Advertisement

ಭಾರತ ಜತೆ ಬಾಂಧವ್ಯಕ್ಕೆ ಬದ್ಧ

01:04 AM Mar 20, 2021 | Team Udayavani |

ಹೊಸದಿಲ್ಲಿ: ಅಮೆರಿಕದಲ್ಲಿ ಜೋ ಬೈಡೆನ್‌ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಲ್ಲಿನ ರಕ್ಷಣಾ ಸಚಿವ ಲಾಯ್ಡ ಜೇಮ್ಸ್‌ ಆಸ್ಟಿನ್‌ ಭಾರತ ಪ್ರವಾಸ ಕೈಗೊಂಡಿದ್ದಾರೆ. ಶುಕ್ರವಾರ ಅವರು ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.

Advertisement

ಈ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಬಗ್ಗೆ ಮಾತನಾಡಿದರು. ಈ ವೇಳೆ ಮೋದಿಯವರು, ರಕ್ಷಣಾ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ಸಹಕಾರಕ್ಕೆ ಇರುವ ಮಹತ್ವವನ್ನು ಉಲ್ಲೇಖೀಸಿದರು ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಹೊಸದಿಲ್ಲಿಗೆ ಆಗಮಿಸಿದ ಕೂಡಲೇ ಟ್ವೀಟ್‌ ಮಾಡಿದ ಲಾಯ್ಡ “ಭಾರತದ ಪ್ರವಾಸ ಆರಂಭಿಸಿದ್ದು ಖುಷಿ ತಂದಿದೆ. 2 ದೇಶಗಳ ನಡುವಿನ ರಕ್ಷಣಾ ಸಹಕಾರ ಮತ್ತಷ್ಟು ದೃಢ ಗೊಳ್ಳಲಿದೆ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮೊದಲು ಅವರು, ಜಪಾನ್‌, ದ.ಕ್ಷಿಣ ಕೊರಿಯಾಕ್ಕೂ ಭೇಟಿ ನೀಡಿದ್ದರು.

ರಾಜನಾಥ್‌ ಜತೆ ಭೇಟಿ: ಲಾಯ್ಡ ಅವರು ಶನಿವಾರ ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಲಿದ್ದಾರೆ. “ಭಾರತಕ್ಕೆ ನಿಮಗೆ ಸ್ವಾಗತ’ ಎಂದು ರಾಜನಾಥ್‌ ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ, ಅಮೆರಿಕದಿಂದ ಕೇಂದ್ರ ಖರೀದಿಸಲು ಉದ್ದೇಶಿಸಿರುವ 18 ಬಿಲಿಯನ್‌ ಡಾಲರ್‌ ಮೊತ್ತದ 114 ಯುದ್ಧ ವಿಮಾನಗಳ ಡೀಲ್‌ ಬಗ್ಗೆಯೂ ಪ್ರಸ್ತಾಪವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next