Advertisement
ಉದ್ದ ಕೆಂಪು ಕಾಲಿರುವುದರಿಂದ ಇದನ್ನು ಕೆಂಪು ಕಾಲಿನ ಗೊರವ ಎಂದು ಅನ್ವರ್ಥಕವಾಗಿ ಕರೆಯುವರು. ಇವು ಕಾಶ್ಮೀರ ಮತ್ತು ಲಡಾಕ್‌ಗಳಲ್ಲಿ ಮರಿಮಾಡುವುವು. ಚಳಿಗಾಲದಲ್ಲಿ ಅಲ್ಲಿಂದ ಕರ್ನಾಟಕ , ಬಯಲುಸೀಮೆ, ಸಮುದ್ರತೀರದ ಬಳಿ ವಲಸೆ ಬರುತ್ತವೆ.
ತಿಳಿ ಕಂದು ಬಣ್ಣದಗೆರೆಇದೆ. ವಲಸೆ ಬರುವಾಗ ಗುಂಪಾಗಿ ಬಂದರೂ ತಮ್ಮ
ಆಹಾರ ಹುಡುಕಲು ಬೇರೆ , ಬೇರೆಯಾಗಿ ದೂರ ಹೋದಾಗ ಟಿವ್, ಟಿವ್,
ಟಿವ್Ø, ಎಂದು ಕೂಗಿ ಸಂಭಾಷಿಸುತ್ತವೆ. ಪುನಃ ಕೆಲವೊಮ್ಮೆ ಒಂದೆಡೆ ಗುಂಪು ಸೇರುವವು.
ಮೇ ಮತ್ತುಜುಲೈ ತಿಂಗಳಲ್ಲಿ ಲಡಾಕ್, ಅಥವಾ ಕಾಶ್ಮೀರ ಭಾಗದಲ್ಲಿ ಮರಿಮಾಡಿ ಚಳಿಗಾಲದಲ್ಲಿ ಭಾರತದಇತರ ಭಾಗಗಳಾದ ಕರ್ನಾಟಕ ಹಾಗೂ ಇತರ ಸಮುದ್ರತೀರ, ಬಯಲು ಸೀಮೆಯ ಕಡೆ ವಲಸೆ ಬಂದುಅಲ್ಲಿ ಕೆಲ ಸಮಯ ಉಳಿದು, ಪುನಃ ಉತ್ತರ ಭಾರತಕ್ಕೆ ಹೋಗುವವು. ಭಾರತದ ಕಾಶ್ಮೀರ, ಲಡಾಕ್‌ಜೌಗು ಪ್ರದೇಶದಗದ್ದೆ, ಮತ್ತುಜೌಗು ಪ್ರದೇಶದಲ್ಲೂಇದರಗೂಡು ಸಿಕ್ಕಿವೆ. ಇವು 3-4 ಹಳದಿ ಛಾಯೆಯ ಮೊಟ್ಟೆಇಡುತ್ತವೆ. ಈ ಮೊಟ್ಟೆಯ ಮೇಲೆ ಕೆನ್ನೀಲಿ ಬಣ್ಣದ ಕೆಲವು ಮಚ್ಚೆ ಇರುತ್ತದೆ. ಬಹುಶಃ ಈ ಕೆಂಪು ಛಾಯೆ ಹಕ್ಕಿಯ ಕಾಲು, ಚುಂಚಿನ ಬಣ್ಣವಾಗಿ ಮಾರ್ಪಟ್ಟಿರಬಹುದು. ಮತ್ತುಇದರ ರೆಕ್ಕೆಯ ಕೆಂಪು ಛಾಯೆಗೆಕಾರಣವಾಗಿರಬಹುದು. ಈ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ. ಉಪ್ಪು ನೀರಿರುವ ಸಮುದ್ರತೀರಕ್ಕೆ ಮೊದಲು ಬಂದು ಆಮೇಲೆ ಸಿ ನೀರಿರುವಜಾಗದತ್ತ ವಲಸೆ ಹೋಗುವವು. ಇವು ಮರಿಗಳಾಗಿ ಎಷ್ಟು ಸಮಯದ ನಂತರ ವಲಸೆ ಬರುತ್ತವೆ. ಚಿಕ್ಕ ಮರಿಗಳು ಉತತರದಿಂದದಕ್ಷಿಣದ ವರೆಗೆ ನೇರವಾಗಿ ವಲಸೆ ಬರುತ್ತವೆಯೋ? ಅಥವಾ ಮಧ್ಯ ಅಲ್ಲಲ್ಲಿ ಇದ್ದು , ಕೆಲವು ಸಮಯ ಕಳೆದು ದಕ್ಷಿಣ ಭಾರತದತ್ತ ಬರುತ್ತವೆಯೋ? ಇಲ್ಲಿಗೆ ಬಂದ ಕೆಲವು ಗುಂಪು ಇಲ್ಲೆ ವಾಸ್ತವ್ಯ ಹೂಡಿವೆಯೋ? ಈ ಕುರಿತು ಅಧ್ಯಯನದಿಂದ ಹೆಚ್ಚಿನ ಮಾತಿ ಸಂಗ್ರಹಿಸಬೇಕಾಗಿದೆ. ಕೆಸರಿನಕ್ರಿಮಿ, ಕೀಟಕ ನಿಯಂತ್ರಣದಲ್ಲಿ ಇವುಗಳ ಪಾತ್ರ ರಿದು. ಇಂದು ನೀರುಕಲುತವಾಗುತ್ತಿದೆ. ಇದರಿಂದ ಈ ಹಕ್ಕಿಗಳ ಮೇಲೆ ಏನು ಪರಿಣಾಮ ಆಗಿದೆ ಎಂಬುದು ಅಧ್ಯಯನ ನಡೆಯಬೇಕಿದೆ. ನೀರು ಮಲಿನವಾಗುತ್ತಿರುವುದರಿಂದ ಪಕ್ಷಿ, ಮಾನವನ ಮೇಲಾಗುವ ಕೆಟ್ಟ ಪರಿಣಾಮಕಡಿಮೆ ಮಾಡಲುಇದರಿಂದ ಸಹಾಯವಾದೀತು. ಪಿ.ವಿ.ಭಟ್ ಮೂರೂರು