Advertisement
ಸಮಾನ ನಾಗರಿಕ ಸಂಹಿತೆ ರಚನೆ ಸಂಬಂಧ ಸಾಧಕ -ಬಾಧಕಗಳ ಅಧ್ಯಯನಕ್ಕಾಗಿ ಕೇಂದ್ರ ಕಾನೂನು ಸಚಿವಾಲಯ ರೂಪಿಸಿದ್ದ 22ನೇ ಕಾನೂನು ಆಯೋಗದ ಅವಧಿ ಶುಕ್ರವಾರಕ್ಕೆ ಅಂತ್ಯವಾಗಿದ್ದು, ಇದುವರೆಗೆ ನಡೆಸಿರುವ ಅಧ್ಯಯನದ ಬಗ್ಗೆ ಪೂರ್ಣ ವರದಿ ನೀಡದೆ ಸಮಾ ಲೋಚನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಪ್ರಸಕ್ತ ಚಾಲ್ತಿಯಲ್ಲಿರುವ ಕೌಟುಂಬಿಕ ಕಾನೂನುಗಳಲ್ಲೇ ಕೆಲವು ಬದಲಾ ವಣೆ ಮಾಡಬಹುದು. ಸದ್ಯ ಏಕರೂಪ ನಾಗರಿಕ ಸಂಹಿತೆಯ ಅಗತ್ಯವೂ ಇಲ್ಲ, ಅಪೇಕ್ಷಣೀಯವೂ ಅಲ್ಲ; ಮದುವೆ, ವಿಚ್ಛೇದನ, ಜೀವನಾಂಶ ಮತ್ತು ವಿವಾಹದ ವಯಸ್ಸಿನ ಬಗ್ಗೆ ಕೆಲವೊಂದು ಅಭಿಪ್ರಾಯ ಮಂಡಿಸಿದೆ.
Related Articles
ಚರ್ಚ್ ತಪ್ಪೊಪ್ಪಿಗೆಯನ್ನು ನಿಷೇಧಿಸುವುದ ಕ್ಕಿಂತ ಆ ಪ್ರಕ್ರಿಯೆಗೆ ನನ್‌ಗಳನ್ನು ಸೇರ್ಪಡೆಗೊ ಳಿಸುವುದು ಸೂಕ್ತ ಎಂದು ಕಾನೂನು ಆಯೋಗ ಅಭಿಪ್ರಾಯ ವ್ಯಕ್ತಪಡಿಸಿದೆ. ಇದರ ಕುರಿತು ಎಚ್ಚರಿಕೆ ಅಗತ್ಯ. ತಪ್ಪೊಪ್ಪಿಗೆ ಪ್ರಕ್ರಿಯೆಗೆ ನನ್‌ಗಳ ಸೇರ್ಪಡೆಗೆ ಕಾನೂನಿನ ಹೇರಿಕೆ ಅಗತ್ಯವಿಲ್ಲ, ಸಮುದಾಯದೊಳಗೆ ಒಮ್ಮತ ಮೂಡಿಸಿ ಜಾರಿಗೆ ತರಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ.
