Advertisement
ಮೂವರೂ ವಿಜಯಪುರ ನಿವಾಸಿಯಾದ ಒಂದೇ ಕುಟುಂಬದ ತಾಯಿ-ಮಕ್ಕಳು ಎಂಬುದು ಪತ್ತೆಯಾಗಿದೆ.
Related Articles
Advertisement
ಮೃತ ರೇಣುಕಾ ಅವರ ಪತಿ ಅಶೋಕ ಹವಾಲ್ದಾರ ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ತಮ್ಮ ಅಣ್ಣ ನಾರಾಯಣರಾವ, ಅತ್ತಿಗೆ ಉಷಾ ಇವರು ಅನಾರೋಗ್ಯದ ಕಾರಣ ಕಳೆದ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು.
ಪರಿಣಾಮ ಅಣ್ಣ-ಅತ್ತಿಗೆಯ ಮಗಳಾಗಿದ್ದ ದೀಪಾ ಸಣ್ಣವಳಿದ್ದ ಕಾರಣ ಆಕೆಯ ಆರೈಕೆಗಾಗಿ ತಮ್ಮ ಊರು ಮುಧೋಳ ತೊರೆದು ವಿಜಯಪುರಕ್ಕೆ ಆಗಮಿಸಿ ನೆಲೆಸಿದ್ದರು. ತಂದೆ ಮೃತರಾದ ಕಾರಣ ದೀಪಾ ಅವರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ದೊರಕಿದ್ದು, ಜಿಲ್ಲಾಧಿಕಾರಿ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ದೀಪಾ ವಿವಾಹದ ನಂತರ ರೇಣುಕಾ-ಅಶೋಕ ದಂಪತಿ ಮುಧೋಳಕ್ಕೆ ಹೋಗಲು ನಿರ್ಧರಿಸಿದ್ದರು.
ಆದರೆ ಈಚೆಗೆ ದೀಪಾ ಹಾಗೂ ರೇಣುಕಾ ಅವರೊಂದಿಗೆ ಕೌಟುಂಬಿಕವಾಗಿ ಕಲಹ ಉಂಟಾಗಿದ್ದ ಸಂದರ್ಭದಲ್ಲಿ ಮನೆಯಿಂದ ಹೊರ ಹೋಗಿ ಎಂದು ದೀಪಾ ಹೇಳಿದ್ದಳು. ಇದರಿಂದ ನೊಂದು ಈ ಮೂವರು ಮನೆಬಿಟ್ಟು ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಅದರೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಐಶ್ವರ್ಯ ಬರೆದಿರುವ ಪತ್ರ ಮೃತರ ಮನೆಯಲ್ಲಿ ಸಿಕ್ಕಿದೆ. ತಮ್ಮ ಮರಣಕ್ಕೆ ತಮ್ಮ ಪರಿವಾರದವರಾಗಲಿ ಅಥವಾ ಸಂಬಂಧಿಕರಾಗಲಿ ಯಾರೂ ಕಾರಣಿಕರ್ತರಲ್ಲ, ತಮ್ಮ ಮರಣಕ್ಕೆ ತಾವೇ ಕಾರಣ ಎಂದು ಬರೆದಿದ್ದಾರೆ.
ಈ ಕುರಿತು ಕೊಲ್ಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.