Advertisement
ಕೈನಕಟ್ಟಿ ಗ್ರಾಮದಲ್ಲಿ ನರೇನೂರ-ಫಕೀರ ಬೂದಿಹಾಳ-ಕೈನಕಟ್ಟಿ ಎಸ್‌ಎಚ್.44 ಕ್ಕೆ ಕೂಡುವ ಜಿಲ್ಲಾ ಮುಖ್ಯರಸ್ತೆ ಹಾಗೂ ಕೈನಕಟ್ಟಿ ಗ್ರಾಮದ ಪಪಂ ಕಾಲೋನಿ ಮತ್ತು ಬಸ್ ನಿಲ್ದಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
Related Articles
Advertisement
ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಪ್ರಗತಿಯಲ್ಲಿದೆ. ಗ್ರಾಮಗಳ ಪ್ರಗತಿಗೆ ಪ್ರತಿ ಗ್ರಾಮ ಪಂಚಾಯಿತಿಗೆ 1 ಕೋಟಿ ರೂ ಒದಗಿಸಲು ಬದ್ಧ. ನಾಗರಿಕರು ಮೂಲಭೂತ ಸೌಕರ್ಯದಲ್ಲಿ ಅಡೆತಡೆಯಾದರೆ ಗ್ರಾಪಂಗೆ ಅರ್ಜಿ ಸಲ್ಲಿಸಬೇಕು. ವಿಳಂಬವಾದರೆ ಗಮನಕ್ಕೆ ತರಬೇಕು. ತಕ್ಷಣ ಸರಿಪಡಿಸುತ್ತೇನೆ ಎಂದರು. ಪ್ರಯಾಣಿಕರಿಗೆ ತಂಗಲು ಬಸ್ ನಿಲ್ದಾಣದ ಅವಶ್ಯಕತೆಯಿದ್ದು, ಕ್ಷೇತ್ರಕ್ಕೆ 60 ಬಸ್ ನಿಲ್ದಾಣ ಮಂಜೂರಿ ಮಾಡಿಸಿದ್ದು, ಪ್ರತಿ ಗ್ರಾಮದ ಆಯಕಟ್ಟಿನಸ್ಥಳಗಳಲ್ಲಿ ಬಸ್ ನಿಲ್ದಾಣ ನಿರ್ಮಿಶಿಕೊಳ್ಳಲು ಅವಕಾಶವಿದೆ. ಪ್ರತಿ ಬಸ್ ನಿಲ್ದಾಣಕ್ಕೆ 10ಲಕ್ಷ ರೂ. ಒದಗಿಸುತ್ತೇನೆ. ಕ್ಷೇತ್ರದ ಕೆರೆಗಳನ್ನು ತುಂಬುವುದಕ್ಕೆ 107ಕೋಟಿ ರೂ. ತರಲಾಗಿದೆ. ಕ್ಷೇತ್ರದಲ್ಲಿ ಹಲವಾರು ಯೋಜನೆ ಹಮ್ಮಿಕೊಂಡು ಕೆಲಸ ಮಾಡುತ್ತಿರುವ ನಾಗರಿಕರ ಸಹಕಾರ ಬೇಕು. ಕ್ಷೇತ್ರದ ಅಭಿವೃದ್ದಿಗೆ ಅನುದಾನ ಕೊಡಿಸುವುದಾಗಿ ಹೇಳಿದರು. ಜಿಪಂ ಮಾಜಿ ಉಪಾಧ್ಯಕ್ಷ ಹೂವಪ್ಪ ರಾಠೊಡ, ಹನಮಂತಗೌಡ ಪಾಟೀಲ (ಹೊಸಕೋಟಿ) ಭೀಮನಗೌಡ ಪಾಟೀಲ, ಎಚ್,ಎಸ್,ಪಾಟೀಲ, ಬಸವರಾಜ ಕೆರಕಲಮಟ್ಟಿ, ರಮೇಶ ಕುಂದರಗಿ, ಬಾದಾಮಿ ತಹಶೀಲ್ದಾರ್ ಜೆ,ಬಿ.ಮಜ್ಜಗಿ, ಉಪತಹಶೀಲ್ದಾರ್ ರಾಜಶೇಖರ ಸಾತಿಹಾಳ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕಲಾದಗಿ, ಅಶೋಕ ತಿರಕಣ್ಣವರ, ಎಮ್,ಎಮ್ ,ಕಟಗೇರಿ, ಹೆಸ್ಕಾಂದ ಉದಯಕುಮಾರ ಮಾಶಿ, ಎಸ್.ಜಿ. ಪರಸಣ್ಣವರ, ಮಹಿಬೂಬ ಹುಲ್ಲಿಕೇರಿ, ಶ್ರೀಕಾಂತ ಹಿರೇಗೌಡ್ರ, ಪಿಎಸ್‌ಐ ಶಿವಾನಂದ ಲಮಾಣಿ, ಗುತ್ತಿಗೆದಾರರಾದ ಯಶವಂತ ನಲವಡೆ, ಮಂಜುನಾತ ಡೆಂಗಿ ಮೊದಲಾದವರಿದ್ದರು.