“ಪಿಯುಸಿ ಬಳಿಕ ಮುಂದೇನು’ ಎಂಬ ವಿಷಯವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ತಮ್ಮ ಪ್ರಶ್ನೆ, ಗೊಂದಲಗಳನ್ನು ಪರಿಣತರ ಬಳಿ ಕೇಳಿ ಬಗೆಹರಿಸಿಕೊಂಡರು.
Advertisement
2002ರಲ್ಲಿ ವಿಜ್ಞಾನ ವಿಷಯಕ್ಕೆ ಬೇಡಿಕೆ ಇತ್ತು. 2008 ರ ಬಳಿಕ ವಾಣಿಜ್ಯ ಕೋರ್ಸ್‌ಗಳು ಜನಪ್ರಿಯತೆ ಪಡೆದಿವೆ. ಪ್ರಸ್ತುತ ಕಾಲಘಟ್ಟದಲ್ಲಿ ವಾಣಿಜ್ಯ ಪದವಿ ಶಿಕ್ಷಣದಲ್ಲಿ ಅನೇಕ ವಿಭಾಗಗಳು ಬಂದಿವೆ. ಅನೇಕ ಹೊಸ ವಿಷಯಗಳು ಬರುತ್ತಿವೆ. ಆಯ್ಕೆ ಮಾಡಿಕೊಳ್ಳುವಾಗ ಇದನ್ನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು. ಇತರರ ಅನುಕರಣೆ ಬದಲು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಯಶಸ್ವಿಯಾಗಬಹುದು.
ಬಿ.ಕಾಂ, ಬಿ.ಕಾಂ. ಆನರ್ಸ್, ಎಂ.ಕಾಂ., ಬಿಬಿಎಂ, ಎಂಬಿಎ, ಬಿಸಿಎ, ಸಿಎ, ಐಸಿಡಬ್ಲ್ಯೂ ಎ, ಸಿಐಎಂಎ, ಎಸಿಸಿಎ, ಸಿಪಿಎ, ಸಿಐಎಂಎ, ಬಿ.ಎಡ್, ಎಂಎಡ್ ಹೀಗೆ ಅನೇಕ ಕೋರ್ಸ್‌ಗಳಿವೆ. ಇವುಗಳ ಶಿಕ್ಷಣ ಸ್ವರೂಪ, ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳು ಸ್ಪಷ್ಟ ಮಾಹಿತಿ ಪಡೆದು ಆಯ್ಕೆ ಮಾಡಿಕೊಳ್ಳಬೇಕು. ಅವಕಾಶಗಳು
ವಾಣಿಜ್ಯ ಪದವೀಧರರು, ಸ್ನಾತಕೋತ್ತರ ಪದವೀಧರರಿಗೆ ಮುಖ್ಯವಾಗಿ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಇರುವ ಕ್ಷೇತ್ರಗಳಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ. ಆಕೌಂಟೆಂಟ್, ಆರ್ಥಿಕ ಸಲಹೆಗಾರ, ಮರ್ಚಂಟ್ ಬ್ಯಾಂಕಿಂಗ್, ಇಂಟರಲ್ ಆಡಿಟ್, ಕಂಪೆನಿ ಸೆಕ್ರೆಟರಿ, ಶಿಕ್ಷಣ , ಹೊಟೇಲ್ ಮ್ಯಾನೇಜ್‌ಮೆಂಟ್, ಚಾರ್ಟರ್ಡ್ ಅಕೌಂಟೆಂಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳಿವೆ.
Related Articles
ಉದ್ಯೋಗಾವಕಾಶ ವಿಸ್ತರಣೆ
ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿರುವ ಜಿಎಸ್‌ಟಿಯಿಂದ ವಾಣಿಜ್ಯ ಕ್ಷೇತ್ರದಲ್ಲಿ ಚಾರ್ಟರ್ಡ್ ಆಕೌಂಟೆಂಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಿಎ ಶಿಕ್ಷಣಕ್ಕೂ ಆದ್ಯತೆ ಹೆಚ್ಚಾಗತೊಡಗಿದೆ. ಪಿಯುಸಿ ಕಾಮರ್ಸ್ ಶಿಕ್ಷಣ ಪೂರ್ಣಗೊಂಡ ಬಳಿಕ ಎಂಟ್ರೆನ್ಸ್ ಪರೀಕ್ಷೆ ಬರೆಯಬಹುದು. ಸಿಎ ಶಿಕ್ಷಣ ಪಡೆದವರಿಗೆ ವಿದೇಶದಲ್ಲೂ ಹೆಚ್ಚಿನ ಅವಕಾಶಗಳಿವೆ.
Advertisement
- ಸುಧೀರ್ ಎಸ್. ಶೆಣೈಚಾರ್ಟರ್ಡ್ ಅಕೌಂಟೆಂಟ್ ಹಾಗೂ ಮಾಹೆ ಅತಿಥಿ ಉಪನ್ಯಾಸಕ