Advertisement

ವಕೀಲರ ಹಿತರಕ್ಷಣೆಗೆ ಬದ್ಧ: ಶ್ರೀನಿವಾಸಬಾಬು

04:43 PM Jul 05, 2018 | |

ಚಿತ್ರದುರ್ಗ: ಕಕ್ಷಿದಾರರಿಗೆ ನ್ಯಾಯ ದೊರಕಿಸುವಲ್ಲಿ ನಿರತರಾಗಿರುವ ವಕೀಲರ ಆರೋಗ್ಯ ಹದಗೆಟ್ಟಾಗ ವೈದ್ಯಕೀಯ ವೆಚ್ಚ ಸಿಗುವಂತಾಗಬೇಕು. ಅದಕ್ಕಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಹಾಗೂ ವಕೀಲರ ಸಂಘದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಸದಸ್ಯ ಎಲ್‌. ಶ್ರೀನಿವಾಸಬಾಬು ಭರವಸೆ ನೀಡಿದರು.

Advertisement

ವಕೀಲರ ಪರಿಷತ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅವರು ಬುಧವಾರ ವಕೀಲರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಕೀಲರು ವೆಲ್ಫೇರ್‌ ಫಂಡ್‌ ಅವಲಂಬಿಸಿದ್ದಾರೆ. ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರಿದಾಗ ನೀಡಲಾಗುವ ಒಂದು ಲಕ್ಷ ರೂ. ಏತಕ್ಕೂ ಸಾಲದು. 

ಅದನ್ನು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಆದ್ದರಿಂದ ವಕೀಲರಿಗೆ ಬೆನಿಟ್‌ ಸಿಗುವ ಸ್ಕೀಂಗಳನ್ನು ಜಾರಿಗೆ ತರಲು ಶ್ರಮಿಸುತ್ತೇನೆ. ನ್ಯಾಯಾಲಯದ ಕಟ್ಟಡದಲ್ಲಿಯೇ ವಕೀಲರಿಗೆ ವಾರ್ಡ್‌ ತೆರೆದು ವೈದ್ಯಾಧಿ ಕಾರಿಯನ್ನು ನೇಮಿಸಿ ಒಂದು ಆ್ಯಂಬುಲೆನ್ಸ್‌ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದರು.

ಏಳು ವರ್ಷಗಳಿಂದ ರಾಜ್ಯದಲ್ಲಿ ವಕೀಲರ ಜೊತೆ ನಿರಂತರ ಸಂಪರ್ಕದಲ್ಲಿರುವುದರಿಂದ ಎರಡನೇ ಬಾರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತು. ಇದಕ್ಕೆ ಜಿಲ್ಲೆಯ ಎಲ್ಲಾ ವಕೀಲರ ಬೆಂಬಲವೇ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.

ವಕೀಲರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಕ್ಷೇಮಾಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು. ಆಗ್ನೇಯ ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರವಿದ್ದಂತೆ ವಿಧಾನ ಪರಿಷತ್‌ ನಲ್ಲಿ ವಕೀಲರಿಳಿಗೆ ಪ್ರತ್ಯೇಕ ಕ್ಷೇತ್ರ ಮೀಸಲಿಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಸದಸ್ಯ ಎಲ್‌. ಶ್ರೀನಿವಾಸ್‌ಬಾಬು ಅವರಲ್ಲಿ ವಕೀಲರು ಮನವಿ ಮಾಡಿದರು. ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

Advertisement

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಶಿವು ಯಾದವ್‌, ವಿರೂಪಾಕ್ಷಪ್ಪ, ನಿರಂಜನಮೂರ್ತಿ, ಜಯಣ್ಣ, ಗಿರೀಶ್‌, ಹಿರಿಯ ವಕೀಲರಾದದ ಮಹೇಶ್ವರಪ್ಪ, ಶಿವಣ್ಣರೆಡ್ಡಿ, ಲೋಕೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next