Advertisement

ಕಮಿಷನ್‌ ಆರೋಪ ಸತ್ಯಕ್ಕೆ ದೂರ: ಸಚಿವ ಕೃಷ್ಣಪ್ಪ

06:55 AM Jan 25, 2018 | Team Udayavani |

ಬೆಂಗಳೂರು:ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅನಷ್ಠಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಪಕ್ಷದ ನಾಯಕರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ವಸತಿ ಸಚಿವ ಎಂ. ಕೃಷ್ಣಪ್ಪ ಹೇಳಿದ್ದಾರೆ.

Advertisement

ಪ್ರತಿಪಕ್ಷದ ನಾಯಕರು ಬುಧವಾರ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಯೋಜನೆ ಜಾರಿಗೊಳಿಸಲು ಇನ್ನೂ ಟೆಂಡರ್‌ ಪ್ರಕ್ರಿಯೆ ಅಂತಿಮವಾಗಿಲ್ಲ. ಟೆಂಡರ್‌ ಹಾಕಲು ಇನ್ನೂ ಅವಕಾಶ ಇದೆ.ಟೆಂಡರ್‌ ಪ್ರಕ್ರಿಯೆಯೆ ಮುಗಿಯದೇ ಲಂಚದ ಆರೋಪ ಮಾಡಿರುವುದು ಹಾಸ್ಯಾಸ್ಪದ. ಬಿಜೆಪಿಯವರು ಮಗು ಹುಟ್ಟುವ ಮೊದಲೇ ಹೆಸರು ಇಡಲು ಹೊರಟಿದ್ದಾರೆಂದು ತಿಳಿಸಿದ್ದಾರೆ.

ಪ್ರತಿಪಕ್ಷದ ನಾಯಕರು ಮಾಡುವ ಆರೋಪಕ್ಕೆ ಗಾಂಭೀರ್ಯತೆ ಇರಬೇಕು. ಯಾವುದೋ ದಾಖಲೆ ಇಲ್ಲದ ಸುಳ್ಳು ಆರೋಪ ಮಾಡಿ ನಗೆ ಪಾಟಲಿಗೀಡಾಗಿದ್ದಾರೆ. ಸ್ಲಂ ಬೋರ್ಡ್‌ನಿಂದ ಇದುವರೆಗೂ ಕೇವಲ 60 ಸಾವಿರ ಮನೆ ನಿರ್ಮಿಸಲಾಗಿದೆ. ಆದರೆ, ನಾವು ಒಂದು ವರ್ಷದಲ್ಲಿ 50 ಸಾವಿರ ಮನೆ ಕಟ್ಟುತ್ತಿದ್ದೇವೆ. ಅಲ್ಲದೇ ಬಡವರಿಗೆ 1 ಲಕ್ಷ ಸೂರು ನೀಡಲು ತೀರ್ಮಾನ ಮಾಡಿರುವುದರಿಂದ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಕೆಲಸ ಮಾಡದಿದ್ದರೆ ನಿಷ್ಕ್ರಿàಯ ಅಂತ ಹೇಳುತ್ತಾರೆ. ಕೆಲಸ ಮಾಡಿದರೆ ಈ ರೀತಿ ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಕೃಷ್ಣಪ್ಪ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next