ಜೇವರ್ಗಿ: ವೀರಶೈವ ಸಮಾಜದ ಬಲವರ್ಧನೆಗೆ ಸಂಘಟಿತ ಹೋರಾಟ ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ವೀರಶೈವ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಸಿದ್ಧು ಸಾಹು ಅಂಗಡಿ ಆಂದೋಲಾ ಹೇಳಿದರು.
ಪಟ್ಟಣದಲ್ಲಿ ನಡೆದ ವೀರಶೈವ ಸಮಾಜದ ಪದಾ ಧಿಕಾರಿಗಳ ಆಯ್ಕೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲರನ್ನು ಪ್ರೀತಿಯಿಂದ ಕಾಣುವ ಸಾಮರಸ್ಯಕ್ಕೆ ಮತ್ತೂಂದು ಹೆಸರೇ ವಿರಶೈವ ಸಮಾಜವಾಗಿದ್ದು, ಈ ಸಮಾಜದ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಹತ್ತು ಹಲವಾರು ಯೋಜನೆಗಳನ್ನು ರೂಪಿಸುವ ಸಂಕಲ್ಪ ಈ ಸಂಘಟನೆ ಹೊಂದಿದೆ. ಆ ನಿಟ್ಟಿನಲ್ಲಿ ಈಗಾಗಲೆ ವೀರಶೈವ ಸಮಾಜದ ವಿದ್ಯಾರ್ಥಿಗಳಿಗೆ ವಸತಿ ನಿಲಯ ಆರಂಭಿಸುವ ಚಿಂತನೆ ನಡೆದಿದ್ದು, ಶೀಘ್ರದಲ್ಲಿಯೇ ಸಮಾಜದ ತಾಲೂಕು ಘಟಕದಿಂದ ವಸತಿ ನಿಲಯ ಆರಂಭಿಸುವುದರ ಜತೆಗೆ ಬರುವ ದಿನಗಳಲ್ಲಿ ವಿಶೇಷವಾಗಿ ಸಮಾಜದ ಬಡ ಮಹಿಳಾ ವಿದ್ಯಾರ್ಥಿಗಳಿಗೆ ವಸತಿ ನಿಲಯ ಕೂಡ ಪ್ರಾರಂಭಿಸಲಾಗುವುದು.
ವೀರಶೈವ ಸಮಾಜದ ಏಳ್ಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಸಮಾಜದ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ ಅವರ ಸೇವೆ ಅವಿಸ್ಮರಣೀಯ. ಅರುಣಕುಮಾರ ಅವರ ಮಾರ್ಗದರ್ಶನದೊಂದಿಗೆ ತಾಲೂಕಿನಲ್ಲಿ ಮುಂಬರುವ ದಿನಗಳಲ್ಲಿ ಹತ್ತು, ಹಲವು ಜನಪರ ಕಾರ್ಯ ಕೈಗೊಳ್ಳಲಾಗುವುದು. ನೂತನ ಪದಾ ಧಿಕಾರಿಗಳು ತಾಲೂಕಿನಾದ್ಯಂತ ಸಂಚರಿಸಿ ಸಮಾಜದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವೀರಶೈವ ಸಮಾಜದ ತಾಲೂಕು ಗೌರವಾಧ್ಯಕ್ಷರಾಗಿ ಗುರುಲಿಂಗಯ್ಯಸ್ವಾಮಿ ಯನಗುಂಟಿ, ಉಪಾಧ್ಯಕ್ಷರಾಗಿ ಸಂತೋಷ ಪಾಟೀಲ ಹಾಲಗಡ್ಲಾ, ರಾಜೇಶ ಸಜ್ಜನ್, ತಿಪ್ಪಣ್ಣ ಹಡಪದ, ಭಗವಂತ್ರಾಯ ಶಿವಣ್ಣೋರ, ಸಂಗಣ್ಣ ಹೂಗಾರ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ ಪಾಟೀಲ ಗುಡೂರ, ಸಂಘಟನಾ ಕಾರ್ಯದರ್ಶಿಗಳಾಗಿ ಮಲ್ಲಿಕಾರ್ಜುನ ಬಿರಾದಾರ, ಸಿದ್ದು ಮಸ್ಕಿ, ಸಹ ಕಾರ್ಯದರ್ಶಿಗಳಾಗಿ ವಿಶ್ವ ಪಾಟೀಲ, ಭಗವಂತ್ರಾಯ ನೆಂಗಾ, ಖಜಾಂಚಿಯಾಗಿ ಅನೀಲ ರಾಂಪೂರ, ಕಾನೂನು ಸಲಹೆಗಾರರಾಗಿ ಶಾಂತಗೌಡ ನರಿಬೋಳ, ಮಾಧ್ಯಮ ಸಲಹೆಗಾರರಾಗಿ ವಿಜಯಕುಮಾರ ಪಾಟೀಲ ಸೇಡಂ, ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಸಾಹೇಬಗೌಡ ಬುಟ್ನಾಳ, ಕೇದಾರಲಿಂಗಯ್ಯ ಹಿರೇಮಠ, ವಿಶಾಲ ಭಂಕೂರ, ಮಾರ್ಗದರ್ಶಕರಾಗಿ ಬಸವರಾಜ ಪಾಟೀಲ ನರಿಬೋಳ, ಗುರುಲಿಂಗಪ್ಪಗೌಡ ಮಾಲಿಪಾಟೀಲ, ಗೌಡಪ್ಪಗೌಡ ಪಾಟೀಲ ಆಂದೋಲಾ, ಚಂದ್ರಶೇಖರ ಸೀರಿ, ಮಹಾಂತಯ್ಯ ಹಿರೇಮಠ, ವೆಂಕನಗೌಡ ರಾಂಪೂರ, ಬಸವರಾಜಗೌಡ ಪಾಟೀಲ ಕೆಲ್ಲೂರ, ಸಂಗಣ್ಣಗೌಡ ಪಾಟೀಲ ಅವರಾದ, ಬಸವರಾಜ ಸಾಸಾಬಾಳ, ವಿಜಯಕುಮಾರ ಬಿರಾದಾರ, ಗುಂಡು ಸಾಹು ಗೋಗಿ, ಆದಪ್ಪ ಸಾಹು ಸಿಕ್ಕೆದ್, ನೀಲಕಂಠ ಅವಂಟಿ, ಶರಣು ಸಾಹು ಬಿಲ್ಲಾಡ, ಧರ್ಮು ಜೋಗೂರ, ಗುರುಗೌಡ ಮಾಲಿಪಾಟೀಲ. ಸಂಗಣ್ಣಗೌಡ ಪಾಟೀಲ ರದ್ದೆವಾಡಗಿ, ಶಿವಲಿಂಗ ಹಳ್ಳಿ, ಕಲ್ಯಾಣಕುಮಾರ ಸಂಗಾವಿ, ರಾಚಣ್ಣ ಸಾಹು ಹತ್ತಿಗೂಡೂರ, ರವಿ ಕೋಳಕೂರ ಸೇರಿದಂತೆ ಮತ್ತಿತರರನ್ನು ನೇಮಕ ಮಾಡಲಾಗಿದೆ.