Advertisement

ವಾಣಿಜ್ಯ ಕಟ್ಟಡಗಳಿಗೂ ಬೇಕ, ವಾಸ್ತು ಶಿಸ್ತು…?

03:03 PM Jan 15, 2018 | |

ಇಂದು ಇಡೀ ಜಗತ್ತು ಕಿರಿದಾಗಿ ಕುಗ್ಗಿದಂತೆ ಅನಿಸುತ್ತಿದೆ. ವಿಶ್ವದ ಯಾವ ಮೂಲೆಯೂ ದೂರವಾಗಿ ಉಳಿದಿಲ್ಲ. ಮನಸ್ಸೂ ಮುದುಡಿದೆ. ವಿಶ್ವಾಸ ಹಾಗೂ ಮೌಲ್ಯಗಳು ಕೂಡ ಕುಗ್ಗಿವೆ. ಜಗದ ಭಾಷೆಯಲ್ಲಿ ಓಡು, ಓಡು, ಓಡು ಎನ್ನುವ ಶಬ್ದಗಳು ಕೇಳಿಸುತ್ತಲೇ ಇರುತ್ತವೆ. ಜೊತೆಗೆ ಹಣದ ಕುರಿತು ಹಪಾಹಪಿ ಕೂಡ ತೀವ್ರವಾಗಿದೆ. ಹಿಂದೆಯೂ ದುಡ್ಡೇ ದೊಡ್ಡಪ್ಪ ಎಂಬ ಮಾತು ರೂಢಿಯಲ್ಲಿತ್ತು. ಇಂದು ದುಡ್ಡೇ ಎಲ್ಲವೂ, ಹೀಗಿರುವಾಗ ಜಾಗತೀಕರಣದ ಈ ಸಂದರ್ಭದಲ್ಲಿ ವಾಣಿಜ್ಯೀಕರಣವೇ ಪ್ರಧಾನವಾದುದು. ನೀವು ಯಾವುದನ್ನೇ ಪುಕ್ಕಟ್ಟೆಯಾಗಿ ಕೊಟ್ಟರೆ, ಕೊಟ್ಟಿದ್ದು ಎಷ್ಟೇ ಒಳ್ಳೆಯದಿದ್ದರೂ, ಪುಕ್ಕಟ್ಟೆಯಾಗಿ ಬಂದಿದ್ದನ್ನು ಅನುಮಾನಿಸುವವರೇ ಜಾಸ್ತಿ. ಬೆಲೆ ನಿಗದಿ ಪಡಿಸಿದಾಗ ” ನೋಡಿ ಎಂಥ ದುರಾಸೆ ಇವರಿಗೆ ಎಂಬು ತಾತ್ಸಾರದ ಮಾತು. ಇದು ಬದಲಾದ ಮನುಷ್ಯ ಅಸ್ಥಿರತೆಗೆ ಒಂದು ಉದಾಹರಣೆ. ಕಡಿತದ ಮಾರಾಟಕ್ಕೆ ಮುಗಿ ಬೀಳುತ್ತಾರೆ. 

