Advertisement

ರೈತರ ಹಿತ ಕಾಪಾಡಲು ಬದ್ಧ

06:12 AM Jun 07, 2020 | Team Udayavani |

ಮುಂಡರಗಿ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದ ಸರಕಾರದಲ್ಲಿ ಕೃಷಿ ಸಚಿವರಾಗಿ ರೈತರ ಸೇವೆ ಸಲ್ಲಿಸಲು ಸದಾವಕಾಶ ಸಿಕ್ಕಿದೆ. ಅಧಿಕಾರ ಸ್ವೀಕರಿಸಿದ 3 ತಿಂಗಳು 10 ದಿವಸಗಳಲ್ಲಿ ರಾಜ್ಯದ 30 ಜಿಲ್ಲೆಗಳಿಗೆ ಭೇಟಿ ನೀಡಿ ಸರಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

Advertisement

ಕೊಪ್ಪಳದಿಂದ ಹಿರೇಕೆರೂರ ಕ್ಷೇತ್ರಕ್ಕೆ ತೆರಳುವ ಮಾರ್ಗದ ಮಧ್ಯದಮುಂಡರಗಿ ಪಟ್ಟಣದ ಪುರಸಭೆ ಸದಸ್ಯ ಲಿಂಗರಾಜಗೌಡ ಪಾಟೀಲರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, 100 ದಿವಸಗಳ ಅಧಿಕಾರದಲ್ಲಿ ಕೋವಿಡ್ ರೋಗ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದ್ದರೂ ಜೀವದ ಭಯ ತೊರೆದು ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ರೈತರ ಅಹವಾಲುಗಳನ್ನು ಸ್ವೀಕರಿಸಿದೆ. ಕೊಪ್ಪಳ, ರಾಯಚೂರ, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಿಂದ ಭತ್ತದ ಬೆಳೆ ಹಾನಿ ಆಗಿದ್ದರಿಂದ 45 ಕೋಟಿ ಪರಿಹಾರ ಘೋಷಣೆ ಮಾಡಲಾಯಿತು. ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ರೂ. 25 ಸಾವಿರದಂತೆ 31.83 ಕೋಟಿ ಘೋಷಿಸಲಾಗಿದೆ. ಗದಗ, ಧಾರವಾಡ, ರಾಯಚೂರ, ಹಾವೇರಿ ಇತರ ಜಿಲ್ಲೆಗಳಲ್ಲಿ ಹತ್ತಿ ಖರೀದಿಸಲಾಯಿತು. ರೇಷ್ಮೆ ಡೀಲರ್ಗಳಿಗೆ 2 ಲಕ್ಷ ರೂಪಾಯಿಗಳ ತನಕ ಸಾಲ, ಪ್ರತಿ ಕೆಜಿ ನೂಲಿಗೆ ರೂ. 200 ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದರು.

ಜಲಾನಯನ ಅಭಿವೃದ್ಧಿ ಮೂಲಕ ಬರಗಾಲ ತಡೆಯುವಿಕೆಯಲ್ಲಿ ರೂ. 25 ಕೋಟಿ ನಿಗದಿ ಮಾಡಿದೆ. ಮಹಾತ್ಮಾ ಗಾಂಧಿ  ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೂ. 25 ಕೋಟಿ ವೆಚ್ಚದಲ್ಲಿ 4,239 ಹೆಕ್ಟೇರ್‌ ಬದುವು ಕೃಷಿ ಹೊಂಡ ಮೊದಲಾದ ಕಾಮಗಾರಿ ಕೈಕೊಳ್ಳಲಾಯಿತು. ರೂ 607.49 ಲಕ್ಷ ವೆಚ್ಚ ಮಾಡಿ, 1.08 ಲಕ್ಷ ಮಾನವ ದಿನ ಸೃಜಿಸಲಾಗಿದೆ. ಜಲಾಮೃತ ಯೋಜನೆಯಲ್ಲಿ 143 ತಾಲೂಕುಗಳಲ್ಲಿ ರೂ 1641.50 ಕೋಟಿ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.

ಪುರಸಭೆ ಸದಸ್ಯ ಲಿಂಗರಾಜಗೌಡ ಪಾಟೀಲ, ಗಣ್ಯರಾದ ಆನಂದಗೌಡ ಪಾಟೀಲ, ಮಂಜುನಾಥಗೌಡ ಪಾಟೀಲ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next