Advertisement

ರಾಜ್ಯದ 12 ಕ್ಷೇತ್ರಗಳಲ್ಲಿ  ಹಣ ಬಲ ಪ್ರದರ್ಶನ

12:30 AM Mar 19, 2019 | Team Udayavani |

ಹೊಸದಿಲ್ಲಿ: ಚುನಾವಣೆ ಎಂದರೆ “ಹಣಬಲ, ತೋಳ್ಬಲ’ ಎಂಬ ಪದಗಳ ಬಳಕೆ ಮಾಮೂಲು. ಇದಕ್ಕೆ ಸಾಕ್ಷಿ ಎಂಬಂತೆ ಕರ್ನಾಟಕದ 12 ಸೇರಿ ದೇಶದ 150 ಕ್ಷೇತ್ರಗಳಲ್ಲಿ ಹಣಬಲ ಜೋರಾಗಿಯೇ ಕೆಲಸ ಮಾಡಲಿದೆ ಎಂಬುದನ್ನು ಕೇಂದ್ರ ಚುನಾವಣ ಆಯೋಗ ಕಂಡುಕೊಂಡಿದೆ. ಅಂದರೆ ಇವುಗಳನ್ನು ಮತದಾರರಿಗೆ “ವೋಟಿಗಾಗಿ ಹಣದ ಆಮಿಷ ನೀಡುವ’ ಕ್ಷೇತ್ರಗಳು ಎಂದು ಪರಿಗಣಿಸಲಾಗಿದೆ.

Advertisement

ಹಿಂದಿನ ಚುನಾವಣೆಗಳ ಪರಿಶೀಲನೆ ನಡೆಸಿದ ಅನಂತರ ದೇಶದ 150 ಕ್ಷೇತ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ವೆಚ್ಚ ಮಾಡುವ ಕ್ಷೇತ್ರಗಳು ಎಂಬ ಪಟ್ಟ ನೀಡಲಾಗಿದೆ. ವಿಶೇಷವೆಂದರೆ, ತಮಿಳು ನಾಡಿನ ಎಲ್ಲ ಕ್ಷೇತ್ರಗಳೂ ಈ ಪಟ್ಟಿ ಯೊಳಗಿವೆ. ಆಂಧ್ರದಲ್ಲಿ ಅರ್ಧಕ್ಕಿಂತ ಹೆಚ್ಚು, ತೆಲಂ ಗಾಣ, ಬಿಹಾರ, ಕರ್ನಾಟಕ, ಗುಜರಾತ್‌ನ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚಿನವು ಈ ಸಾಲಿನಲ್ಲಿವೆ. ಸದ್ಯಕ್ಕೆ ದೇಶದ ಎಲ್ಲ ಕ್ಷೇತ್ರಗಳ ಪರಿಶೀಲನೆ ಮುಗಿದಿಲ್ಲ. ಹೀಗಾಗಿ ಈ ಪಟ್ಟಿ ಮತ್ತಷ್ಟು ಉದ್ದವಾಗುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖೀಸಿ “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

ಇಂಥ ಕ್ಷೇತ್ರಗಳಿಗೆ ಇದೇ ಮೊದಲ ಬಾರಿಗೆ ಪ್ರತಿ ಕ್ಷೇತ್ರಕ್ಕೆ ಇಬ್ಬರಂತೆ ವೆಚ್ಚ ವೀಕ್ಷಕರನ್ನು ಆಯೋಗ ನೇಮಿಸುತ್ತಿದೆ. ಮಾ.15ರಂದು ಹೊಸದಿಲ್ಲಿಯಲ್ಲಿ ನಡೆದ ಬಹು ತನಿಖಾ ಸಂಸ್ಥೆಗಳ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ವಿವಿಧ ರಾಜ್ಯಗಳ ಚುನಾವಣಾ ಮುಖ್ಯಾಧಿಕಾರಿಗಳ ಸಭೆಯಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ ದಾರರ ಓಲೈಕೆಗಾಗಿ ಹಣ ಮತ್ತು ಇತರ ವಸ್ತು ಗಳನ್ನು ವಿತರಿಸುವ ಸಾಧ್ಯವಿದೆ ಎಂಬ ಅಂಶ ವ್ಯಕ್ತವಾಗಿತ್ತು. ಅಲ್ಲಿ ಚರ್ಚೆಯಾದ ಮಾಹಿತಿ ಆಧಾರದಲ್ಲಿ ವಿವಿಧ ರಾಜ್ಯಗಳಲ್ಲಿನ ಕ್ಷೇತ್ರಗಳನ್ನು  ಗಣನೆಗೆ ತೆಗೆದುಕೊಳ್ಳಲಾಗಿದೆ.

1,200 ಕೋಟಿ ರೂ.2014ರ ಚುನಾವಣೆಯಲ್ಲಿ  ಸಿಕ್ಕಿದ್ದ  ಹಣ, ವಸ್ತುಗಳ ಒಟ್ಟು  ಮೌಲ್ಯ
300 ಕೋಟಿ ರೂ. ನಗದು, ಉಳಿದದ್ದು  ವಸ್ತು

700 ಕೋ ರೂ.ಪಂಜಾಬ್‌ನಲ್ಲಿ ಮುಟ್ಟುಗೋಲು ಹಾಕಲಾಗಿದ್ದ ಮಾದಕ ವಸ್ತುಗಳ ಮೌಲ್ಯ
296 ಕೋ ರೂ.2018ರ ಪಂಚರಾಜ್ಯ ಚುನಾವಣೆ ವೇಳೆ ವಶವಾಗಿದ್ದ  ನಗದು

Advertisement
Advertisement

Udayavani is now on Telegram. Click here to join our channel and stay updated with the latest news.

Next