Advertisement

 ಪ್ರತಿ ಮನುಷ್ಯನಿಗೂ ಕುಟುಂಬದ ಬಗೆಗೆ ಗಮನ ಕೊಡಲಾಗದ ಪರಿಸ್ಥಿತಿ. ಹೆಣ್ಣು ಮಕ್ಕಳೂ ದುಡಿಯಬೇಕಾಗಿದ್ದು ಅನಿವಾರ್ಯ. ಮಕ್ಕಳ ಬಗೆಗಿನ ಗಮನ ಹೇಗೆ ಸಾಧ್ಯ ಎಂಬುದಕ್ಕೆ ಉತ್ತರಗಳಿಲ್ಲ. ಇದೇನೇ ಇರಲಿ ಹೊರಗೆ ದುಡಿಯ ಬೇಕಾದ ವಾಣಿಜ್ಯ ಸಂಬಂಧೀ ಕಟ್ಟಗಳಿಗೂ ಸೂಕ್ತವಾದ ವಾಸ್ತು ಶಿಸ್ತು ಒಳಗೊಂಡರೇ ಹೆಚ್ಚಿನ ಯಶ್ಶಸ್ಸಿಗೆ ಅವಕಾಶ ಒದಗಿಬರುತ್ತದೆ. ಕೆಲಸದ ಸ್ಥಳದ ಶಕ್ತಿ ಮೂಲಗಳು ಒಂದು ಶಿಸ್ತಿನ ಆವರಣದಲ್ಲಿ ಅಚ್ಚುಕಟ್ಟಾಗಿ ಹೊಂದಿಕೊಂಡಿರಬೇಕು. ವಾಸ್ತು ಶಾಸ್ತ್ರದಲ್ಲಿನ ವಿವಿಧ ವ್ಯಾಖ್ಯೆಗಳು ಅಲೌಕಿಕವಾದ ಸಿದ್ಧಿಯೊಂದು ಕೈಗೂಡುವ ಹಾಗೆ ವಾಣಿಜ್ಯದ ಸಂಬಂಧವಾಗಿ ಅನೇಕ ಕೊಂಡಿಗಳನ್ನು ಯಜಮಾನ, ಗ್ರಾಹಕ ಹಾಗೂ ಕೆಲಸಗಾರರ ನಡುವೆ ಬೆಸೆದು ಕೊಡುತ್ತದೆ. ಮೊದಲನೆಯದಾಗಿ ಎಲ್ಲಿ ವಾಣಿಜ್ಯ ಕ್ರಿಯೆ ಅನುಷ್ಠಾನದಲ್ಲಿದೆಯೋ ಆ ಕಟ್ಟಡ, ಆ ಕಚೇರಿ ಮೂಲಭೂತವಾಗಿ ಕೆಲವು ವಾಸ್ತು ಶಿಸ್ತುಗಳನ್ನು ಅಳವಡಿಸಿಕೊಳ್ಳಲೇಬೇಕು. ಕಡ್ಡದ ಬಾಗಿಲುಗಳು, ದ್ವಾರ, ಶೌಚಗೃಹಗಳು, ಊಟದ, ತಿಂಡಿಯ ಬಗೆಗಿನ ತಂಗು ಸ್ಥಳ, ವಿಲೇವಾರಿಗಾಗಿನ ಮೂಲ ಘಟಕಗಳ ಸಂಗ್ರಹಣಾಸ್ಥಳ, ಆಖೈರಾದ ಪೂರ್ಣಮಟ್ಟದಲ್ಲಿ ತಯಾರಾದ ವಸ್ತುಗಳ ಮಾರಾಟ, ಹಂಚಿಕೆಗಳ ಕುರಿತು ಪೂರ್ವಭಾವಿಯಾದ ಮಾತುಕತೆಯ ಸ್ಥಳ, ವಹಿವಾಟುಗಳ ಲೆಕ್ಕ ಪತ್ರಗಳ ಸ್ಥಳ, ಕಚ್ಚಾ ಮಾಲಿನ ಗೋಡಾನ್‌, ಸಂಗ್ರಹ ಕೊಠಡಿ, ಸಂಕೀರ್ಣವಾದ ವಾಹನಗಳು, ವಿದ್ಯುತ್‌, ಉರುವಲ ಮುಂತಾದದ್ದು ಬಳಕೆಯಾಗುವ ಸ್ಥಳ, ತಯಾರಿಕಾ ಸ್ಥಳದ ಚೌಕಟ್ಟುಗಳು, ಧನ ವಿಲೇವಾರಿ, ಸಂಗ್ರಹ ಕೋಶಿಕೆ, ಭದ್ರತಾ ಕೊಠಡಿ, ಸಿಬ್ಬಂದಿಗಳ ತಂಗುದಾಣ, ಸೆಕ್ಯುರಿಟಿ ವ್ಯವಸ್ಥೆ ಇತ್ಯಾದಿ, ಇತ್ಯಾದಿಗಳೆಲ್ಲ ಒಂದು ಶಿಸ್ತಿನಲ್ಲಿ ಸ್ಥಿರಗೊಳ್ಳಬೇಕು.

