ಚನ್ನರಾಯಪಟ್ಟಣ: ಜನ ಸಾಮಾನ್ಯರು ಸಾರಿಗೆ ಸಂಸ್ಥೆ ಬಸ್‌ನಲ್ಲಿ ಹೆಚ್ಚು ಪ್ರಯಾಣ ಮಾಡುವುದರಿಂದ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನಕೂಲವಾಗುವಂತೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ಚನ್ನರಾಯಪಟ್ಟಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಚನ್ನರಾಯಪಟ್ಟಣ ಆರ್ಥಿಕವಾಗಿ ಬೆಳೆದಿರುವುದರಿಂದ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಆದಾಯ ಹೆಚ್ಚಾಗುವಂತೆ ನೋಡಿಕೊಳ್ಳಬೇಕಾಗಿದೆ. ಬಸ್ ನಿಲ್ದಾಣದಲ್ಲಿ ಜಾಗವಿರುವುದರಿಂದ ಕೆಳಗಿನ ಹಂತದಲ್ಲಿ ವಾಹನದ ನಿಲ್ದಾಣ ಕಲ್ಪಿಸಿ ಮೇಲಂತಸ್ತಿನಲ್ಲಿ ಕಟ್ಟಗಳನ್ನು ನಿರ್ಮಿಸಿ ವಾಣಿಜ್ಯ ಮಳಿಗೆ ನಿರ್ಮಿಸಲಾಗುದು ಎಂದರು.
ತಾಲೂಕಿನಿಂದ ಮುಂಬೈಗೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಪ್ರಯಾಣಿಕರು ಕೋರಿದರು. ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರೆ ಹೆಚ್ಚಿನ ಬಸ್ ಓಡಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ 40 ವೋಲ್ವೋ ಬಸ್‌ಗಳೂ ಕೂಡ ಪಟ್ಟಣದ ಹೊರ ವರ್ತುಲದ ರಸ್ತೆಯಲ್ಲಿ ಚಲಿಸುತ್ತಿವೆ. ಬೈಪಾಸ್ ರಸ್ತೆಗೆ ತೆರಳಿ ವೋಲ್ವೋ ಬಸ್ ಹತ್ತಬೇಕಾಗಿರುವ ಸಮಸ್ಯೆಯನ್ನು ಸಾರ್ವಜನಿಕರು ತಿಳಿಸಿದರು. ಆ ಎಲ್ಲಾ ಬಸ್‌ಗಳನ್ನು ಪಟ್ಟಣದಲ್ಲಿಯೇ ಓಡಿಸುವಂತೆ ಸಚಿವರು ಸೂಚಿಸಿದರು.
ಬೇಬಿ ಕೇರ್: ಬಸ್ ನಿಲ್ದಾಣಗಳಲ್ಲಿ ಮಹಿಳೆಯರು ಮಕ್ಕಳಿಗೆ ಎದೆ ಹಾಲುಣಿಸಲು ಪ್ರತ್ಯೇಕ ಕೊಠಡಿ ನಿರ್ಮಿಸಲಾಗುತ್ತದೆ. ದೂರದ ಪ್ರಯಾಣ ಮಾಡುವ ಬಸ್ ಪ್ರಯಾಣಿಕರಿಗೆ ಮಧ್ಯಂತರದಲ್ಲಿ ಉಪಹಾರಕ್ಕೆ ನಿಲ್ಲಿಸುವ ಹೋಟೆಲ್‌ಗಳಲ್ಲಿನ ಆಹಾರದ ಗುಣಮಟ್ಟ ಕಡಿಮೆ, ಸ್ವತ್ಛತೆ ಇರುವುದಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸರ್ಕಾರದ ವತಿಯಿಂದಲೇ ಹೋಟೆಲ್‌ಗಳನ್ನು ತೆರೆಯುವ ಯೋಜನೆಯಿದೆ ಎಂದರು.
ಆರ್‌ಟಿಒ ಕಚೇರಿಗಳಲ್ಲಿ ದÇÉಾಳಿಗಳ ಕಾಟ ತಪ್ಪಿಸಲಾಗುವುದು. ಈಗಾಗಲೇ 2000 ಬಸ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಕೆಎಸ್‌ಆರ್‌ಟಿಸಿ ನೌಕರರ ಕ್ಷೇಮಾಭಿವೃದ್ಧಿ ಕೂಡ ಮುಖ್ಯವಾಗಿದು,ª ಸಾರಿಗೆ ಸಂಸ್ಥೆ ಸುಧಾರಣೆ ಯಾಗಬೇಕಿದೆ ಎಂದು ಹೇಳಿದರು.
ಈ ವೇಳೆ ವ್ಯವಸ್ಥಾಪಕ ನಿರ್ದೇಶಕ ಉಮಾಶಂಕರ್, ವಿಭಾಗೀಯ ನಿಯಂತ್ರಣಾಧಿಕಾರಿ ಯಶವಂತ್, ಘಟಕ ವ್ಯವಸ್ಥಾಪಕ ನಾಗರಾಜಪ್ಪ, ತಹಶೀಲ್ದಾರ್ ಸೋಮಶೇಖರ್, ಪುರಸಭೆ ಮುಖ್ಯಾಧಿಕಾರಿ ಬಸವರಾಜು ಇತರರು ಉಪಸ್ಥಿತರಿದ್ದರು.