Advertisement
21ನೇ ಆಯೋಗ ಅವಧಿ ಮುಕ್ತಾಯಸಮಾನ ನಾಗರಿಕ ಸಂಹಿತೆಯ ಕುರಿತು ಸಮಗ್ರ ವರದಿ ಸಲ್ಲಿಸುವ ಹೊಣೆಯನ್ನು 21ನೇ ಕಾನೂನು ಆಯೋಗ ಮುಂದಿನ ಆಯೋಗಕ್ಕೆ ವರ್ಗಾಯಿಸಿದೆ. ನ್ಯಾ| ಬಿ.ಎಸ್.ಚೌಹಾಣ್ ನೇತೃತ್ವದ 21ನೇ ಆಯೋಗದ ಅವಧಿ ಶುಕ್ರವಾರಕ್ಕೆ ಮುಕ್ತಾಯಗೊಂಡಿದ್ದು ಅಂತಿಮ ವರದಿಯ ಬದಲು ಸಮಾಲೋಚನ ಪ್ರಬಂಧ ಪ್ರಕಟಿಸಿದೆ. ಮಹಿಳೆಗೂ ಸಮಾನ ಪಾಲು
ಹಣಕಾಸು ಕೊಡುಗೆಯನ್ನು ಲೆಕ್ಕಿಸದೆ ಕುಟುಂಬದಲ್ಲಿ ಮಹಿಳೆಯ ಪಾತ್ರವನ್ನು ಗುರುತಿ ಸಬೇಕಿದೆ. ವಿಚ್ಛೇದನ ವೇಳೆ ಮದುವೆಯ ಅನಂತರ ಗಳಿಸಿದ ಆಸ್ತಿಯಲ್ಲಿ ಆಕೆಗೆ ಸಮಾನ ವಾದ ಪಾಲು ಸಲ್ಲಬೇಕು ಎಂದು ಕಾನೂನು ಆಯೋಗ ಸಲಹೆ ನೀಡಿದೆ. ಈ ತತ್ವವನ್ನು ಸಂಬಂಧ ಮುರಿಯುವ ವೇಳೆ ಆಸ್ತಿಯನ್ನು ಸಮಾನವಾಗಿ ವಿಭಜಿಸಬೇಕೆಂಬುದಾಗಿ ಯಥಾವತ್ ಆಗಿ ಅರ್ಥೈಸಿಕೊಳ್ಳಬಾರದು. ಕೆಲವು ಪ್ರಕರಣಗಳಲ್ಲಿ ಪುರುಷರಿಗೆ ಹೊರೆಯಾಗುವುದೂ ಇದೆ. ಆದ್ದರಿಂದ ಎಚ್ಚರಿಕೆ ಅಗತ್ಯ. ಇದನ್ನು ಕೋರ್ಟ್ ವಿವೇಚನೆಗೆ ಬಿಡುವುದು ಮುಖ್ಯ ಎಂದೂ ಆಯೋಗ ಹೇಳಿದೆ. ಪುರುಷರಿಗೂ ಮದುವೆ ವಯಸ್ಸು 18 ಮಾಡಿ
ಮದುವೆಯ ಕಾನೂನಾತ್ಮಕ ವಯಸ್ಸಿನಲ್ಲಿ ಸಮಾನತೆ ತರಬೇಕೆಂದು ಆಶಿಸಿರುವ ಕಾನೂನು ಆಯೋಗ, ಪುರುಷರ ಮದುವೆಯ ವಯಸ್ಸನ್ನು 21ರಿಂದ 18ಕ್ಕೆ ಇಳಿಸಬೇಕು ಎಂದು ಶಿಫಾರಸು ಮಾಡಿದೆ. ಪ್ರೌಢತೆಗೆ ಸಾರ್ವತ್ರಿಕವಾಗಿ ನಿಗದಿಯಾಗಿ ರುವ ಹಾಗೂ ಸರಕಾರದ ಎಲ್ಲ ಸವಲತ್ತು ಗಳನ್ನು ಪಡೆಯಲು ನಾಗರಿಕರಿಗೆ 18 ವಯಸ್ಸನ್ನು ನಿಗದಿಪಡಿಸಿರುವಾಗ ಸಂಗಾತಿ ಆಯ್ದುಕೊಳ್ಳುವ ಸಾಮರ್ಥ್ಯ ಅವರಿಗಿದೆ ಎಂದು ಪರಿಗಣಿಸಬೇಕು ಎಂದು ಹೇಳಿದೆ. ಬಹುಪತ್ನಿತ್ವಕ್ಕಾಗಿ ಮತಾಂತರ ಅಪಾಯ
ಇಸ್ಲಾಂನಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದ್ದರೂ ಅದು ಅಪರೂಪದ ಅಭ್ಯಾಸವಾಗಿದೆ. ಆದರೆ ನಿಜವಾದ ಅಪಾಯ, ಬಹು ಪತ್ನಿಯರನ್ನು ಹೊಂದುವ ಸಲುವಾಗಿ ಇತರರನ್ನು ಇಸ್ಲಾಂಗೆ ಪರಿವರ್ತಿಸುವುದಾಗಿದೆ. ಇದು ಅಪಾಯಕಾರಿ ಬೆಳವಣಿಗೆ 2ಎಂದು ಆಯೋಗ ಬೆಟ್ಟು ಮಾಡಿದೆ.