ಪಿರಮಿಡ್‌ಗಳು ಆಧುನಿಕವಾದ ಕಲ್ಪನೆಯಾಗಿದೆ. ವಸತಿಯ ಮನೆಯನ್ನೂ ಹಿಡಿದು, ಆಫೀಸು, ವಾಣಿಜ್ಯ ಸಂಬಂಧೀ ಸಂಕೀರ್ಣಗಳು ಪಿರಮಿಡ್‌ನ‌  ಸಕಾರಾತ್ಮಕ ಉದ್ದಗಲಗಳಲ್ಲಿ ಬಲ ಪಡೆಯಬೇಕು. ಕನ್ನಡಿಗಳು, ಕರೆ ಗಂಟೆ, ಇತರ ಕರೆಗಾಗಿನ ಕಿರು ಉಪಕರಣಗಳು, ವಾಣಿಜ್ಯ ಸಂಕೀರ್ಣ ಹೊಂದಿರಲೇಬೇಕಾದ ನವಗ್ರಹ ಶಕ್ತಿಯ ಮೂಲ ಗಠಕಗಳು ನವರತ್ನಗಳ ರೂಪದಲ್ಲಿ ಅಥವಾ ಇತರ ಬೆಲೆ ಬಾಳುವ ರತ್ನದ ಕಲ್ಲುಗಳಲ್ಲಿ ಸಾರ್ಥಕತೆ ಪಡೆಯುವಂತಿರಬೇಕು. ಪೂರ್ಣ ಮಟ್ಟದ ಧಾತುಗಳು ಹೇಗೆ ವಿನಿಯೋಗಿಸಲ್ಪಟ್ಟಿವೆ, ಕಬ್ಬಿಣದಂಥ ಅರಿಷ್ಟಗಳನ್ನು ತಾಮ್ರ, ಹಿತ್ತಾಳೆ, ಕಂಚುಗಳು ಹೇಗೆ ನಿಷ್ಕ್ರಿಯ ಗೊಳಿಸಬಲ್ಲವು, ಸ್ಟೀಲ್‌, ಅಲ್ಯುಮಿನಿಯಂ, ಆಭ್ರಕ, ಪೋಲಿಫೈಬರ್‌ಗಳು ಹೇಗೆ ಮಿಶ್ರಗೊಂಡಿವೆ ಎಂಬಿತ್ಯಾದಿ ವಿಚಾರಗಳು ಒಂದು ಆರೋಗ್ಯಪೂರ್ಣ ಅನುಪಾತವನ್ನು ಹೊಂದಿರಬೇಕು. ಬಣ್ಣಗಳು, ಶ್ರೀ ಚಕ್ರ, ಸ್ವಸ್ತಿಕ್‌, ಗಣೇಶನ ಮಂಡಲ, ನಾಗ ಸ್ವರೂಪ ಅಂಕುಡೊಂಕಾದ ರೇಖೆಗಳು, ಹೂಗಳು, ಪರಿಮಳಗಳು, ಕೆಲವು ಶಾಂತಿ ಮಂತ್ರಗಳ ನಿಧಾನಗತಿಯ ಮಂದ್ರ ಸಂಗೀತದ ಅಲೆಗಳು ವಾಣಿಜ್ಯದ ಬಗೆಗೆ, ಕೆಲಸದ ಕಚೇರಿಯನ್ನು ಸಕಾರಾತ್ಮಕ ಹಿಡಿತಕ್ಕೆ ಒಗ್ಗಿಸಿಕೊಳ್ಳುವಂತಾಗಬೇಕು. 

 ಆಧುನಿಕ ಜಗತ್ತಿನಲ್ಲಿ ಎಲ್ಲವನ್ನೂ ಹೊಸದಾಗಿಸುವುದು ಸರಿ ಅಲ್ಲ. ಆದರೆ ಹಳೆ ಬೇರಿನ ದಾಢತೆಗೆ ಹೊಸ ಚಿಗುರು ನಳನಳಿಸಬೇಕು. ಇದಕ್ಕಾಗಿ ಗೂಢ, ನಿಗೂಢವಾದ ದೈವೀಕ ವಾಸ್ತು ಹೆಚ್ಚಿನ ರೀತಿಯಲ್ಲಿ ಪರಿಶೋಭಿಸಬೇಕು. 

ಅನಂತಶಾಸ್ತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next