Advertisement

ಅಧಿಕಾರಿಗಳ ವಿಳಂಬ ಧೋರಣೆಗೆ ಆಯುಕ್ತರ ಎಚ್ಚರಿಕೆ

05:05 PM Nov 28, 2019 | Suhan S |

ಮಾಲೂರು: ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅವರು, ಪಟ್ಟಣದ ತಾಲೂಕು ಕಚೇರಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

Advertisement

ಕಂದಾಯ ಇಲಾಖೆ ಅಧಿಕಾರಿಗಳ ನ್ಯೂನತೆ, ಅಸಮರ್ಪಕ ಸೇವೆ, ಅಧಿಕಾರಿ ವರ್ಗದ ವಿಳಂಬ ಧೋರಣೆ ಮತ್ತು ಸಾರ್ವಜನಿಕ ಆಸ್ತಿ, ಸರ್ಕಾರಿ ಭೂಮಿಗಳಿಗೆಅಕ್ರಮ ದಾಖಲೆ ಸೃಷ್ಟಿ, ಒತ್ತುವರಿ ಬಗ್ಗೆ ನಾಗರಿಕರುದೂರು ನೀಡಿದರು. ದೂರು ಸ್ವೀಕರಿಸಿ ಮಾತನಾಡಿದ ಪ್ರಾದೇಶಿಕ ಆಯುಕ್ತರು, ಇತ್ತೀಚಿನ ದಿನಗಳಲ್ಲಿಮಾಲೂರು ತಾಲೂಕು ಕಚೇರಿಯಲ್ಲಿ ಅನೇಕ ಭ್ರಷ್ಟಾಚಾರ ನಡೆಯುತ್ತಿರುವ ಜೊತೆಗೆ

ಸಾರ್ವಜನಿಕ ಅರ್ಜಿಗಳ ವಿಲೇವಾರಿಯಲ್ಲಿ ಭಾರೀ ಪ್ರಮಾಣದ ವಿಳಂಬ ಮತ್ತು ಸಾರ್ವಜನಿಕರನ್ನು ತಮ್ಮ ಕೆಲಸ ಕಾರ್ಯಗಳಿಗಾಗಿ ತಿಂಗಳು ಗಟ್ಟಲೆ ಅಲೆಸುತ್ತಿರುವ ಬಗ್ಗೆ ಪ್ರಾದೇಶಿಕ ಆಯುಕ್ತರ ಕಚೇರಿಗೆ ಲಿಖೀತ ದೂರು ಬಂದಿವೆ. ಹೀಗಾಗಿ ಖುದ್ದು ತಾವೇ ಬಂದು ಸಾರ್ವ ಜನಿಕರ ಸಮಸ್ಯೆ ಪರಿಶೀಲಿಸಲು ಮುಂದಾಗಿದ್ದೇವೆಂದರು.

