Advertisement

ರೈತರಿಗೆ ಅಗತ್ಯ ಸೇವೆ ಒದಗಿಸಲು ಬದ್ಧ: ರಾಜೇಂದ್ರ

05:01 PM Apr 23, 2021 | Team Udayavani |

ತುಮಕೂರು: ತಾಲೂಕು ವ್ಯವಸಾಯೋತ್ಪನ್ನಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿಆರ್‌. ರಾಜೇಂದ್ರ ಹಾಗೂ ಉಪಾಧ್ಯಕ್ಷರಾಗಿ ರಾಧಾಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇತ್ತೀಚೆಗಷ್ಟೆ ತಾಲೂಕು ವ್ಯವಸಾಯೋತ್ಪನ್ನಮಾರಾಟ ಸಹಕಾರ ಸಂಘಕ್ಕೆ ಚುನಾವಣೆ ನಡೆದುನಿರ್ದೇಶಕರು ಆಯ್ಕೆಯಾಗಿದ್ದರು.

Advertisement

ಗುರುವಾರಸಂಘದ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರ, ಉಪಾಧ್ಯಕ್ಷರ ಅವಿರೋಧ ಆಯ್ಕೆನಡೆಯಿತು. ನೂತನ ಅಧ್ಯಕ್ಷ ಆರ್‌. ರಾಜೇಂದ್ರಮಾತನಾಡಿ, ಮುಂದಿನ 5 ವರ್ಷದ ಅವಧಿಗೆಅಧ್ಯಕ್ಷನನ್ನಾಗಿ ನಿರ್ದೇಶಕರು ಅವಿರೋಧವಾಗಿಆಯ್ಕೆ ಮಾಡಿದ್ದಾರೆ. ನಿರ್ದೇಶಕರು ನನ್ನ ಮೇಲೆಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕೆಲಸನಿರ್ವಹಿಸುತ್ತೇನೆ. ನನ್ನ ಅವಧಿಯಲ್ಲಿ ಸಂಸ್ಥೆಯನ್ನುಲಾಭದತ್ತ ಕೊಂಡೊಯ್ಯಲು ಹಾಗೂ ರೈತರಿಗೆಅಗತ್ಯ ಸೇವೆ ಒದಗಿಸಲು ಪ್ರಾಮಾಣಿಕವಾಗಿಶ್ರಮಿಸುತ್ತೇನೆ ಎಂದು ಹೇಳಿದರು.

ಸಂಸ್ಥೆಯಲ್ಲಿ ಪ್ರತಿ ತಿಂಗಳು 28 ರಿಂದ 30 ಲಕ್ಷವ್ಯವಹಾರ ನಡೆಯುತ್ತಿತ್ತು. ಈಗ 20 ಲಕ್ಷಕ್ಕೆ ಇಳಿದಿದೆ.ಸೊಸೈಟಿಗಳಲ್ಲಿ ರೈತರಿಗೆ 3ಲಕ್ಷದ ವರೆಗೆ ಸಾಲಕೊಡಲಾಗಿದೆ. ಹಾಗೆಯೇ ತಾಲೂಕುಗಳಲ್ಲಿನಸೊಸೈಟಿಗಳು 10 ಕೋಟಿ ರೂ. ವರೆಗೆ ಸಾಲನೀಡುತ್ತಿವೆ ಎಂದರು.

20 ಕೋಟಿಗೂ ಹೆಚ್ಚು ವಹಿವಾಟು: ಸಹಕಾರಸಂಸ್ಥೆಗಳು ಉನ್ನತ ಮಟ್ಟಕ್ಕೆ ಬೆಳೆಯಲು ಅಧ್ಯಕ್ಷರು,ಉಪಾಧ್ಯಕ್ಷರು, ನಿರ್ದೇಶಕರುಗಳಷ್ಟೇ ಇಲ್ಲಿಕಾರ್ಯನಿರ್ವಹಿಸುವ ಕಾರ್ಯದರ್ಶಿಗಳು ಮತ್ತುಅಧಿಕಾರಿಗಳ ಪಾತ್ರವೂ ಬಹುಮುಖ್ಯವಾಗಿದೆ.ಹಾಗಾಗಿಯೇ ಸಂಸ್ಥೆ ಇಂದು ಈ ಮಟ್ಟಕ್ಕೆಬೆಳೆಯಲು ಸಾಧ್ಯವಾಗಿದೆ.

ತಾಲೂಕುವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ19-20 ಲಕ್ಷ ರೂ. ಲಾಭ ಹೊಂದಿದ್ದು, 20ಕೋಟಿಗೂ ಹೆಚ್ಚು ವಹಿವಾಟು ನಡೆಸಿದೆ ಎಂದುಮಾಹಿತಿ ನೀಡಿದರು.ಸಹಕಾರಿ ಕ್ಷೇತ್ರದಲ್ಲಿ ಪûಾತೀತವಾಗಿ ಎಲ್ಲರೂಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ.

Advertisement

ಕ್ರಿಬೊRàಮಂಡಳಿಯಲ್ಲೂ ನಾನು ನಿರ್ದೇಶಕನಾಗಿದ್ದು, ಈಮಂಡಳಿಯಲ್ಲಿ ಇರುವವರೆಲ್ಲಾ ಸಂಸದರು. ನನ್ನವಯಸ್ಸಿನಲ್ಲಿ ಅನುಭವ ಹೊಂದಿರುವ ಹಿರಿಯರುಅಲ್ಲಿದ್ದಾರೆ. ಅವರೊಂದಿಗೆ ಕೆಲಸ ಮಾಡುವಅವಕಾಶ ದೊರೆತಿರುವುದು ನನ್ನ ಭಾಗ್ಯ ಎಂದರು.ಟಿಎಪಿಸಿಎಂಸ್‌ ನಿರ್ದೇಶಕ ಕೆಂಪಹನುಮಯ್ಯ,ಮಲ್ಲೇಶ್‌, ದೊಡ್ಡನಂಜಯ್ಯ, ಮಹಮದ್‌ಜಿಯಾವುಲ್ಲಾ, ಟಿ.ವೈ. ಯಶಸ್‌, ವಿ.ಜಿ. ಸರೋಜಾ,ಕೆ.ಸಿ. ಗಂಗರಾಜು, ಟಿ.ಆರ್‌. ಸುರೇಶ್‌, ಡಿಸಿಸಿಬ್ಯಾಂಕ್‌ ನಾಮಿನಿ ನಿರ್ದೇಶಕ ಬಿ.ಜಿ. ವೆಂಕಟೇಗೌಡ,ಸಹಕಾರಿ ಸಂಘದ ಸಹಾಯಕ ನಿಬಂಧಕಪಾರ್ಥಸಾರಥಿ, ಸಂಘದ ಕಾರ್ಯದರ್ಶಿರವಿಕುಮಾರ್‌ ಹಾಗೂ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next