಪಗಾಗುವುದು ಅಥವಾ
ಅಂಡಾಶಯದ ಕ್ಯಾನ್ಸರ್
ಹೊಟ್ಟೆ ಉಬ್ಬರ ಅಥವಾ ಊತ
ಆಹಾರ ಸೇವಿಸುವಾಗ ಬೇಗನೆ ಹೊಟ್ಟೆ ತುಂಬಿದಂತಾಗುವುದು
ವಸ್ತಿ ಕುಹರ (ಪೆಲ್ವಿಕ್) ಭಾಗದಲ್ಲಿ ಕಿರಿಕಿರಿ ಅಥವಾ ನೋವು
ಮಲಬದ್ಧತೆಯಂತಹ ಮಲವಿಸರ್ಜನೆಯ ಕ್ರಮದಲ್ಲಿ ಬದಲಾವಣೆ
ಪದೇಪದೆ ಮೂತ್ರಶಂಕೆ
ಗರ್ಭಕಂಠದ ಕ್ಯಾನ್ಸರ್
ಯೋನಿಯ ಮೂಲಕ ಅಸಹಜ ರಕ್ತಸ್ರಾವ (ಋತುಚಕ್ರದ ನಡುವಿನ ದಿನಗಳಲ್ಲಿ, ಲೈಂಗಿಕ ಸಂಪರ್ಕದ ಬಳಿಕ ಅಥವಾ ಋತುಚಕ್ರಬಂಧದ ಬಳಿಕ) ಯೋನಿಯ ಮೂಲಕ ಅಸಹಜ ಸ್ರಾವ
ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ ವಸ್ತಿಕುಹರ (ಪೆಲ್ವಿಕ್) ದಲ್ಲಿ ನೋವು
ಎಂಡೊಮೆಟ್ರಿಯಲ್ (ಯುಟೆರೈನ್) ಕ್ಯಾನ್ಸರ್
ಯೋನಿಯ ಮೂಲಕ ಅಸಹಜ ರಕ್ತಸ್ರಾವ ಅಥವಾ ಸ್ರಾವ
ವಸ್ತಿಕುಹರ ಭಾಗದಲ್ಲಿ ನೋವು
ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ ನೋವು
ಕೊಲೊರೆಕ್ಟಲ್ ಕ್ಯಾನ್ಸರ್
ಮಲವಿಸರ್ಜನೆಯ ಕ್ರಮದಲ್ಲಿ ಬದಲಾವಣೆ (ಭೇದಿ, ಮಲಬದ್ಧತೆ ಅಥವಾ ಮಲ ವಿಸರ್ಜನೆ ಕಡಿಮೆಯಾಗುವುದು)
ಮಲದ ಜತೆಗೆ ರಕ್ತ
ಹೊಟ್ಟೆಯಲ್ಲಿ ತೊಂದರೆ (ಹಿಡಿದುಕೊಳ್ಳುವುದು, ವಾಯು ಅಥವಾ ನೋವು) ವಿವರಿಸಲಾಗದ ತೂಕ ನಷ್ಟ
ದಣಿವು
ಶ್ವಾಸಕೋಶದ ಕ್ಯಾನ್ಸರ್
ಸತತ ಕೆಮ್ಮು
ಕಫದ ಜತೆಗೆ ರಕ್ತ
ಉಸಿರು ಹಿಡಿದುಕೊಳ್ಳುವುದು
ಎದೆನೋವು
ಧ್ವನಿ ದೊರಗಾಗುವುದು
ತೂಕ ನಷ್ಟ ಮತ್ತು ಹಸಿವು ನಷ್ಟ
ಚರ್ಮದ ಕ್ಯಾನ್ಸರ್
ಚರ್ಮದಲ್ಲಿ ಹೊಸ ಬೆಳವಣಿಗೆಗಳು ಅಥವಾ ಗುಣವಾಗದ ಹುಣ್ಣುಗಳು
ಈಗಾಗಲೇ ಇರುವ ಮಚ್ಚೆಗಳಲ್ಲಿ ಬದಲಾವಣೆ (ಅಸಮ್ಮಿತಿ, ಅಂಚುಗಳ ಅಸಹಜತೆ, ಬಣ್ಣ ಬದಲಾವಣೆ, ವ್ಯಾಸ ಹೆಚ್ಚಳ, ಆಕಾರ/ ಗಾತ್ರದಲ್ಲಿ ಬದಲಾವಣೆ)
ಸಾಮಾನ್ಯ ಲಕ್ಷಣಗಳು
(ಹಲವು ಕ್ಯಾನ್ಸರ್‌ಗಳಿಗೆ ಇವು ಸಾಮಾನ್ಯ ಲಕ್ಷಣಗಳು)
ವಿವರಿಸಲಾಗದ ತೂಕ ನಷ್ಟ
ಸತತ ದಣಿವು
ವಿವರಿಸಲಾಗದ ನೋವು
ಸತತ ಜ್ವರ ಅಥವಾ ರಾತ್ರಿ ಬೆವರುವುದು
ಏನು ಮಾಡಬೇಕು?
