Advertisement
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹೆಸರಿನ ಅಧಿಕೃತ ಘೋಷಣೆಗೆಂದು ದಿಲ್ಲಿಯ ಎಐಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಯ್ಕೆಯಲ್ಲಿ ಸ್ವಲ್ಪ ತಡವಾಗಿದೆ. ಕರ್ನಾಟಕದಲ್ಲಿ ನಮ್ಮದು ಬಲಿಷ್ಠ ನಾಯಕತ್ವ. ಪ್ರತಿಯೊಬ್ಬರದೂ ಸಮರ್ಥ ನಾಯಕತ್ವ. ಹೀಗಾಗಿ ಮಾತುಕತೆ ಮೂಲಕ ಒಮ್ಮತದ ನಿರ್ಧಾರಕ್ಕೆ ಸಮಯ ಹಿಡಿದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಶನಿವಾರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ಹಲವು ಸಚಿವರೂ ಪ್ರಮಾಣ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.
Related Articles
Advertisement
ಭಾರತ್ ಜೋಡೋ ಯಾತ್ರೆಯಿಂದ ಆರಂಭಗೊಂಡ ನಮ್ಮ ಹೋರಾಟ ಪ್ರಜಾಧ್ವನಿ ಯಾತ್ರೆ ಮೂಲಕ ನಾಡಿನ ಮೂಲೆ ಮೂಲೆ ತಲುಪಿತು. ಜನರ ಸಮಸ್ಯೆ ಆಲಿಸಿತು, ಅವರ ಕಷ್ಟಗಳಿಗೆ ಸ್ಪಂದಿಸಲು ಗ್ಯಾರಂಟಿ ಕಾರ್ಯಕ್ರಮ ಘೋಷಿಸಿದೆವು. ಈಗ ಅವುಗಳ ಅನುಷ್ಠಾನದ ಮೂಲಕ ರಾಜ್ಯದ ಮಹಾ ಜನತೆಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ ಎಂದರು.
ಕರ್ನಾಟಕದಲ್ಲಿ ನಾವು ಮಾದರಿ ಆಡಳಿತ ನೀಡುತ್ತೇವೆ. ಬ್ರ್ಯಾಂಡ್ ಕರ್ನಾಟಕ ನಿರ್ಮಾಣ ಮಾಡುತ್ತೇವೆ. ಜನರ ನಿರೀಕ್ಷೆಗಳು ದೊಡ್ಡದಾಗಿದ್ದು, ಖಂಡಿತವಾಗಿಯೂ ಎಲ್ಲದಕ್ಕೂ ಸ್ಪಂದಿಸಲಿದ್ದೇವೆ ಎಂದು ಹೇಳಿದರು.