Advertisement
ಕನ್ನಡದ ನಾಡು-ನುಡಿ ಮತ್ತು ಜಲ ರಕ್ಷಣೆಗೆ ಅನೇಕ ವರ್ಷಗಳಿಂದ ಅನೇಕ ಕನ್ನಡ ಸಂಘ-ಸಂಸ್ಥೆಗಳು ಕೆಲಸ ಮಾಡಿಕೊಂಡು ಬಂದಿವೆ. ಅವರೆಲ್ಲರ ಬೆಂಬಲಕ್ಕೂ ಸರ್ಕಾರವಿದೆ. ಇತಿಹಾಸ ತಿಳಿಯದವರು ಇತಿಹಾಸ ಬರೆಯಲಾರರು. ಕನ್ನಡ ಚರಿತ್ರೆಯಲ್ಲಿನ ವಿಚಾರಗಳನ್ನು ತಿಳಿದುಕೊಂಡು ಭವಿಷ್ಯತ್ತಿನಲ್ಲಿ ನಾಡ ಕಟ್ಟುವ ಕೆಲಸ ಮಾಡಬೇಕಿದೆ.
Related Articles
Advertisement
ಕವಿಸಂ ಸಾಧನೆ: ಸ್ವಾತಂತ್ರ ಮತ್ತು ನಾಡಿನ ಏಕೀಕರಣದ ಪೂರ್ವದಲ್ಲಿಯೇ 128 ವರ್ಷಗಳ ಹಿಂದೆಯೇ ಧಾರವಾಡದಲ್ಲಿ ಕನ್ನಡವನ್ನು ಕಟ್ಟುವುದಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘ ಹುಟ್ಟಿಕೊಂಡಿದ್ದೇ ಒಂದು ವಿಸ್ಮಯ. ಮುಂಬೈ ಕರ್ನಾಟಕ ಭಾಗದಲ್ಲಿ ಮರಾಠಿ ಪ್ರಾಬಲ್ಯದಿಂದ ಕುಗ್ಗಿ ಹೋಗಿದ್ದ ಕನ್ನಡವನ್ನು ಈ ಸಂಸ್ಥೆ ಕಟ್ಟಿ ಬೆಳೆಸಿರುವುದು ಹೆಮ್ಮೆಯ ವಿಚಾರ ಎಂದು ಸಿದ್ದರಾಮಯ್ಯ ಕರ್ನಾಟಕ ವಿದ್ಯಾವರ್ಧಕ ಸಂಘದ ಸಾಧನೆಯನ್ನು ಕೊಂಡಾಡಿದರು.
ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ನಾಡೋಜ ಡಾ|ಪಾಟೀಲ ಪುಟ್ಟಪ್ಪ ಅವರು ಕನ್ನಡ ನಾಡು ನುಡಿಗೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಅಂತಹ ಸಂಘ ಇನ್ನಷ್ಟು ಬೆಳೆಯಲಿ ಎಂದು ಆಶಿಸಿದರು. ನಾಡೋಜ ಡಾ| ಪಾಟೀಲ ಪುಟ್ಟಪ್ಪ ಮಾತನಾಡಿ, ಸಿದ್ದರಾಮಯ್ಯ ಅವರು ಕನ್ನಡಕ್ಕಾಗಿ ಏನೇ ಕೇಳಿದರೂ ಇಲ್ಲ ಎನ್ನುವುದಿಲ್ಲ.
ಹೀಗಾಗಿ ಅವರು ಬೆಳವಡಿ ಮಲ್ಲಮ್ಮನ ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ವಿದ್ಯಾವರ್ಧಕ ಸಂಘದ ಕಾರ್ಯಕ್ಷೇತ್ರ ವಿಸ್ತರಣೆಗೆ ಅಗತ್ಯವಾದ 5 ಎಕರೆ ಜಾಗವನ್ನು ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿ ನೀಡಬೇಕೆಂದು ಮನವಿ ಮಾಡಿದರು. ಮುಂಡರಗಿ ತೋಂಟದಾರ್ಯಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ, ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಮನುಗುಂಡಿಯ ಶ್ರೀ ಬಸವಾನಂದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ, ಶಾಸಕರಾದ ಅರವಿಂದ ಬೆಲ್ಲದ, ಸಿ.ಎಸ್. ಶಿವಳ್ಳಿ, ಪ್ರಸಾದ್ ಅಬ್ಬಯ್ಯ,ವೀರಣ್ಣ ಮತ್ತಿಕಟ್ಟಿ ಮತ್ತಿತರರಿದ್ದರು.
ಸಾಹಿತಿ ಮೋಹನ ನಾಗಮ್ಮನವರ ಪ್ರಾಸ್ತಾವಿಕ ಮಾತನಾಡಿ, ಕವಿಸಂ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈಗ 1ಕೋಟಿ ರೂ. ನೀಡಿದೆ. ಆದರೆ ಅದನ್ನು ಕಟ್ಟಿ ಬೆಳೆಸಲು 5 ಕೋಟಿ ರೂ.ಗಳನ್ನು ನೀಡಬೇಕು ಎಂದರು. ಕೃಷ್ಣಾ ಜೋಷಿ ಸ್ವಾಗತಿಸಿದರು. ಶಂಕರ ಹಲಗತ್ತಿ ವಂದಿಸಿದರು. ಬಸವಪ್ರಭು ಹೊಸಕೇರಿ ಸೇರಿದಂತೆ ಕವಿಸಂ ಪದಾಧಿಕಾರಿಗಳು ಇದ್ದರು. ಹೆಬ್ಬಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಬಸವರಾಜ ಶಿಗ್ಗಾಂವ ಮತ್ತು ತಂಡದವರು ಹೋರಾಟದ ಪದಗಳನ್ನು ಹಾಡಿದರು.