Advertisement
ನಗರದ ಕನಕ ಭವನದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷದವತಿಯಿಂದ ಜಂಟಿಯಾಗಿ ಆಯೋಜಿಸಿದ್ದ ಕೃತಜ್ಞತೆ ಹಾಗೂ ಅಭಿನಂದನಾ ಸಭೆಯಲ್ಲಿ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
Related Articles
Advertisement
‘ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷವಾದರೂ ಅಭಿವೃದ್ಧಿ ಎಂಬುದು ಮರಿಚಿಕೆಯಾಗಿದೆ. ಆದರೆ ಯಾವುದೇ ಅಭಿವೃದ್ದಿಗೆ ಹಣಕಾಸಿನ ತೊಂದರೆ ಇಲ್ಲವೆಂದು ಸಿಎಂ, ಡಿಸಿಎಂ ಹೇಳುತ್ತಿರುವುದು ನಾಚಿಕೆಗೇಡು. ರಾಜ್ಯದಲ್ಲಿ ಅಭಿವೃದ್ಧಿ ಎಂಬುದು ಮರಿಚಿಕೆಯಾಗಿದೆ. ಮಂತ್ರಿಗಳನ್ನು ಭೇಟಿ ಮಾಡಿ ಅಭಿವೃದ್ಧಿ ಬಗ್ಗೆ ಚರ್ಚಿಸಿದರೆ ಅನುದಾನವಿಲ್ಲವೆನ್ನುತ್ತಾರೆ, ಕಾಂಗ್ರೆಸ್ ಶಾಸಕರು ತಮ್ಮ ಎದುರಿನಲ್ಲೇ ಮಂತ್ರಿಗಳಿಗೆ ಅನುದಾನ ನೀಡದಿದ್ದಲ್ಲಿ ನಾವು ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದನ್ನು ಕಂಡೆನೆಂದು ಬೇಸರ ವ್ಯಕ್ತಪಡಿಸಿದರು.
ತಾವು ಯಾವುದೇ ಮಂತ್ರಿಯನ್ನು ಭೇಟಿ ಮಾಡಿದಾಗ ಹುಣಸೂರು ಕ್ಷೇತ್ರಕ್ಕೆ ಅನುದಾನ ನೀಡಬೇಡಿ ಎಂಬ ಒತ್ತಾಯವಿದೆ. ಹಿಂದೆಯೇ ಕ್ಷೇತ್ರಕ್ಕೆ ಸರಕಾರದಿಂದ ಅನುದಾನ ತನ್ನಿ, ನೀವೇ ಕ್ರೆಡಿಟ್ ತಗೆದುಕೊಳ್ಳಿ ಅಭಿನಂದಿಸುತ್ತೇನೆಂದು ಹೇಳಿದ್ದೆ. ಈಗಲೂ ಬದ್ದನಾಗಿದ್ದೇನೆಂದು ಮಾಜಿ ಶಾಸಕ ಮಂಜುನಾಥರ ಹೆಸರು ಹೇಳದೆ ಟೀಕಿಸಿ, ಇನ್ನು ಕಂದಾಯಮಂತ್ರಿ ಕೃಷ್ಣಬೈರೇಗೌಡ ನಿಮ್ಮ ತಾಲೂಕಿನಿಂದ ಅಕ್ರಮ-ಸಕ್ರಮ ಸಮಿತಿ ರಚನೆಗೆ ಯಾವುದೇ ಹೆಸರು ಶಿಫಾರಸ್ಸಾಗಿಲ್ಲವೆನ್ನುತ್ತಾರೆ. ಇನ್ನು ಕಾಲೇಜುಗಳ ಸಿಡಿಸಿ ಸಮಿತಿಗೆ ವರ್ಷದಿಂದ ಜಿಲ್ಲಾ ಉಸ್ತುವಾರಿ ಸಚಿವರು ಸಹಿ ಹಾಕುತ್ತಿಲ್ಲ. ಇನ್ನಾದರೂ ಅಭಿವೃದ್ಧಿಗೆ ಅಡ್ಡಿ ಮಾಡುವ ಬುದ್ದಿ ಬಿಡಿ ಎಂದು ಛೇಡಿಸಿ, ಅಭಿವೃದ್ಧಿ ವಿಚಾರದಲ್ಲಿ ಯಾರೂ ರಾಜಕಾರಣ ಬೆರೆಸಬಾರದು ಇದೇ ರೀತಿ ಮುಂದುವರೆದರೆ ಜನರೊಂದಿಗೆ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಬೇಕಾದೀತೆಂದು ಎಚ್ಚರಿಸಿದರು.
ಹುಣಸೂರಿಗೆ ಗಾರ್ಮೆಂಟ್ಸ್ ಗ್ಯಾರಂಟಿ15 ವರ್ಷಗಳ ಹಿಂದೆ ಗಾರ್ಮೆಂಟ್ಸ್ ಕಾರ್ಖಾನೆ ತರುತ್ತೇನೆಂದಿದ್ದವರಿಂದ ಆಗಿಲ್ಲ. ಕುಮಾರಸ್ವಾಮಿಯವರು ಕೈಗಾರಿಕಾ ಮಂತ್ರಿಯಾಗಿರುವುದು ವರದಾನವಾಗಿದ್ದು, ಅವರ ಮೂಲಕ ಹುಣಸೂರಿಗೆ ಗಾರ್ಮೆಂಟ್ಸ್ ಕಾರ್ಖಾನೆ ತರುವೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ ಮಾತನಾಡಿ ಸಂಸದ ಒಡೆಯರ್‌ರಿಗೆ ಹೆಚ್ಚು ಮತ ಕೊಡಿಸಿದ ಪಕ್ಷಗಳ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು. ಉಪಾಧ್ಯಕ್ಷರಾದ ಗಣೇಶ್‌ಕುಮಾರಸ್ವಾಮಿ, ನಾಗರಾಜಮಲ್ಲಾಡಿ, ಜೆಡಿಎಸ್‌ನ ಸತೀಶ್‌ಕುಮಾರ್ ಮಾತನಾಡಿದರು. ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳ ಮುಖಂಡರು ನೂತನ ಸಂಸದರನ್ನು ಅಭಿನಂದಿಸಿದರು. ಸಭೆಯಲ್ಲಿ ನಗರ ಬಿಜೆಪಿ ಅಧ್ಯಕ್ಷ ನಾರಾಯಣ್, ತಾಲೂಕು ಅಧ್ಯಕ್ಷ ಕಾಂತರಾಜು, ಜೆಡಿಎಸ್ ಅಧ್ಯಕ್ಷ ದೇವರಾಜಒಡೆಯರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ, ಮುಖಂಡರಾದ ಹರವೆಶ್ರೀಧರ್, ಹನಗೋಡುಮಂಜುನಾಥ್, ಸೂರ್ಯಕುಮಾರ್, ದಿನೇಶ್, ವೆಂಕಟರಮಣ, ಬಿಳಿಕೆರೆಮಧು, ವೆಂಕಟಮ್ಮ, ಕಮಲಮ್ಮ, ಯಶೋಧಾ, ನಗರಸಭೆ ಸದಸ್ಯರು, ವಿವೇಕಾನಂದ ಸೇರಿದಂತೆ ಅನೇಕ ಮುಖಂಡರಿದ್ದರು.
ಬೆಳಗ್ಗೆ 11 ಕ್ಕೆ ನಿಗದಿಯಾಗಿದ್ದ ಸಂಸದರ ಅಭಿನಂದನಾ ಸಭೆಯು ಮಧ್ಯಾಹ್ನ 3 ಕ್ಕೆ ಆರಂಭವಾಯಿತು.