Advertisement
ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನೀರಿನ ಬಿಲ್ ಬಾಕಿ ಇರುವವರಿಂದ ಕೂಡಲೇ ಮೊತ್ತ ವಸೂಲಿಗೆ ಕ್ರಮ ಜರಗಿಸಬೇಕು ಎಂದು ವಿಪಕ್ಷ ಸದಸ್ಯರು ಒತ್ತಾಯಿಸಿದರು.
Related Articles
Advertisement
ಇದನ್ನೂ ಓದಿ : ಕೊಡಿಯಾಲಬೈಲ್ : ನವಸ್ಪರ್ಶ ಪಡೆದ ರಾಷ್ಟ್ರಕವಿಯ ವೃತ್ತ
ಮೀನು ಮಾರಾಟ ಮಳಿಗೆ: ಪುರಸಭೆಯ ವ್ಯಾಪ್ತಿ ಯಲ್ಲಿ ಅಲ್ಲಲ್ಲಿ ಮೀನು ಮಾರಾಟ ಮಾಡುವುದು ತಪ್ಪು ಎಂದು ಅವರಿಗೆಲ್ಲ ನಿರ್ಬಂಧ ಹೇರಲಾಗುತ್ತಿದೆ. ಆದರೆ, ಮೀನುಗಾರಿಕೆ ಇಲಾಖೆಯಿಂದ ಪತ್ರ ತಂದ ವರಿಗೆಲ್ಲ ಮಳಿಗೆ ಸ್ಥಾಪನೆಗೆ ಜಾಗ ಒದಗಿಸುತ್ತಿದೆ, ಇದು ಸಲ್ಲದು ಎಂದು ವಿಪಕ್ಷೀಯ ಸದಸ್ಯರೆಲ್ಲ ಆಕ್ಷೇಪ ವ್ಯಕ್ತಡಿಸಿದರು.
ಮುಂಡ್ಲಿ ಮೂಡುಬಿದಿರೆಯಲ್ಲಿದೆಯೇ: ಚರ್ಚಿ ಸುವ ವಿಷಯ ನಂಬ್ರ 30ರಲ್ಲಿ ಪುರಸಭೆ ವ್ಯಾಪ್ತಿ ಯಲ್ಲಿ ಮುಖ್ಯ ನೀರು ಸರಬರಾಜು ಯೋಜನೆಯ “ಮುಂಡ್ಲಿ’ ರೇಚಕ ಸ್ಥಾವರ ಹಾಗೂ ಜ್ಯೋತಿನಗರ ನೀರು ಶುದ್ಧೀಕರಣ ಘಟಕಕ್ಕೆ. ಎಂಬ ವಾಕ್ಯವನ್ನು ಓದಿದ ವಿಪಕ್ಷದವರು “ಸ್ವಾಮೀ, ಮುಂಡ್ಲಿ ಇರುವುದು ಕಾರ್ಕಳದಲ್ಲಿ ಇಲ್ಲಿರುವುದು ಪುಚ್ಚಮೊಗರು’ ಎಂದಾಗ ಸಭೆಯಲ್ಲಿ ನಗುವಿನಲೆ ಎದ್ದಿತು.
1991-92ರಲ್ಲಿ ನಿರ್ಣಯವಾಗಿದ್ದಂತೆ ಕಲ್ಲಬೆಟ್ಟು ಬಂಗಾಲಪದವಿನಲ್ಲಿ ಶ್ಮಶಾನ ನಿರ್ಮಿಸಬೇಕು ಎಂದು ಉಪಾಧ್ಯಕ್ಷೆ ಸುಜಾತಾ ಶಶಿಕಿರಣ ಒತ್ತಾಯಿಸಿದರೆ, ಜೆಸ್ಸಿ ಮಿನೇಜಸ್, ಸುರೇಶ ಕೋಟ್ಯಾನ್, ಕೊರಗಪ್ಪ ಮಾತನಾಡಿ, ಈ ಭಾಗದಲ್ಲಿ ಈಗ ಬಹಳಷ್ಟು ಮನೆಗಳಾಗಿರುವುದರಿಂದ ಇದನ್ನು ಪುನರ್ ವಿಮರ್ಶಿಸಬೇಕಾಗಿದೆ ಎಂದರು. ಉಪಾಧ್ಯಕ್ಷರು ತಮ್ಮ ಪಟ್ಟು ಬಿಡಲಿಲ್ಲ. ಸಭೆಯಲ್ಲಿ ಆಗಿರುವ ನಿರ್ಣಯಗಳ ಪ್ರತಿ ಹತ್ತು ದಿನಗಳ ಒಳಗಾಗಿ ಸಿದ್ಧವಾಗಬೇಕು,ವಾರಗಟ್ಟಲೆ ಕಾಯುವಂತೆ ಮಾಡಬಾರದು ಎಂದು ಪಿ.ಕೆ. ಥೋಮಸ್ ಕೋರಿದರು. ಸೌಮ್ಯಾ ಶೆಟ್ಟಿ, ಶ್ವೇತಾ ಪ್ರವೀಣ್, ದಿವ್ಯಾ ಜಗದೀಶ, ಪುರಂದರ ದೇವಾಡಿಗ, ನವೀನ ಶೆಟ್ಟಿ ಮೊದಲಾದವರು ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ. ಸಮುದಾಯ ಅಧಿಕಾರಿ ಗೋಪಾಲ ನಾೖಕ್, ಪರಿಸರ ಅಭಿಯಂತರೆ ಶಿಲ್ಪಾ ಎಸ್. ಮೊದಲಾದವರಿದ್ದರು.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿಕದ್ದುಮುಚ್ಚಿ ಕಸ, ತ್ಯಾಜ್ಯ ಎತ್ತಿ ಬಿಸಾಡುವ ಬಗ್ಗೆ ಕಠಿನ ಕ್ರಮ ಜರಗಿಸಬೇಕು ಎಂದು ರಾಜೇಶ್ ನಾೖಕ್ , ಈಗಿರುವ ಸಿಸಿ ಕೆಮರಾಗಳ ಕಾರ್ಯ ಕ್ಷಮತೆ ಸಾಲದು; ಪ್ರಭಾವಶಾಲಿ ಸಿಸಿ ಕೆಮರಾ ಅಳವಡಿಸಬೇಕು, ತಪ್ಪಿತಸ್ಥರ ಮೇಲೆ ಕೇಸು ಜಡಿದು ಪತ್ರಿಕೆಗಳಲ್ಲಿ ಪ್ರಚಾರ ಮಾಡಬೇಕು ಎಂದು ಪಿ.ಕೆ. ಥೋಮಸ್ ಆಗ್ರಹಿಸಿದರು. ಅಧಿಕಾರಿಗಳನ್ನೂ ಆಹ್ವಾನಿಸಿ
ಮುಂದಿನ ಸಭೆಗೆ, ಮೆಸ್ಕಾಂ, ಅರಣ್ಯ, ಆರೋಗ್ಯ, ಕಂದಾಯ, ಪೊಲೀಸ್ ಮೊದಲಾದ ಅಧಿಕಾರಿಗಳನ್ನೂ ಬರಮಾಡಿಕೊಳ್ಳಬೇಕು ಎಂದು ಇಕ್ಬಾಲ್ ಕರೀಂ ಸೂಚಿಸಿದರು.