ನಿಯಮಿತ ತಪಾಸಣೆ: ನಿಯಮಿತವಾಗಿ ಮ್ಯಾಮೊಗ್ರಾಮ್, ಪ್ಯಾಪ್ ಸ್ಮಿಯರ್ ಮತ್ತು ಇತರ ಪರೀಕ್ಷೆಗಳ ನಡೆಸುವುದರಿಂದ ಕ್ಯಾನ್ಸರ್ ಇದ್ದರೆ ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ಒದಗಿಸುವುದು ಸಾಧ್ಯವಾಗುತ್ತದೆ.
ಆರೋಗ್ಯಯುತ ಜೀವನಶೈಲಿ: ಆರೋಗ್ಯಯುತ ಆಹಾರ ಕ್ರಮ, ನಿಯಮಿತ ವ್ಯಾಯಾಮ, ಧೂಮಪಾನ ವರ್ಜಿಸುವುದು, ಮದ್ಯಪಾನವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಇತ್ಯಾದಿಗಳ ಮೂಲಕ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.
ಶೀಘ್ರ ವೈದ್ಯಕೀಯ ಆರೈಕೆ: ಸತತವಾದ ಅಥವಾ ಅಸಹಜವಾದ ಯಾವುದೇ ಲಕ್ಷಣಗಳು ಕಂಡುಬಂದರೆ ಕೂಡಲೇ ಆಂಕಾಲಜಿಸ್ಟ್‌ರನ್ನು ಸಂಪರ್ಕಿಸಿ ಸಮಾಲೋಚನೆ, ತಪಾಸಣೆ ಮಾಡಿಸಿಕೊಳ್ಳಬೇಕು.
ಮಹಿಳೆಯರಲ್ಲಿ ಉಂಟಾಗಬಹುದಾದ ಕ್ಯಾನ್ಸರ್ ಗಳಿಗೆ ಚಿಕಿತ್ಸೆ ಮತ್ತು ಫಲಿತಾಂಶ ಚೆನ್ನಾಗಿರಬೇಕಾದರೆ ಶೀಘ್ರ ಪತ್ತೆ ಮತ್ತು ಆದಷ್ಟು ಬೇಗನೆ ಚಿಕಿತ್ಸೆಯ ಆರಂಭ ನಿರ್ಣಾಯಕವಾಗಿರುತ್ತವೆ.
-ಡಾ| ಹರೀಶ್ ಇ.
ಸರ್ಜಿಕಲ್ ಆಂಕಾಲಜಿಸ್ಟ್
ಕೆಎಂಸಿ ಆಸ್ಪತ್ರೆ,
ಡಾ| ಬಿ.ಆರ್. ಅಂಬೇಡ್ಕರ್ ವೃತ್ತ,
ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಂಕಾಲಜಿ ವಿಭಾಗ, ಕೆಎಂಸಿ, ಮಂಗಳೂರು)