ಅಗತ್ಯ ಕ್ರಮ: ಅಲ್ಲದೇ, ಸ್ಥಳೀಯವಾಗಿ ಮತ್ತಷ್ಟು ಸತ್ಯಸಂಗತಿಗಳು ಹೊರ ಬಂದಿದ್ದು, ಮೇಲ್ನೊಟಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಕೆಲವು ಸರ್ಕಾರಿ ಭೂಮಿಗಳನ್ನು ಅಕ್ರಮ ದಾಖಲೆ ಸೃಷ್ಟಿಸಿ ಭೂ ಪರಿವರ್ತನೆ ಮಾಡಿ ಮಾರಾಟ ಮಾಡಿರುವ ಬಗ್ಗೆ, ಸರ್ಕಾರಿ ಗೋಮಾಳಗಳನ್ನು ಅಕ್ರಮ ದಾಖಲೆ ಸೃಷ್ಟಿಸಿ ಉದ್ಯಮಿಗಳಿಗೆ ಮಾರಾಟ, ಲಕ್ಕೂರು ಭಾಗದಲ್ಲಿ ಬೆಳೆ ಬಾಳುವ ಸರ್ಕಾರಿ ಭೂಮಿಯನ್ನು ವಸತಿ ಸಮುಚ್ಚಯ ಗಳ ನಿರ್ಮಾಣಕ್ಕೆ ಮಾರಾಟ ಮಾಡಿರುವ ಬಗ್ಗೆ ದೂರು ಬಂದಿವೆ. ಈ ಕೂಡಲೇ ಉಪವಿಭಾಗಾಧಿಕಾರಿಗಳಿಗೆ ವರದಿ ನೀಡಿವಂತೆ ಸೂಚಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕಂದಾಯ ದಾಖಲೆ ತಿದ್ದುಪಡಿ, ಸರ್ವೆ ಇಲಾಖೆ ವಿಚಾರವಾಗಿ ಭಾರೀ ಪ್ರಮಾಣದ ವಿಳಂಬಗಳ ಜೊತೆಗೆ ಮಧ್ಯವರ್ತಿಗಳ ಮೂಲಕವೇ ಸಾರ್ವಜನಿಕರು ಕೆಲಸ ಮಾಡಿಸಿಕೊಳ್ಳಬೇಕಾಗಿದೆ ಎಂದು ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿಗೆ ಸೂಚನೆ ನೀಡಿದ ಆಯುಕ್ತರು, ತಮ್ಮ ನ್ಯಾಯಾಲಯದಲ್ಲಿರುವ ತಿದ್ದುಪಡಿ ಅರ್ಜಿ ಮತ್ತು ಎಸ್‌ಸಿ, ಎಸ್‌ಟಿ ಸಮುದಾಯಗಳ ಭೂ ಮಂಜೂರಾತಿ ಕಾಯ್ದೆಯಡಿ ಭೂಮಿಗಳು ಅಕ್ರಮ ಪರಬಾರೆ ಆಗಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಸೂಚಿಸಿದರು.

Advertisement

ತಹಶೀಲ್ದಾರ್‌ ನಾಗರಾಜು, ಉಪವಿಭಾಗಾಧಿಕಾರಿ ಸೋಮಶೇಖರ್‌ರಿಗೆ ಮಾರ್ಗದರ್ಶನ ನೀಡಿ ಸಾರ್ವಜನಿಕರನ್ನು ವಿನಾಕಾರಣ ಕಚೇರಿಗೆ ಅಲೆಯುವಂತೆಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ನಿಗದಿತ ಅವಧಿಯಲ್ಲಿ ಸಾರ್ವಜನಿಕ ಅರ್ಜಿ ವಿಲೇವಾರಿಮಾಡುವ ಜೊತೆಗೆ ಖಾತೆ ಬದಲಾವಣೆ , ತಿದ್ದುಪಡಿ , ಜಾತಿ ಅದಾಯ ಪ್ರಮಾಣ ಪತ್ರಗಳನ್ನು ನಿಯಮಾನುಸಾರ ಸೂಕ್ತ ಕಾಲದಲ್ಲಿ ವಿತರಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಮತ್ತು ನೌಕರ ವರ್ಗದಿಂದಲೂ ಮಾಹಿತಿ ಸಂಗ್ರಹಿಸಿದರು.

ತಾಲೂಕಿನ ಸರ್ಕಾರಿ ಮಂಜೂರಾತಿ ಭೂಮಿಗಳ ದುರಸ್ತಿ ಮತ್ತು ಸರ್ಕಾರಿ ಆಸ್ತಿ, ಗೋಮಾಳ ಭೂಮಿ ಉಳಿಸುವ ನಿಟ್ಟಿನಲ್ಲಿ ವಿಶೇಷ ಆಂದೋಲನ ಮತ್ತು ಅದಾಲತ್‌ ಮೂಲಕ ಶೀಘ್ರ ಸಾರ್ವಜನಿಕರ ಅರ್ಜಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ತಾಲೂಕಿನ ಗೋಮಾಳ ರಾಜಕಾಲುವೆ, ಸರ್ಕಾರಿತೋಪು, ಜಲಾಶಯಗಳ ಅಕ್ರಮ ಒತ್ತುವರಿ ತೆರವು ಕಾರ್ಯಚಾರಣೆಯನ್ನು ಶೀಘ್ರ ಆರಂಭಿಸುವಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next